ಆತಂಕ ಪಡುವಂತ ಕೋವಿಡ್ ಪರಿಸ್ಥಿತಿ ಇಲ್ಲ, ತಕ್ಷಣ ಕ್ರಮ ಕೈಗೊಳ್ಳಬಹುದಾದ ಸ್ಥಿತಿ ಕಂಡುಬಂದಿಲ್ಲ – ಸಚಿವ ಸುಧಾಕರ್

ಬೆಂಗಳೂರು: ಆರು ವರ್ಷದ ಮೇಲಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಎಲ್ಲಾ ವಯಸ್ಸಿನ ಜನರೂ ಲಸಿಕೆ ಪಡೆಯುವ ಮೂಲಕ ಕೋವಿಡ್ ತಡೆಯಬೇಕು ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಕೋವಿಡ್ ನಿಯಂತ್ರ ಸಭೆ ನಡೆಯಲಿದೆ. ಕೋವಿಡ್ ತಡೆಯುವ ಸಂಬಂಧ ಸಲಹೆ,ಮಾರ್ಗದರ್ಶನ ಕೊಡ್ತಾರೆ ಎಂದರು.

ಸಿಎಂ ಮಂಗಳೂರು ಪ್ರವಾಸ ರದ್ದಾಗಿದೆ. ಹಾಗಾಗಿ ಗೃಹ ಕಛೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲಿದ್ದಾರೆ. ನಾನು ಕೂಡಾ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸುತ್ತೇನೆ. ಕೇಂದ್ರ ಸರ್ಕಾರ ಬಹಳ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಆರು ವರ್ಷದ ಮೇಲಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ತೀರ್ಮಾನ ಮಾಡಲಾಗಿದೆ. ಎಲ್ಲಾ ವಯಸ್ಸಿನ ಜನರೂ ಲಸಿಕೆ ಪಡೆಯುವ ಮೂಲಕ ಕೋವಿಡ್ ತಡೆಯಬೇಕು ಎಂದರು.

ಬೂಸ್ಟರ್ ಡೋಸ್ ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರುಗೂ ಬೂಸ್ಟರ್ ಡೋಸ್ ಪಡೆಯಲು ಅವಕಾಶ ಇದೆ ಎಂದರು.

ಬೇರೆ ದೇಶಗಳ ಸ್ಥಿತಿಗತಿಗಳನ್ನು ಕೇಂದ್ರ ಸರ್ಕಾರ ಅವಲೋಕನ ಮಾಡುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಸ್ಥಿತಿ ಗತಿ ಗಳನ್ನು ಪರಾಮರ್ಶೆ ಮಾಡಬಹುದು. ಇದರಿಂದ ಕೆಲವು ಉಪಯುಕ್ತ ಸೂಚನೆಗಳನ್ನು ಕೊಡಬಹುದು. ಬಹಳ ಆತಂಕ ಪಡಬಹುದಾದ ಪರಿಸ್ಥಿತಿ ಇಲ್ಲ ತಕ್ಷಣ ಕ್ರಮ ಕೈಗೊಳ್ಳಬಹುದಾದ ಸ್ಥಿತಿ ವೈಜ್ಞಾನಿಕ ವಾಗಿ ಕಂಡುಬಂದಿಲ್ಲ. ಇಂದಿನ ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳಲಾಗುವುದೋ ಅದನ್ನು ಆಮೇಲೆ ತಿಳಿಸ್ತೀವಿ ಎಂದರು.

ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದ್ದ ಕೋವಿಡ್ ವಾರಿಯರ್ಸ್ ಅವಧಿಯನ್ನು 18 ತಿಂಗಳವರೆಗೆ ಮುಂದುವರೆಸಿಕೊಂಡು ಹೋಗಿದ್ದೇವೆ. ಕೋವಿಡ್ ಇಲ್ಲದೇ ಇದ್ದ ಕಾರಣ 18 ತಿಂಗಳವರೆಗೆ ಮುಂದುವರೆಸಿದ್ದೆವು. ಆರ್ಥಿಕ ಇಲಾಖೆಗೆ ಪತ್ರ ಬರೆದು ಅವರ ಅವಧಿಯನ್ನು ಇನ್ನೂ 6 ತಿಂಗಳು ಮುಂದುವರೆಸಲು ಕೇಳಿದ್ದೇವೆ ಎಂದು ಹೇಳಿದರು.

About The Author