Friday, April 18, 2025

Latest Posts

ಆರ್ಡರ್ ಮಾಡಿದ ಇಷ್ಟದ ಫುಡ್ ಸೇವಿಸದೇ ಹೊಟೇಲ್‌ನಲ್ಲೇ ಕೊನೆಯುಸಿರೆಳೆದ ವ್ಯಕ್ತಿ

- Advertisement -

Madhya Pradesh News: ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಡನ್ ಆಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಇಂದು ನಮ್ಮೊಂದಿಗಿದ್ದ ಜೀವ, ಮರುಕ್ಷಣ ನಮ್ಮನ್ನು ಬಿಟ್ಟು ಹೋಗಿರುವ ಸುಮಾರು ಉದಾಹರಣೆಗಳಿದೆ.

ಅದೇ ರೀತಿಯ ಒಂದು ಘಟನೆ ನಡೆದಿದ್ದು, ಆ ವೀಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ. ಅಪ್ಪ- ಅಮ್ಮ, ಮಗ, ಮಗಳು ಸೇರಿ ಹೊಟೇಲ್‌ ಒಂದಕ್ಕೆ ಆಗಮಿಸಿದ್ದು, ಅಲ್ಲಿ ಅಪ್ಪ ತನ್ನಿಷ್ಟದ ಫುಡ್ ಆರ್ಡರ್ ಕೊಟ್ಟಿದ್ದು, ಫುಡ್ ಟೇಬಲ್‌ಗೆ ಬಂದು ತಲುಪುವ ಹೊತ್ತಿಗೆ, ಹಾರ್ಟ್‌ ಅಟ್ಯಾಕ್ ಆಗಿ, ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಘಟನೆ ನಡೆದಿದ್ದು ಕಳೆದ ವರ್ಷ ಡಿಸೆಂಬರ್ನಲ್ಲಿ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ. ಇಲ್ಲಿನ ಹೊಟೇಲ್‌ ಒಂದಕ್ಕೆ, ಅಪ್ಪ ಅಮ್ಮ, ಮಗ ಮತ್ತು ಮಗಳು ಊಟಕ್ಕಾಗಿ ಬಂದಿದ್ದಾರೆ. ಊಟ ಆರ್ಡರ್ ಮಾಡಿದ್ದಾರೆ. ಆಹಾರ ಟೇಬಲ್‌ ಮೇಲೆ ತಂದಿಡಲಾಗಿದೆ. ಆದರೆ, ಅದನ್ನು ಎಲ್ಲರೂ ಸೇರಿ ಸೇವಿಸುವ ಮುನ್ನವೇ, ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ.

ಅಲ್ಲೇ ಇದ್ದ ಕೆಲವರ ಸಹಾಯ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ, ತಂದೆ ಅದಾಗಲೇ ಸಾವನ್ನಪ್ಪಿದ್ದರು. ಖುಷಿ ಖುಷಿಯಾಗಿ ಸಮಯ ಕಳೆಯಲು ಬಂದಿದ್ದ ಕುಟುಂಬಸ್ಥರು, ಊಹಿಸಲು ಸಾಧ್ಯವಾಗದೇ ಇರುವ ರೀತಿ ದುಃಖತಪ್ತರಾಗಿ ಮನೆಗೆ ಮರಳಿದ್ದಾರೆ.

 

- Advertisement -

Latest Posts

Don't Miss