Tuesday, September 23, 2025

Latest Posts

3 ʻAʼ ಗ್ರೇಡ್ ಉಗ್ರರ ಸಂಹಾರದ ಕಥೆಯೇ ರೋಚಕ!

- Advertisement -

ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಸಂಹಾರ ಆಗಿದೆ. ಮಾಸ್ಟರ್ ಮೈಂಡ್‌ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಆಪರೇಷನ್ ಮಹಾದೇವ ಕಾರ್ಯಾಚರಣೆ ಕಂಪ್ಲೀಟ್ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಮಹತ್ವದ ಹೇಳಿಕೆ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ʻAʼ ಗ್ರೇಡ್ ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿವೆ. ಈ ಕಾರ್ಯಾಚರಣೆ ಭಾರತ ಸರ್ಕಾರದ ‘ಆಪರೇಷನ್ ಮಹಾದೇವ್’ ಅಡಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಸುಲೇಮಾನ್ ಅಲಿಯಾಸ್ ಫೈಜಲ್ ಜಾಟ್, ಅಫ್ಘಾನ್ ಮತ್ತು ಜಿಬ್ರಾನ್‌ ಅನ್ನು ಎನ್‌ಕೌಂಟರ್‌ ಮಾಡಲಾಗಿದೆ. ಕಾರ್ಯಾಚರಣೆಯ ನಂತರ ಜಮೀನಿನಲ್ಲಿ ಸಿಕ್ಕ ರೈಫಲ್‌ಗಳು ಹಾಗೂ ಗುಂಡುಗಳು ಪಹಲ್ಗಾಮ್ ದಾಳಿಯಲ್ಲಿ ಬಳಸಲಾಗಿದ್ದವು ಎಂದು ದೃಢಪಟ್ಟಿದೆ.

ಚಂಡೀಗಢ FSLನಲ್ಲಿ ಗುಂಡುಗಳ ತಾಂತ್ರಿಕ ವಿಶ್ಲೇಷಣೆಯ ಮೂಲಕ ಈ ಮಾಹಿತಿ ಪತ್ತೆಯಾಗಿದೆ. ಉಗ್ರರ ಬಳಿಯಲ್ಲಿ ಪಾಕಿಸ್ತಾನದ ವೋಟರ್ ಐಡಿ ಕಾರ್ಡ್‌ಗಳು ಸಿಕ್ಕಿವೆ ಎಂಬುದೂ ಮಹತ್ವದ ವಿಚಾರವಾಗಿದೆ.

ವಿಶೇಷವಾಗಿ, ಘಟನಾ ಸ್ಥಳದಲ್ಲಿ ಪತ್ತೆಯಾದ ಚಾಕ್ಲೆಟ್ ಪಾಕಿಸ್ತಾನದಲ್ಲಿ ತಯಾರಾದದ್ದು ಎಂಬ ವಿಷಯವನ್ನೂ ಶಾ ಬಹಿರಂಗಪಡಿಸಿದ್ದಾರೆ. ನನ್ನ ಬಳಿ ಬ್ಯಾಲಿಸ್ಟಿಕ್ ವರದಿ ಇದೆ, ಇದನ್ನು ಆರು ತಜ್ಞರು ಇಂದು ಬೆಳಿಗ್ಗೆ 4.46 ಕ್ಕೆ ವಿಡೀಯೋ ಕರೆಯಲ್ಲಿ ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆಗಳು ಭಾರತೀಯ ಸೇನೆ, CRPF ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ ಎಂದಿದ್ದಾರೆ.

- Advertisement -

Latest Posts

Don't Miss