Wednesday, September 24, 2025

Latest Posts

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳಿಸುವುದೇ ಪ್ಲಾನ್?

- Advertisement -

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಆರೋಪಕ್ಕೆ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಂಟ್ರಿ ಬಳಿಕ ಬಿಗ್‌ ಟ್ವಿಸ್ಟ್‌ ಸಿಕ್ಕಿತ್ತು. ನೂರಾರು ಶವಗಳನ್ನು ಹೂತಿದ್ದಾಗಿ ಚಿನ್ನಯ್ಯ ಹೇಳಿದ್ದ. ಆದ್ರೆ, ಆತ ಹೇಳಿದ್ದ ಜಾಗಗಳಲ್ಲಿ ಅಗೆದಾಗ ಅಸ್ಥಿಪಂಜರಗಳ ಸರಿಯಾದ ಸಾಕ್ಷಿ ಸಿಕ್ಕಿರಲಿಲ್ಲ. ಎಸ್‌ಐಟಿ ತೀವ್ರ ವಿಚಾರಣೆ ಬಳಿಕ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದು, ಇದೀಗ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾ ಸರದಿ.

ಮಾಧ್ಯಮವೊಂದರ ಎದುರು ಮಲ್ಲಿಕಾ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾರೆ. ಚಿನ್ನಯ್ಯ ಹೇಳಿದ್ದೆಲ್ಲಾ ಸುಳ್ಳಂತೆ. ಅತ್ಯಾಚಾರ, ಕೊಲೆ ಎಲ್ಲವೂ ಸುಳ್ಳು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವ್ರನ್ನ, ಒಂದು ದಿನವಾದ್ರೂ ಜೈಲಿಗೆ ಹಾಕಿಸುವುದು, ಬುರುಡೆ ಗ್ಯಾಂಗಿನ ಉದ್ದೇಶವಾಗಿತ್ತಂತೆ. ದೇವಸ್ಥಾನಕ್ಕೆ ಕಪ್ಪು ಮಸಿ ಬಳಿಯುವುದಕ್ಕೆ, ಸೌಜನ್ಯ ಕೇಸ್‌ ಒಂದು ನೆಪ. ಮೊದಲು ಸೌಜನ್ಯ ತಾಯಿ ಕುಸುಮಾವತಿಯ ಬ್ರೈನ್‌ ಮ್ಯಾಪಿಂಗ್‌ ಮಾಡ್ಬೇಕು.

ಅತ್ಯಾಚಾರ, ಕೊಲೆ ಎಲ್ಲವೂ ಷಡ್ಯಂತ್ರ. ಸೌಜನ್ಯ ತಾಯಿ, ಮಾವ ವಿಠಲ ಗೌಡ, ಗಿರೀಶ್‌ ಮಟ್ಟಣ್ಣವರ್‌, ತಿಮರೋಡಿಗೆ ಏನಾದ್ರೂ ತೊಂದರೆ ಇಲ್ಲ. ಆದ್ರೆ, ನನ್ನ ಗಂಡನಿಗೆ ಅಪಾಯವಾದ್ರೆ ನಾನು ಸುಮ್ಮನಿರಲ್ಲ. ನಾನು ಸಾಯುತ್ತೇನೆಂದು ಮಲ್ಲಿಕಾ ಕಣ್ಣೀರಾಕಿದ್ದಾರೆ. ಎಲ್ಲರೂ ಸೇರಿ ತನ್ನ ಗಂಡನಿಗೆ ಸುಳ್ಳು ಹೇಳಿಕೊಟ್ಟು, ಹೀಗೆಲ್ಲಾ ಮಾಡಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ಸೌಜನ್ಯ ಕೇಸಿಗೂ, ನನ್ನ ಗಂಡನಿಗೂ ಯಾವುದೇ ಸಂಬಂಧ ಇಲ್ಲ. ಸೌಜನ್ಯ ಕೊಲೆಯಾದಾಗ ನಾನು, ಚಿನ್ನಯ್ಯ ಧರ್ಮಸ್ಥಳದಲ್ಲಿ ಇರಲೇ ಇಲ್ಲ. ಸೌಜನ್ಯ ಕೊಲೆ ನೋಡಿದ್ದೇನೆ ಎಂಬ ಚಿನ್ನಯ್ಯನ ಹೇಳಿಕೆ ಸುಳ್ಳು. ಸೌಜನ್ಯ ಸಾವಿನ ದಿನ ನಾವು ಊಟಿಯಲ್ಲಿ, ನಮ್ಮ ಮಗುವಿನ ಜೊತೆ ಇದ್ದೆವು. ನಾನು ಹೇಳಿದಂತೆ ಕೇಳಬೇಕೆಂದು, ಸೌಜನ್ಯ ಪರ ಹೋರಾಟಗಾರ ಗಿರೀಶ್‌ ಮಟ್ಟಣ್ಣವರ್‌ ಬೆದರಿಸಿದ್ದಾನೆ. ನನ್ನ ಗಂಡನಿಗೆ ಬ್ಲಾಕ್‌ಮೇಲ್‌ ಮಾಡಿ, ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿ ಕೂಡಿ ಹಾಕಿದ್ದರು. ಮೂತ್ರ ಮಾಡೋಕೂ ಅವಕಾಶ ನೀಡದಂತೆ, ಕಿರುಕುಳ ಕೊಟ್ಟಿದ್ದಾರೆ. ಕಿಟಕಿಯಿಂದ ಮೂತ್ರ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು.

ಅವರೊಬ್ಬ ದೊಡ್ಡ ಕ್ರಿಮಿನಲ್‌. ಸೌಜನ್ಯ ವಿಚಾರಕ್ಕೆ ನಮ್ಮನ್ನು, ತಿಮರೋಡಿ ಮನೆಗೆ ಕರೆಸಿಕೊಂಡಿದ್ದ. ಸೌಜನ್ಯ ಶವವನ್ನು ಎತ್ತಿಕೊಂಡು ಹೋಗಿದ್ದೆ ಅಂತಾ ಹೇಳುವಂತೆ, ಚಿನ್ನಯ್ಯನಿಗೆ ಸೂಚಿಸಲಾಗಿತ್ತು ಎಂದು ಮಲ್ಲಿಕಾ ಗಂಭೀರ ಆರೋಪ

- Advertisement -

Latest Posts

Don't Miss