Monday, October 6, 2025

Latest Posts

ಹೆಂಡ್ತಿ ತವರಿಗೆ ಹೋಗಿದ್ದಕ್ಕೆ ಅತ್ತೆಗೆ ಚಟ್ಟ ಕಟ್ಟಿದ ಅಳಿಯ

- Advertisement -

ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ, ತಾಯಿಯೊಬ್ಬರು ಹೆಣವಾಗಿದ್ದಾರೆ. ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಈ ಭೀಕರ ಘಟನೆ ನಡೆದಿದೆ. 32 ವರ್ಷದ ಅಳಿಯ ರಸುಲ್ಲಾ, 58 ವರ್ಷದ ಅತ್ತೆ ಫೈರೋಜಾರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ರಸುಲ್ಲಾ ಮತ್ತು ಶೆಮಿನಾ ಭಾನು, 10 ವರ್ಷಗಳ ಹಿಂದೆ ಮದುವೆಯಾಗಿದ್ರು. ಮದುವೆಯಾಗಿ ದಶಕ ಕಳೆದರೂ ಮಕ್ಕಳು ಇರ್ಲಿಲ್ಲ. ಇದರಿಂದ ರಸುಲ್ಲಾ ತನ್ನ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗ್ತಿತ್ತಂತೆ.

ಹೀಗಾಗಿ ಮಗಳಿಗೆ ಅಳಿಯ ನೀಡುತ್ತಿದ್ದ ಕಿರುಕುಳವನ್ನು ಸಹಿಸಲಾರದೆ, ಫೈರೋಜಾ, ಸೆಪ್ಟೆಂಬರ್‌ 11ರಂದು ಬೆಳಗ್ಗೆ ತಮ್ಮ ಮಗಳನ್ನು, ಬೆಟ್ಟದಪುರದಿಂದ ರಾಮನಾಥಪುರಕ್ಕೆ ಕರೆದುಕೊಂಡು ಬಂದಿದ್ರು. ಇದರಿಂದ ಕೋಪಗೊಂಡ ಅಳಿಯ, ಸಂಜೆಯೇ ಮನೆಗೆ ಎಂಟ್ರಿ ಕೊಟ್ಟಿದ್ದ. ಅತ್ತೆ ಜೊತೆ ಗಲಾಟೆ ಮಾಡಿದ್ದಾನೆ. ಈ ವೇಳೆ ಕೋಪಗೊಂಡು ಅತ್ತೆಯನ್ನೇ ಕೊಲೆ ಮಾಡಿದ್ದಾನೆ.

ಅತ್ತೆ ಕೊಲೆ ಮಾಡಿ ಪತ್ನಿ ಶೆಮಿನಾ ಮೇಲೂ ಹಲ್ಲೆ ಮಾಡಿದ್ದಾನೆ. ಬಳಿಕ ರಸುಲ್ಲಾ ಎಸ್ಕೇಪ್ ಆಗಿದ್ದಾನೆ. ಸದ್ಯ, ಗಾಯಾಳು ಪತ್ನಿ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss