www.karnatakatv.net : ಬೆಳಗಾವಿ : ನಿಪ್ಪಾಣಿ ತಾಲೂಕಿನಲ್ಲಿ ಬೀಡಿಯಲ್ಲಿರುವ ನ್ಯಾಯಬೆಲೆ ಅಂಗಡಿ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ಸೆಕ್ರೆಟರಿ ಬೀಡಿ ಮಜದೂರ ಸಂಘ ಪ್ರತಿಭಟನೆ.
ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕಳೆದ 1975ರಲ್ಲಿ ನೋಂದಣಿಯಾಗಿರುವ ನಿಪ್ಪಾಣಿ ತಾಲೂಕಿನ ಬೀಡಿ ಮಜದೂರನಲ್ಲಿನ ನ್ಯಾಯ ಬೆಲೆ ಅಂಗಡಿಗೆ ಅಧ್ಯಕ್ಷರಾಗಿ ಇಮಾಮಸಾಬ್ ಗೌಂಡಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಅಂಗಡಿಯನ್ನು ತಮ್ಮ ಸೆಕ್ರೆಟರಿ ಹಾಗೂ ಸದಸ್ಯರೊಂದಿಗೆ ಇಲ್ಲಿ ಬರುವ ಆಹಾರ ಧಾನ್ಯಗಳನ್ನು ಯಾರಿಗೂ ತೊಂದರೆಯಾಗದಂತೆ ಹಂಚಿಕೆ ಮಾಡಿಕೊಂಡು ಬಂದಿದ್ದರು. ಅವರು ನಿಧನರಾರ ಬಳಿಕ ಅವರ ಪತ್ನಿ ಲಕ್ಷ್ಮೀಬಾಯಿ ಸುತಾರ ಅವರು ಸಹ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯ ಮುಂದೆ ದೊಡ್ಡ ಗುಂಡಿ ಬಿದ್ದಿದ್ದು, ಅದನ್ನು ಸರಿ ಪಡಿಸಬೇಕೆಂದು ಮನವಿಯಲ್ಲಿ.
ಈ ಸಂದರ್ಭದಲ್ಲಿ ಅಶೋಕ ಪಾಟೀಲ ವಕೀಲರು ಮಾತನಾಡಿ 40 ವರ್ಷಗಳಿಂದ ರೇಷನ ನೀಡುತ್ತಾ ಬಂದಿದ್ದಾರೆ ಇವಾಗ ಬೇರೆ ವ್ಯಕ್ತಿಗಳ ಕೈವಾಡ ಇರುವುದರಿಂದ ಇದರ ಕುರಿತು ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು.
208 ರೇಷನ್ ಅಂಗಡಿ ಮುಂದೆ ದೊಡ್ಡದಾದ ಚರಂಡಿ ಇರುವುದರಿಂದ ಚರಂಡಿ ಒಡೆದು ಹೋಗಿದೆ ಇದರಿಂದ ಅಲ್ಲಿ ಬರುವ ಜನರು ಬಿದ್ದಿರುವ ಘಟನೆಗಳು ನಡೆದಿವೆ ಹೀಗಾಗಿ ಚರಂಡಿ ಸರಿಪಡಿಸಬೇಕು.ಮತ್ತು ರೇಷನ ಅಂಗಡಿ ಇದ್ದರೂ ಸಹ ರೇಷನ್ ಬರುತ್ತಿಲ್ಲ ಯಾರಿಗೊ ಹೋಗುತ್ತಿವೆ ಹಾಗಾಗಿ ತಣಿಕೆ ಮುಖಾಂತರ ನ್ಯಾಯ ಒದಗಿಸಿಕೊಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೇಣುಕಾ ಪಾಟೀಲ, ಕಲ್ಲಪ್ಪ ಕಾಂಬಳೆ, ಸುಜಾತಾ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




