- Advertisement -
32 ವರ್ಷದ ಬಳಿಕ ಕಾಶ್ಮೀರದಲ್ಲಿ ಹೌಸ್ ಫುಲ್
ವಿರೋಧದ ನಡುವೆಯೂ ಪಠಾಣ್ ಸಿನಿಮಾ ಸಾಕಷ್ಟು ಯಶಸ್ಸು ಕಾಣ್ತಾ ಇದೆ
32 ವರ್ಷಗಳ ಬಳಿಕ ಕಾಶ್ಮೀರದ ಥಿಯೇಟರ್ ಹೌಸ್ ಫುಲ್ ಆಗಿದೆಯಂತೆ. ಈ ಕುರಿತಂತೆ ಐನಾಕ್ಸ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. 32 ವರ್ಷದ ಬಳಿಕ ಕಾಶ್ಮೀರದ ಥಿಯೇಟರ್ ವೊಂದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದೊಂದು ಅದ್ಬುತ ವಿಚಾರ. ಇದನ್ನು ಸಾಧ್ಯ ಮಾಡಿಕೊಟ್ಟ ಪಠಾಣ್ ಸಿನಿಮಾ ಹಾಗೂ ಶಾರುಖ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.
ಬೇಷರಂ ಸಾಂಗ್ ಮೂಲಕ ವಿರೋಧ ತಂದುಕೊಂಡಿತ್ತು ಈ ಸಿನಿಮಾ. ರಿಲೀಸ್ ದಿನವೂ ಪ್ರತಿಭಟನೆ ಮುಂದುವರೆದಿದ್ದವು. ಅಷ್ಟೆ ಅಲ್ಲ ಕೆಲವು ಕಡೆ ಗಲಾಟೆ ಕೂಡ ಆಗಿದ್ದವು. ಇದೆಲ್ಲದರ ನಡುವೆಯೂ 100 ಕೋಟಿಯತ್ತ ಪಠಾಣ್ ಸಿನಿಮಾ ದಾಪುಗಾಲು ಹಾಕ್ತಾ ಇದೆ. ಇನ್ನು ಸಿನಿಮಾ ನೋಡಿದವರೆಲ್ಲ ಸಿನಿಮಾ ಬಗ್ಗೆ ಒಳ್ಳೆಯ ರಿಯಾಕ್ಷನ್ ಕೊಡ್ತಾ ಇದ್ದಾರೆ.
- Advertisement -