Sunday, May 19, 2024

Latest Posts

ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಮಗಳು ನೇಹಾ ಕೊಲೆಯಾಗಿದ್ದು, ಆಕೆಯ ಅಂತಿಮ ದರ್ಶನಕ್ಕಾಗಿ ಸಚಿವ ಸಂತೋಷ್ ಲಾಡ್, ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ ಸಂತೋಷ್ ಲಾಡ್, ನೇಹಾ ಹಿರೇಮಠ ಕೊಲೆಯನ್ನು ನಾನು‌ ಖಂಡಿಸುತ್ತೇನೆ. ಈ ರೀತಿ ಘಟನೆ ಆಗಬಾರದು. ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳಲ್ಲ. ಆದರೆ ಮುಂದೆ ಇದಕ್ಕೆ ಒಂದು ಎನಕೌಂಟರ್ ಕಾನೂನು ಬರಲೇಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಂತ ಕೊಲೆಗಳಿಗೆ ಎನಕೌಂಟರ್ ಕಾನೂನು ಬರಲೇಬೇಕು. ಡ್ರಗ್ಸ್ ಬರಲಿಕ್ಕೆ ಸ್ಟೆಟ್ ಸಮಸ್ಯೆ ಅಲ್ಲ.‌ ಈಗ ಆಗಿದ ಘಟನೆಗೆ ಅದಕ್ಕೆ ಹೋಲಿಕೆ ಬೇಡ. ಮುಂದೆ ಕಾನೂನು ಮಾಡಿದರೆ ಇದನ್ನ ಮಾಡುವವರನ್ನ ಹೊಡೆದು ಉರುಳಿಸಬಹುದು. ನಾನು ಬೇರೆಯವರು ಮಾಡಿದ ಆರೋಪಕ್ಕೆ ಲೆಕ್ಕ‌ ಕೊಡಬಹುದು. ಕೆಲವರು ಇದನ್ನ ರಾಜಕೀಯ ಮಾಡಲು ಹೊರಟಿದ್ದಾರೆ. ತನಿಖೆ ಬಗ್ಗೆ ನಾನು ಈಗ ಮಾತಾಡಲ್ಲ. ಲವ್ ಜಹಾದ್ ಎಂದರೆ ಏನು? ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು. ರಾಜಕೀಯ ಉತ್ತರ ಕೊಡೊದು ಈಗ ಸರಿಯಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಆದರೆ ಇದೊಂದು ಆಕಸ್ಮಿಕ ‌ಘಟನೆ ಎಂಬ ಗೃಹ ಸಚಿವರ ಉತ್ತರ ಸರಿ ಇದೆ ಎಂದು ಸಂತೋಷ್ ಸಮರ್ಥನೆ ಮಾಡಿಕೊಂಡರು.

ಹುಬ್ಬಳ್ಳಿ ನೇಹಾ ಹ* ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ ರಿಯಾಕ್ಷನ್

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಹ*ತ್ಯೆ ಪ್ರಕರಣ : ಶಿಕ್ಷಕರ ಪುತ್ರ ಫಯಾಜ್ ಅರೆಸ್ಟ್‌

ನೇಹಾ ಹಿರೇಮಠ ಕೊಲೆಗೆ ಕಾರಣವೇನು?- ಪೊಲೀಸರ ಮುಂದೆ ಆರೋಪಿ ಹೇಳಿದ್ದೇನು..?

- Advertisement -

Latest Posts

Don't Miss