Wednesday, October 29, 2025

Latest Posts

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರಲ್ವಾ?

- Advertisement -

ಇನ್ನೊಂದು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಏನಾಗಲಿದೆ ಅನ್ನೋ ಬಗ್ಗೆ, ರಾಜ್ಯ ಬಿಜೆಪಿಗರು ಭಾರೀ ಭವಿಷ್ಯ ನುಡಿದಿದ್ದಾರೆ. ಇದೇ ರೀತಿ ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರವೂ ಇರುವುದಿಲ್ಲ. 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಕೂಡ ಇರಲ್ಲ ಎಂದು, ಮಾಜಿ ಸಿಎಂ, ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಫೈಟ್ ಜೋರಾಗಿದೆ. 2.5 ವರ್ಷ ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟೆ ಬಂದಿದ್ದಾರೆ. ಆದ್ರೀಗ ತಾನು 5 ವರ್ಷ ಸಿಎಂ ಆಗ್ತಿನಿ. ಬದಲಾವಣೆ ಆದ್ರೆ ತಾನು ಹೇಳಿದವರು ಆಗಬೇಕು. ಡಿಕೆಶಿ ಸಿಎಂ ಆಗಬಾರದೆಂದು ಇದೆಲ್ಲಾ ತಂತ್ರ ನಡೀತಿದೆ‌‌. ಸಿದ್ದರಾಮಯ್ಯ ತಂತ್ರ-ಪ್ರತಿತಂತ್ರದ ನಡುವೆ ಆಡಳಿತ ಹಾಳಾಗಿದೆ. ಇವರ ಹೈಡ್ರಾಮಾಕ್ಕೆ ಆಡಳಿತ ಕುಸಿಯುತ್ತಿದೆ. ಇದೇ ರೀತಿ ಮುಂದುವರೆದ್ರೆ ಸರ್ಕಾರ ಬೀಳುತ್ತೆ.

ಹಲವರು ವರ್ಷದಿಂದ RSS ಪಥ ಸಂಚಲನ ನಡೆದು ಬಂದಿದೆ. ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಎಲ್ಲವನ್ನೂ ರದ್ದು ಮಾಡಲಾಗಲ್ಲ. ಸಂವಿಧಾನ ಕೊಟ್ಟ ಸ್ವಾತಂತ್ರ್ಯದಡಿಯೇ ಪಥ ಸಂಚಲನ ನಡೆಯುತ್ತದೆ. ಇಂದು ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ದೊಡ್ಡ ಸೋಲು ಉಂಟಾಗಿದೆ. ಇದೆಲ್ಲವೂ ಸರ್ಕಾರಕ್ಕೆ ಏತಕ್ಕೆ ಬೇಕಿತ್ತು? ಸಂಘ ಚಟುವಟಿಕೆಯಲ್ಲಿ ಭಾಗಿಯಾದರೆಂದು ನೌಕರರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ.

ಈ ಹಿಂದೆ 1966ರಲ್ಲಿ ಸರ್ಕಾರಿ ನೌಕರರು ಸಂಘಕ್ಕೆ ಹೋಗಬಾರದೆಂದು ನೆಹರೂ ಬ್ಯಾನ್ ಮಾಡಿದ್ದರು. ಆದರೆ, 2024ರಲ್ಲಿ ಕೇಂದ್ರ ಸರ್ಕಾರ ನಿರ್ಬಂಧವನ್ನು ರದ್ದು ಮಾಡಿದೆ. ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಯಲ್ಲಿ ಭಾಗಿಯಾಗಲು ಸಂಪೂರ್ಣ ಹಕ್ಕಿದೆ. ಆರ್‌ಎಸ್ಎಸ್ ರಾಜಕೀಯ ಪಕ್ಷವಲ್ಲ. ಸಮುದಾಯ ಸಂಘಟಿಸುವ ದೇಶಭಕ್ತಿಯಯ ಸಂಘಟನೆ. ಆರ್‌ಎಸ್‌ಎಸ್‌ ಟೀಕೆ ಮುಂದುವರೆಸಿದ್ದೇ ಆದ್ರೆ, ರಾಜಕೀಯ ಅಂತ್ಯಕಾಲ ಎಂದು ತಿಳಿದುಕೊಳ್ಳಿ. ಜನರ ಮನಸ್ಸನ್ನು ಡೈವರ್ಟ್ ಮಾಡಲು ಅವರೇ ಒಂದೊಂದು ವಿಚಾರ ಹೊರಬಿಡುತ್ತಿದ್ದಾರೆ ಎಂದು ಜಗದೀಶ್‌ ಶೆಟ್ಟರ್‌ ಟೀಕಿಸಿದ್ದಾರೆ.

- Advertisement -

Latest Posts

Don't Miss