ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ಮಾಡಿದವ ಉಕ್ರೇನ್ ಬೆಂಬಲಿಗ

International News: ಇಂದು ಉಪಹಾರದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೇಲೆ ಓರ್ವ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಟ್ರಂಪ್ ಬದುಕುಳಿದಿದ್ದಾರೆ.

ಗುಂಡಿನ ದಾಳಿ ನಡೆಸಿರುವ 58 ವರ್ಷ ರಿಯಾನ್ ರೌತ್ ಉಕ್ರೇನ್ ಬೆಂಬಲಿಗ ಎನ್ನಲಾಗಿದೆ. ರಷ್ಯಾದ ವಿರುದ್ಧ ಉಕ್ರೇನ್ ಹೋರಾಡುವ ಸಂದರ್ಭದಲ್ಲಿ ಈತ ಕೂಡ, ಯುದ್ಧದಲ್ಲಿ ಭಾಗವಹಿಸಿದ್ದ ಎಂದು ರಿಯಾನ್ ಒಪ್ಪಿಕೊಂಡಿದ್ದಾನೆ. ಈತ ಗನ್‌ಮ್ಯಾನ್ ಆಗಿದ್ದು, ದೂರದಲ್ಲಿ ನಿಂತು ಟ್ರಂಪ್‌ಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ. ಈತನಿಂದ ಸ್ಥಳೀಯ ಪೊಲೀಸರು, ರೈಫಲ್, ಸ್ಕೋಪ್,ಬ್ಯಾಕ್‌ಪ್ಯಾಕ್ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಭಾಷಣ ಮಾಡುವ ವೇಳೆ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು, ಇದರಿಂದ ಟ್ರಂಪ್ ಕಿವಿಗೆ ಗಾಯವಾಗಿತ್ತು. ಅದಾದ ಬಳಿಕ ಮತ್ತೆ ಟ್ರಂಪ್ ವಿರುದ್ಧ ಹತ್ಯೆಯ ಸಂಚು ರೂಪಿಸಲಾಗಿದೆ.

About The Author