ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ನವೆಂಬರ್ ಕ್ರಾಂತಿ ಮಧ್ಯೆ 2028 ಸಿಎಂ ಅಭ್ಯರ್ಥಿ ಬಗ್ಗೆ ಆಗಾಗ್ಗೆ ಮಾತುಗಳು ಕೇಳಿ ಬರ್ತಿವೆ. ಇದೀಗ 2028ಕ್ಕೆ ನಾನೇ ಸಿಎಂ ಆಗೋದು ಅಂತಾ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2028ಕ್ಕೆ ಮುಖ್ಯಮಂತ್ರಿಯಾಗಿ 11 ಜೆಸಿಬಿಗಳನ್ನು ಪೂಜೆ ಮಾಡ್ತೀನಿ. ಸಿಎಂ ಕಚೇರಿ ಒಳಗೆ ಹೋಗ್ತೀನಿ. ಬಿಜೆಪಿಯಲ್ಲಿದ್ರೂ ಹೋಗ್ತೀನಿ. ಇಲ್ಲದಿದ್ರೂ ಹೋಗ್ತೀನಿ ಎಂದು ಹೇಳಿದ್ದಾರೆ.
ದಲಿತ ಮುಖ್ಯಮಂತ್ರಿ ಆಗೋಕೆ ನಮ್ಮದೇನು ಅಭ್ಯಂತರ ಇಲ್ಲ. ವಿರೋಧ ಪಕ್ಷಕ್ಕೇ ವಿರೋಧ ಪಕ್ಷ ನಾನು. ನನ್ನನ್ನು ಹಿಂದೂ ಇಲಿ ಅಂತಾ ಬೇಕಾದ್ರೂ ಕರೀರಿ. ದೇಶದಲ್ಲಿ ನರೇಂದ್ರ ಮೋದಿ ಜನರಿಂದ ಆಯ್ಕೆಯಾದ ನಾಯಕ. ಆಗ ಬಿಜೆಪಿಯಲ್ಲಿದ್ದ ಅರ್ಧಕರ್ಧ ಜನ, ನರೇಂದ್ರ ಮೋದಿಗೆ ವಿರೋಧ ಇದ್ರು. ನರೇಂದ್ರ ಮೋದಿಯವ್ರೇ ಪ್ರಧಾನಿ ಆಗಲಿ ಎಂದು, ದೇಶದಲ್ಲೊಂದು ಸಂಚಲನ ಆಯ್ತು. ಇದನ್ಯಾರು ತಪ್ಪಿಸಲು ಆಗಲೇ ಇಲ್ಲ.
ನರೇಂದ್ರ ಮೋದಿ ಬಳಿಕ ಯೋಗಿ ಆದಿತ್ಯನಾಥ್ ದೇಶದ ಪ್ರಧಾನಿ ಆಗಬೇಕೆಂಬುದು ಜನರ ಭಾವನೆ. ಆಗೆಯೇ ಕರ್ನಾಟಕದಲ್ಲಿ ಈ ಭ್ರಷ್ಟ ಸರ್ಕಾರ ಹೋದ್ಮೇಲೆ, ಯತ್ನಾಳ್ ಮುಖ್ಯಮಂತ್ರಿ ಆಗಬೇಕು ಅನ್ನೋದು ಈ ರಾಜ್ಯದ ಜನರ ಭಾವನೆ. ರಾಜ್ಯದ ಜನರ ಭಾವನೆಯನ್ನು ಹೈಕಮಾಂಡ್ ಒಪ್ಪಿಕೊಳ್ಳಲೇ ಬೇಕು. ಇಲ್ಲವಾದ್ರೆ ಜೆಸಿಬಿ ಪಾರ್ಟಿ ರೆಡಿ ಇದೆ.
ನಾನು ಯಾರ ಸಂಪರ್ಕವನ್ನೂ ಮಾಡಿಲ್ಲ. ಅವರೂ ಕೂಡ ಯಾರೂ ಬಂದಿಲ್ಲ. ಯಾಕಂದ್ರೆ ಅವರಿಗೀಗ ನಮ್ಮ ಅವಶ್ಯಕತೆ ಇಲ್ಲ. 2027ಕ್ಕೆ ನಮ್ಮ ಅವಶ್ಯಕತೆ ಬರುತ್ತದೆ. ನಾಳೆ ಗೋವಾಕ್ಕೆ ಹೊರಟಿದ್ದೇನೆ. ಗೋವಾದಿಂದ ನನಗೆ ಒಂದು ಸಂದೇಶ ಬಂದಿದೆ. 2027ಕ್ಕೆ ನಮ್ಮ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಹೇಳಿದ್ದಾರೆ. ಕರ್ನಾಟಕದ ಜನರು ತುಂಬಾ ಜನರು ಇದ್ದಾರೆ. ಅವರು ಅಪೇಕ್ಷೆ ಪಡುತ್ತಿದ್ದಾರಂತೆ.
ಮದ್ದೂರಿನ ರೀತಿಯೇ ಗೋವಾದವ್ರೂ ಕರೀತಿದ್ದಾರೆ. ಅಲ್ಲಿ ಪರಿವರ್ತನೆ ಆಗ್ತಿದೆ. ಮೊನ್ನೆ ಮಹಾರಾಷ್ಟ್ರಕ್ಕೂ ಹೋಗಿದ್ದೆ. ಗೋವಾ ಚುನಾವಣೆ ಒಳಗೆ ಹೈಕಮಾಂಡ್ ಏನಾದ್ರೂ ನಿರ್ಣಯ ತೆಗೆದುಕೊಳ್ಳುತ್ತಾರೆ. ಇಲ್ಲವಾದ್ರೆ, ನಾನು ಸಿದ್ಧವಾಗಿ ಇಟ್ಟುಕೊಂಡಿದ್ದೇನೆ. ಪಾರ್ಟಿ, ಜೆಸಿಬಿ, ಬೈಲಾ ಎಲ್ಲಾ ಸಿದ್ಧವಾಗಿದೆ ಎಂದು, ಬಿಜೆಪಿ ಹೈಕಮಾಂಡ್‌ಗೆ ವಾರ್ನ್ ಮಾಡಿದ್ದಾರೆ.

