state news
ರಾಯಚೂರು(ಫೆ.27): 2023 ರ ಚುನಾವಣೆ ಇನ್ನೇನು ಸನೀಹದಲ್ಲಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಗಳು ಕೂಡ ಬಲು ಜೋರಾಗಿದೆ, ಜೊತೆಗೆ ನಾಯಕರೂ ಕೂಡ ತಮ್ಮ ಪಕ್ಷದ ಪರವಾಗಿ ಜನರ ಜೊತೆ ಬೆರೆತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳು ಅತ್ಯಂತ ಚುರುಕಿನಿಂದ ಚುನಾವಣಾ ತಂತ್ರಗಳಲ್ಲಿ ಬಿಝಿಯಾಗಿದ್ಧಾರೆ.
ನಾವು ಸಾಮಾನ್ಯವಾಗಿ ಹೇಳೋ ಹರಕೆ, ನಮ್ಮ ಫ್ಯಾಮಿಲಿಗೆ ಇರುತ್ತೆ, ಅಥವಾ ನಮ್ಗೆ ಹರಕೆ ಹೇಳ್ಕೋತೀವಿ.. ಒಂದು ಕೆಲಸ ಆಗ್ಬೇಕಾದ್ರೆ ಕುರಿ, ಕೋಳಿ ಹೀಗೆ ಬೇರೆ ಬೇರೆ ಹರಕೆ ಕೊಡೋದನ್ನು ನಾವು ನೋಡಿರ್ತೀವಿ. ಅದ್ರಲ್ಲೂ ಈಗಿನ ಟ್ರೆಂಡ್ ಗೆ ಬಂದ್ರೆ ಸಿನಿಮಾ ನಟರಿಗೆ ಹರಕೆ ಅವರ ಫ್ಯಾನ್ಸ್ ಹರಕೆ ಹೇಳೋದನ್ನು ನಾವು ನೋಡಿರ್ತೀವಿ..ಆದ್ರೆ ಈ ಊರಲ್ಲಿ ಇದೀಗ ಪೊಲಿಟಿಕಲ್ ಲೀಡರ್ಸ್ ಗೆ ಹರಕೆ ಹೇಳೋದು ಟ್ರೆಂಡ್ ಆಗ್ಬಿಡ್ಡಿದೆ ಅಂದ್ರೆ ಖಂಡಿತಾ ನೀವು ನಂಬಲೇ ಬೇಕು.
ಇನ್ನೇನು ಚುನಾವಣೆ ಹತ್ರ ಬರ್ತಾ ಇರೋ ಈ ಟೈಮ್ ನಲ್ಲಿ ರಾಜಕೀಯ ವ್ಯಕ್ತಿಗಳಂತೂ ಭರ್ಜರಿಯಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲೇ ಫುಲ್ ಬಿಜಿಯಾಗಿದ್ದು, ರಾಯಚೂರಿನ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಇವರಿಗಿರುವ ಅಭಿಮಾನಿಗಳು ಇಲ್ಲಿನ ಜಾತ್ರೆಯ ವೇಳೆ ಇಲ್ಲಿನ ಮುಂದಿನ ಎಂಎಲ್ ಎ ಇವರೇ ಎಂದು ಬರೆದು ರಥಕ್ಕೆ ಎಸೆಯುವುದೇ ಇಲ್ಲಿನ ನಾಯಕರಿಗೆ ಕೆಲಸವಾಗ್ಬಿಟ್ಟಿದೆ. ಇನ್ನೇನು ಏಪ್ರಿಲ್, ಮೇ ತಿಂಗಳಲ್ಲಿ ಜಾತ್ರೆ ನಡೆಯೋ ಟೈಮ್, ಹೀಗಾಗಿ ಜಾತ್ರೆಯಲ್ಲಿ ತಮ್ಮ ನೆಚ್ಚಿನ ಶಾಸಕರ ಗೆಲುವಿಗೆ ಹರಕೆ ಕಟ್ಟಿಕೊಂಡಿದ್ದಾರೆ.
ಚುನಾವಣೆ ಹತ್ತಿರ ಬರ್ತಾ ಇದ್ದಂತೆ, ಎಲ್ಲೆಡೆ ರಾಜಕೀಯ ಚಟುವಟಿಕೆಗಳು ಅತ್ಯಂತ ಬಿರುಸಿನಿಂದ ಸಾಗ್ತಾ ಇವೆ. ಸದ್ಯಕ್ಕಂತೂ ಅಭ್ಯರ್ಥಿಗಳ ಪ್ರಚಾರದ್ದೇ ಹಾವಳಿ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ಖಾತೆಗಳು, ಹತ್ತಾರು ಪೋಸ್ಟರ್ ಗಳದ್ದೇ ಕಾರುಬಾರು. ಇನ್ನು ಇದ್ರ ಜೊತೆಗೆ ಡಬ್ಬಿಂಗ್ ಹಾಡುಗಳ ಹಾವಳಿ ಕೂಡ ಜಾಸ್ತಿಯಾಗ್ಬಿಟ್ಟಿದೆ. ಕಲವು ಸಿನಿಮಾ ಹಾಡುಗಳನ್ನು ತಮ್ಮ ನಾಯಕನಿಗೆ ಎಡಿಟ್ ಮಾಡ್ಕೊಂಡು, ಹಾಡಿ, ಹೊಗಳಿ, ಸೆಂಟಿಮೆಂಟ್ ಡೈಲಾಗ್ ಗಳಿಂದ ಜನರ ಮನಸೆಳೆಯೋಕೆ ಟ್ರೈ ಮಾಡ್ತಾ ಇದ್ದಾರೆ.
ಚುನಾವಣೆ ಸಮಯ ಬಂತೆಂದರೆ ಇಂತಹ ಪ್ರಚಾರಕಾರ್ಯಗಳು ಎಲ್ಲಾ ಕಡೆ ನಡೀತಾನೆ ಇರ್ತಾವೆ. ಎಲೆಕ್ಷನ್ ಅಂದ್ರೆ ಎಷ್ಟು ಸೀರಿಯಸ್ ಮ್ಯಾಟರ್ ಆಗುತ್ತೋ ಅಷ್ಟೇ ಕೆಲವೊಮ್ಮೆ ಸ್ವಾರಸ್ಯಕರ ಸಂಗತಿಯೂ ಆಗುತ್ತೆ..ಕೆಲವು ಕ್ಷೇತ್ರಗಳಲ್ಲಿ ಈಗಾಗಲೇ ಅದ್ಧೂರಿಯಾಗಿ ಮತ ಭೇಟೆ ನಡೀತಾ ಇದ್ದು, ರಾಯಚೂರಿನಲ್ಲಿ ಕೂಡ ಬಿಜೆಪಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ ಅವರ ಅಭಿಮಾನಿ ಬಳಗ ಬಾಲೆಹಣ್ಣಿನ ಹರಕೆ ಕಟ್ಟಿಕೊಂಡು, ದೇವರ ಆಶೀರ್ವಾದ ಪಡೆಯೋಕೆ ಮುಂದಾಗಿದ್ದಾರೆ.
224 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಮತ್ತೆ ಅತಂತ್ರನಾ.? ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023




