- Advertisement -
www.karnatakatv.net : ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ಆಯ್ಕೆಯ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಅವರು ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಸಾರ್ವಜನಿಕ ಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವ ಕ್ರಮದಲ್ಲಿ ಹೈಕೋರ್ಟ್ ಗಳ ಅನುಮೋದನೆ ಇಲ್ಲದೆ ಶಾಸಕರು ಅಥವಾ ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಹಿಂದಿನ ತೀರ್ಪಿನಲ್ಲಿ ಬಿಹಾರ ಚುನಾವಣೆಗೆ ಸಂಬಂಧಿಸಿದ್ದು ಅಭ್ಯರ್ಥಿಗಳು ಈ ವಿವರಗಳನ್ನು ಅಪ್ಲೋಡ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು
- Advertisement -