Thursday, May 30, 2024

Latest Posts

ಸಾವಿನ ಮನೆಯಲ್ಲಿ ರಾಜಕೀಯ ಬೇಡ, ನ್ಯಾಯ ಕೊಡಿಸುವುದು ಸರ್ಕಾರದ ಜವಾಬ್ದಾರಿ: ಸುರ್ಜೆವಾಲಾ..

- Advertisement -

Hubli Political News: ಹುಬ್ಬಳ್ಳಿ: ಈ ಮನೆ ಹೊರತುಪಡಿಸಿ ನೀವು ರಾಜಕಾರಣ ಮಾಡಿ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಅಸಮಾಧಾನ ಹೊರಹಾಕಿದರು.

ನೇಹಾ ಹಿರೇಮಠ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು,‌ ಇವತ್ತು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹಾ ಕೇವಲ ನಿರಂಜನ್ ಹಿರೇಮಠ ಪುತ್ರಿ ಅಲ್ಲ . ಇಡೀ ಕರ್ನಾಟಕದ ಪುತ್ರಿ. ನಿರಂಜನ್ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲ ಅವರ ಜೊತೆ ಇರ್ತೇವೆ.‌ ಸಂಪೂರ್ಣ ನ್ಯಾಯಾಲಯ ಕೊಡೋಸೋದು ಸರ್ಕಾರದ ಕರ್ತವ್ಯ ಎಂದರು.

ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು. 90 ದಿನಗಳಲ್ಲಿ ನ್ಯಾಯದನ ಸಿಗಲಿದೆ ಅನ್ನೋ ವಿಶ್ವಾಸವಿದೆ.‌ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು.‌ ಆಕೆಯ ಸಾವಿಗೆ ನ್ಯಾಯಾಲಯ ಸಿಗಬೇಕು. ವಿಶೇಷ ಕೋರ್ಟ್ ಖಂಡಿತಾ ತ್ವರಿತ ನ್ಯಾಯಾಲಯ ನೀಡಲಿದೆ ಎಂದು ಅವರು ಹೇಳಿದರು.

ಗಲ್ಲಿಗಿಂತ ಕಡಿಮೆ ಶಿಕ್ಷೆ ಸಿಗಲ್ಲ.‌ ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕಾರಣ ಮಾಡಬೇಡಿ. ಚುನಾವಣೆ ವೇಳೆ ರಾಜಕೀಕರಣ ಬೇಡ. ಈ ಮನೆ ಹೊರತು ಪಡಿಸಿ ರಾಜಕೀಯ ಮಾಡಿ ಎಂದರು.

ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ. 90 ದಿನಗಳಲ್ಲಿ ಖಂಡಿತಾ ನ್ಯಾಯ ಸಿಗಲಿದೆ ಅನ್ನೋ ಖಾತ್ರಿಯಿದೆ ಎಂದು ಅವರು ಹೇಳಿದರು.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

- Advertisement -

Latest Posts

Don't Miss