Friday, August 29, 2025

Latest Posts

ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಗಾಯಕ

- Advertisement -

Movie News: ಕಲಾವಿದರು ಹೇಗೇಗೋ ಸಾವನ್ನಪ್ಪುವುದನ್ನು ನಾವು ಕೇಳಿದ್ದೇವೆ. ಎಷ್ಟೋ ಕಲಾವಿದರು ಸ್ಟೇಜ್‌ನಲ್ಲಿ ಪರ್ಫಾಮೆನ್ಸ್ ಕೊಡುತ್ತಲೇ ಸಾವನ್ನಪ್ಪಿದ್ದಾರೆ. ಅದರಲ್ಲೂ ಹಾಡುಗಾರರು, ಯಕ್ಷಗಾನ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟೇಜ್‌ ಮೇಲೆಯೇ ಸಾವನ್ನಪ್ಪಿದ್ದಾರೆ. ಆದರೆ ಇಲ್ಲೋರ್ವ ಗಾಯಕ ಸಾವನ್ನಪ್ಪಿದ್ದು, ಹಾರ್ಟ್ ಅಟ್ಯಾಕ್‌ನಿಂದಲೋ, ಅಥವಾ ಬೇರೆ ಯಾವುದೋ ಕಾರಣದಿಂದಲೋ ಅಲ್ಲ. ಬದಲಾಗಿ, ಅಭಿಮಾನಿಯನ್ನು ಅಪ್ಪಿಕೊಂಡ ತಕ್ಷಣ ಸಾವನ್ನಪ್ಪಿದ್ದಾರೆ.

ಬ್ರೆಜಿಲ್ ಗಾಯಕ ಐರೀಸ್ ಸಸಕಿ ಈ ರೀತಿ ಸಾವನ್ನಪ್ಪಿದ್ದು, ಅವರು ಅಪ್ಪಿಕೊಂಡಿದ್ದ ಅಭಿಮಾನಿ ಒದ್ದೆಯಾಗಿದ್ದರು. ಒದ್ದೆಯಾಗಿದ್ದ ಅಭಿಮಾನಿಯನ್ನು ಮುಟ್ಟುವಾಗ ಪಕ್ಕದಲ್ಲೇ ಇದ್ದ ಕರೆಂಟ್ ಕೇಬಲ್ ತಾಗಿ, ಐರಿಸ್ ಸಾವನ್ನಪ್ಪಿದ್ದಾರೆ. ವಿಷಾದದ ವಿಷಯ ಅಂದ್ರೆ 35 ವರ್ಷದ ಐರಿಸ್ ವಿವಾಹವಾಗಿ ಒಂದು ವರ್ಷ ಕೂಡ ಆಗಿರಲಿಲ್ಲ. ಆಗಲೇ ಸಾವನ್ನಪ್ಪಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಐರಿಸ್ ಅತ್ತೆಯೂ ಪಾಲ್ಗೊಂಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯಕ್ರಮ ನಿಗದಿಯಾಗಿದ್ದ ವೇಳೆಯಲ್ಲಿ ಮಾಡದೇ, ಸ್ವಲ್ಪ ಹೊತ್ತು ಮುಂದೂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅಭಿಮಾನಿ ಬಂದು ತಬ್ಬಿಕೊಂಡಿದ್ದು. ಆದರೆ ಅಭಿಮಾನಿ ಏಕೆ ಒದ್ದೆಯಾಗಿದ್ದ ಎಂಬುದು ತಿಳಿದುಬಂದಿಲ್ಲ. ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಬಗ್ಗೆ ಪರಿಶೀಲನೆ ಮಾಡಿ, ತನಿಖೆ ನಡೆಸಿದ್ದಾರೆ.

- Advertisement -

Latest Posts

Don't Miss