Sunday, December 22, 2024

Latest Posts

`ಜೇಮ್ಸ್’ ಚಿತ್ರದ ಹಾಡು, ಡಬ್ಬಿಂಗ್ ಅಷ್ಟೇ ಬಾಕಿ- ಅಪ್ಪು ಪಾತ್ರಕ್ಕೆ ದನಿಯಾಗಲಿದ್ದಾರಾ ಶಿವಣ್ಣ..?

- Advertisement -

www.karnatakatv.net: ಪುನೀತ್ ರಾಜ್ ಕುಮಾರ್ ಅವರು ಬಹುಬೇಡಿಕೆಯ ನಟ ಆಗಿದ್ದರು. ಅವರ ಕಾಲ್ಶೀಟ್ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ನಿಧನರಾಗುವುದಕ್ಕೂ ಮುನ್ನ ಅಪ್ಪು ಹಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ `ಜೇಮ್ಸ್’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಕಳೆದುಕೊಂಡು ಸ್ಯಾಂಡಲ್ ವುಡ್ ಬಡವಾಗಿದೆ. ತಮ್ಮ ಮುಂದಿನ ಚಿತ್ರ ರಿಲೀಸ್ ಆಗೋದಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಆಘಾತ ಮೂಡಿಸಿದೆ. ಹೌದು, ಅಪ್ಪು ನಟನೆಯ ಬಹುನಿರೀಕ್ಷಿತ ಜೇಮ್ಸ್ ಚಿತ್ರ ಅತಿ ಶೀಘ್ರದಲ್ಲಿ ರಿಲೀಸ್ ಆಗಬೇಕಿತ್ತು. ಇನ್ನು ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದು ಹೋಗಿತ್ತು. ಆದ್ರೆ ಚಿತ್ರದ ಒಂದೇ ಒಂದು ಸಾಂಗ್ ಮಾತ್ರ ಚಿತ್ರೀಕರಣ ಮಾಡಬೇಕಿತ್ತು. ಹೀಗಾಗಿ ನವೆಂಬರ್ 8ರಿಂದ ಮತ್ತೆ ಹಾಡಿನ ಚಿತ್ರೀಕರಣ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು. ಜೊತೆಗೆ ಅಪ್ಪು ಪಾತ್ರದ ಡಬ್ಬಿಂಗ್ ಕೆಲಸ ಕೂಡ ಬಾಕಿ ಇತ್ತು. ಎಲ್ಲಾ ಅಂದುಕೊoಡoತೆ ನಡೆದಿದ್ದರೆ ಕೆಲ ದಿನಗಳಲ್ಲೇ ಅಪ್ಪು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ರು. ಆದ್ರೆ ಅಷ್ಟರಲ್ಲೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಇದು ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಆದ್ರೆ ಈ ನೋವಿನಲ್ಲಿರೋ ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ತಂಡ ಸಮಾಧಾನವಾಗೋ ಸುದ್ದಿ ನೀಡಿದೆ. ಅದೇನಪ್ಪಾ ಅಂದ್ರೆ, ಜೇಮ್ಸ್ ಚಿತ್ರ ಖಂಡಿತಾ ರಿಲೀಸ್ ಆಗಲಿದೆ ಅಂತ ನಿರ್ದೇಶಕ ಚೇತನ್ ತಿಳಿಸಿದ್ದಾರೆ.

ಇನ್ನು ಅಪ್ಪು ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡೋ ಮೂಲಕ ಡಬ್ಬಿಂಗ್ ಪೂರ್ಣಗೊಳಿಸೋ ಸಾಧ್ಯತೆಯಿದೆ. ಆದ್ರೆ ಅದೇನೇ ಇರಲಿ ಅತ್ಯುತ್ತಮ ನಟನನ್ನು ಕಳೆದುಕೊಂಡ ಚಿತ್ರರಂಗ ಮತ್ತೊಬ್ಬ ಪುನೀತ್ ರನ್ನು ಪಡೆಯೋದು ಅಸಾಧ್ಯ.

- Advertisement -

Latest Posts

Don't Miss