Mumbai News: ಮುಂಬೈನಲ್ಲಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಮುಂಬೈ ಮೂಲದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಕರ್ನಾಟಕ ಮೂಲದ ದಾವುದ್ ಎಂಬಾತ ಈ ಯುವತಿಯ ಕೊಲೆ ಮಾಡಿದ್ದು, ಎದೆ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬೀದಿಗೆ ಬಿಸಾಕಿದ್ದಾನೆ. ನಾಯಿಗಳು ಶವವನ್ನು ಎಳೆದಾಡಿದಾಗ, ಸಾವಿನ ಸತ್ಯ ಹೊರಗೆ ಬಂದಿದೆ.
22 ವರ್ಷದ ಯತಶ್ರೀ ಸಾವಿಗೀಡಾದ ಯುವತಿಯಾಗಿದ್ದು, ಮುಂಬೈನಲ್ಲೇ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ಹೆಣವನ್ನುೂ ಬೀದಿ ನಾಯಿಗಳು ರಸ್ತೆಗೆ ಎಳೆದು ತಂದಿತ್ತು. ಇದನ್ನು ಕಂಡ ಜನ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ, ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಸತ್ಯ ಬಯಲಿಗೆ ಬಂದಿದೆ.
ಪೋಷಕರಿಗೆ ವಿಷಯ ಗೊತ್ತಾಗುತ್ತಿದ್ದಂತೆ, ಅವರು ಸ್ಥಳಕ್ಕೆ ಧಾವಿಸಿದ್ದು, ಆ ಯುವತಿಯನ್ನು ಕೊಂದಿದ್ದು, ದಾವುದ್ ಶೇಖ್ ಎಂಬಾತ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. 2019ರಲ್ಲಿ ದಾವುದ್ ಇದೇ ಯುವತಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ. ಬಳಿಕ ರಿಲೀಸ್ ಆಗಿ, ಆತ ತನ್ನೂರಿಗೆ ಹೋಗಿದ್ದ. ಆದರೆ ಕಾಲ್ ದಾಖಲೆಗಳನ್ನು ನೋಡಿದಾಗ, ಈ ಯುವತಿ ಯತಶ್ರೀ, ದಾಾವೂದ್ ಜೊತೆ ಕಾಲ್ ಮಾಡಿ ಹಲವು ಬಾರಿ ಮಾತನಾಡಿದ್ದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಆರೋಪಿ ದಾವುದ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೃತ್ಯ ನಡೆದ ಸಂದರ್ಭದಲ್ಲಿ ದಾವೂದ್ ಸ್ಥಳದಲ್ಲೇ ಇದ್ದ ಎಂದು ಗೊತ್ತಾಗಿದ್ದು, ಆರೋಪಿ ಸಿಕ್ಕ ಬಳಿಕವೇ, ಈ ಕೊಲೆಗೆ ಕಾರಣವೇನು ಎಂದು ತಿಳಿಯಬೇಕಿದೆ.