Thursday, November 13, 2025

Latest Posts

ಅಧಿಕಾರಿಗಳಿಗೆ ಜಿ. ಪರಮೇಶ್ವರ್‌ ಫುಲ್‌ ಕ್ಲಾಸ್

- Advertisement -

ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ರಿಲೀಸ್​​ ವಿಚಾರವನ್ನು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಕಾರಾಗೃಹ ಇಲಾಖೆ ಕಚೇರಿಯಲ್ಲಿ ಗೃಹ ಸಚಿವ ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಡಿಜಿಪಿ ಎಂ.ಎ. ಸಲೀಂ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ ಶರತ್ ಚಂದ್ರ, ಗೃಹ ಇಲಾಖೆ ಕಾರ್ಯದರ್ಶಿ ತುಷಾರ್ ಗಿರಿನಾಥ್​ ಭಾಗಿಯಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಏನೇನಾಗ್ತಿದೆ ಎಂಬ ಬಗ್ಗೆ, ಸಂಪೂರ್ಣ ವರದಿ ಕೇಳಿರುವ ಪರಮೇಶ್ವರ್, ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ.

ರಾಜ್ಯದ ಎಲ್ಲಾ ಜೈಲುಗಳ ಸೂಪರಿಟೆಂಡೆಂಟ್‌ಗಳು, ಅಧಿಕಾರಿಗಳು, ಜೈಲು ಆಧೀಕ್ಷಕರುಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಜೈಲುಗಳಲ್ಲಿರುವ ಕೈದಿಗಳ ಅಂಕಿ ಅಂಶಗಳನ್ನ ಸಚಿವರು ಪಡೆದಿದ್ದು, ಸಭೆಯಲ್ಲಿ ಫೋಟೋಗಳನ್ನ ತೋರಿಸಿ ಜೈಲು ಅಧಿಕಾರಿಗಳನ್ನು, ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಗೃಹ ಸಚಿವರ ಪ್ರಶ್ನೆಗೆ ಎದ್ದು ನಿಂತು ಜೈಲು ಅಧಿಕಾರಿಗಳು ಉತ್ತರ ನೀಡಿದ್ದಾರೆ.

ಅನೇಕ ವಿಚಾರಗಳು ನಮ್ಮ ಗಮನಕ್ಕೂ ಬಂದಿದೆ. ಮಾಧ್ಯಮಗಳಲ್ಲೂ ಕೆಲವು ವಿಚಾರಗಳನ್ನು ಹೇಳಿದ್ದೀರಾ. ಅದೆಲ್ಲವನ್ನು ಪರಿಶೀಲನೆ ಮಾಡಿ ಮುಂದೆ ಏನು ಮಾಡಬೇಕು ಅನ್ನೋದನ್ನ ತೀರ್ಮಾನಿಸುತ್ತೇವೆ. ನಾವು ಕೆಲವರನ್ನ ಸಸ್ಪೆಂಡ್ ಮಾಡಿದ್ದು, ಅವರ ಮೇಲೆ ಎಫ್ ಐ ಆರ್ ಮಾಡಿ ಕ್ರಮ ತೆಗೆದುಕೊಂಡಿದ್ದೇವೆ. ಇಷ್ಟೆಲ್ಲಾ ಆದ್ಮೇಲೆ ಅದನ್ನ ಜೈಲು ಅಂತ ಹೇಗೆ ಕರೀತಾರೆ ಎಂದು ಪರಮೇಶ್ವರ್​ ಗರಂ ಆಗಿದ್ದಾರೆ.

ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತಾಡಿರುವ ಗೃಹ ಸಚಿವ ಪರಮೇಶ್ವರ್, ರಾಜ್ಯದ ಜೈಲುಗಳಲ್ಲಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ನನಗೆ ಅನೇಕ ಮಾಹಿತಿಗಳು ಬಂದಿವೆ ಅದೆಲ್ಲವನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದಾಗಿ ಪರಮೇಶ್ವರ್‌ ಹೇಳಿದ್ದಾರೆ.

- Advertisement -

Latest Posts

Don't Miss