Hubli News: ಹುಬ್ಬಳ್ಳಿ: ನಾನು ಯಾವತ್ತೂ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಅಂತ ಎಲ್ಲೂ ಹೇಳಿಲ್ಲಾ ಎಂದು ತಮ್ಮ ನಡೆ ವಿರುದ್ಧವೆ ಜಗದೀಶ್ ಶೆಟ್ಟರ್ ಉಲ್ಟಾ ಹೊಡೆದಿದ್ದಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ತೆರಳುವಾಗ ಬಿಜೆಪಿ ನಾಯಕರ ವಿರುದ್ಧ ಜಗದೀಶ್ ಶೆಟ್ಟರ್ ಮಾತನಾಡಿದ್ದರು. ಬಿಜೆಪಿ ಪಕ್ಷ ಕೆಲವರ ಹಿಡಿತದಲ್ಲಿದೆ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದರು. ಆದರೆ ಈಗ ನಾನೇನು ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಅದನ್ನು ಮಾಧ್ಯಮಗಳನ್ನು ಕ್ರಿಯೆಟ್ ಮಾಡಿದ್ದು. ನಾನು ಯಾಕೆ ಧ್ವನಿ ಗೂಡಿಸಬೇಕು. ನಾನು ಈ ಬಗ್ಗೆ ಏನು ಪ್ರತಿಕ್ರಿಯೆ ನೀಡಲ್ಲ.ರಾಜಕೀಯ ಪಕ್ಷದಲ್ಲಿ ಎಲ್ಲವೂ ನೂರಕ್ಕೆ ನೂರರಷ್ಟು ಸರಿಯಿರಲ್ಲಾ. ಇದು ಯಾವ ಪಾರ್ಟಿಯಲ್ಲೂ ಇರಲ್ಲ. ಎಲ್ಲಾ ಪಾರ್ಟಿಯಲ್ಲಿಯೂ ಒಂದಿಷ್ಟು ಸಮಾಧಾನ ಅಸಮಾಧಾನ ಇದ್ದೆ ಇರುತ್ತದೆ. ಎಲ್ಲವೂ ಪರಿಪೂರ್ಣವಾಗಿರಲ್ಲಾ. ಅದು ಪಕ್ಷಕ್ಕೆ ಬಿಟ್ಟ ವಿಚಾರ. ಬಿಜೆಪಿ ಒಳಗೆ ಏನಿದೆ ಅದನ್ನು ಕಾಂಗ್ರೆಸ್ ವಿಚಾರ ಮಾಡೋದು ಬೇಡಾ. ನಿಮ್ಮಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಇದೆ ಅದನ್ನು ನೋಡಿಕೊಳ್ಳಿ ಎಂದು ಶೆಟ್ಟರ್ ಹೇಳಿದ್ದಾರೆ.
ಹೊರಗೆ ಸಿದ್ಧರಾಮಯ್ಯರಿಗೆ ಬೆಂಬಲ ಅಂತಾರೆ. ಒಳಗೊಳಗೆ ಪ್ರತ್ಯೇಕ ಸಭೆ, ಯಾರು ಮುಖ್ಯ ಮಂತ್ರಿಯಾಬೇಕು, ಯಾವ ಶಾಸಕರು ಯಾರ ಜೊತೆಗೆ ಇದ್ದಾರೆ ಅನ್ನೊ ಚರ್ಚೆ ನಡೆಯುತ್ತಿದೆ. ತಮ್ಮ ಪಾರ್ಟಿ ಬಗ್ಗೆ ಕಾಂಗ್ರೆಸ್ ಶಾಸಕರು ಸಾಕಷ್ಟು ಅಸಮಾಧಾನದಿಂದ್ದಾರೆ. ಕಾಂಗ್ರೆಸ್ ಶಾಸಕರಿಗೆ ಜಿಗುಪ್ಸೆ ಆಗಿದೆ. ಪಾಟ್ ಹೋಲ್ ತುಂಬಿಸಲು ಸಹ ರಾಜ್ಯ ಕಾಂಯ ಸರ್ಕಾರದಲ್ಲಿ ಹಣ ಇಲ್ಲ. ನಿಮ್ಮ ಮನೆ ಮೊದಲು ನೀವು ಸರಿ ಮಾಡಿಕೊಳ್ಳಿ. ಬೇರೆಯವರ ಮನೆಗೆ ಬಗ್ಗೆ ಚಿಂತೆ ಬಿಡಿ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.