Friday, April 18, 2025

Latest Posts

ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರುತ್ತೆವೆ ; ಡಿ ಕೆ ಶಿವಕುಮಾರ

- Advertisement -

www.karnatakatv.net :ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರುತ್ತೆವೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಸಿಎಂ ಬೋಮ್ಮಾಯಿ ಹುಬ್ಬಳ್ಳಿಗೆ ಬಂದಾಗ ಯಾವ ರೀತಿ ಸ್ವಾಗತ ಸಿಕ್ಕಿದೆ..?ಅದು ಪಾಲಿಕೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ಬಿಜೆಪಿ ಮೀಷನ್ 60 ಆದ್ರೂ ಅನ್ನಲಿ, ಬೆಂಗಳೂರಿನಲ್ಲಿ ಮೀಷನ್ 150 ಆದ್ರು ಎನ್ನಲಿ ನಾವೇ ಆಡಳಿತ ನಡೆಸೋದು.

ಸ್ವಂತ ಬಲದ ಮೇಲೆ ಮೂರು ಪಾಲಿಕೆಯಲ್ಲಿ ಅಧಿಕಾರಕ್ಕೆರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ವಿವಿ ವಿವಾದಾತ್ಮಕ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿವಿ ವಿಸಿ ಎಲ್ಲೂ ಓಡಾಡಬಾರದು ಅಂತ ಹೇಳ್ತಾರೆ. ಆದೇಶ ವಾಪಸ್ ಪಡಿತ್ತಾರೆ. ಹೆಣ್ಣು ಮಕ್ಕಳು ಓಡಾಡಬಾರದು ಅಂದ್ರೆ ಸರ್ಕಾರ ಯಾಕೆ ಇರ್ಬೇಕು, ವಿಶ್ವವಿದ್ಯಾಲಯದಲ್ಲೆ ಈ ರೀತಿ ಆದ್ರೆ ಹೇಗೆ‌, ಆದೇಶ ವಾಪಸ್ ಪಡೆಯೋದಲ್ಲ, ಆ ವಿಸಿಯನ್ನ ಕೆಲಸದಿಂದ ತೆಗೆದುಹಾಕಬೇಕು. ಉಮೇಶ್ ಕತ್ತಿ ಹೇಳಿಕೆನೂ ಕೇಳಿದ್ದಿನಿ, ಗೃಹ ಮಂತ್ರಿಗಳ ಹೇಳಿಕೆನೂ ಕೇಳಿದ್ದಿನಿ. ನಮ್ಮ ಗೃಹ ಮಂತ್ರಿಗಳ ಮೇಲೆಯೆ ಅದ್ಯಾವುದೋ ಕೇಸ್ ಇದೆಯಂತೆ ನಮ್ಮ ಮಾಜಿ ಮಿನಿಸ್ಟರ್ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಇರಲಿ ಇಂತವರು ಗೃಹ ಮಂತ್ರಿಗಳಾಗಿ ಇರಬೇಕು, ರಾಜ್ಯದ ಆಡಳಿತ ಬಹಳ ಚೆನ್ನಾಗಿ ನಡೆಯುತ್ತೆ‌ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss