Wednesday, December 11, 2024

Latest Posts

ನನ್ನ ಎದುರು ತಗ್ಗಿ ಬಗ್ಗಿ ಇರಬೇಕು: ಅನುದಾನದ ಬಗ್ಗೆ ಕೇಳಿದ್ದಕ್ಕೆ ತೇಜಸ್ವಿ ಸೂರ್ಯಗೆ ಡಿಕೆಶಿ ಪ್ರತಿಕ್ರಿಯೆ

- Advertisement -

Political News: ನಾಗಸಂದ್ರದಿಂದ ಮಾದಾವರದವರೆಗೂ ಮೆಟ್ರೋ ಸೌಕರ್ಯ ಮುಂದುವರೆದಿದ್ದು, ನಾಳೆಯಿಂದ ಈ ಮಾರ್ಗದ ಮೂಲಕ ಚಲಿಸಬಹುದಾಗಿದೆ. ಹಾಗಾಗಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಮೆಟ್ರೋ ಮಾರ್ಗದ ಪರಿಶೀಲನೆ ನಡೆಸಿದರು.

ಈ ವೇಳೆ ತೇಜಸ್ವಿ ಸೂರ್ಯ ಜಯನಗರವನ್ನು ಬಿಟ್ಟು, ಉಳಿದ ಕ್ಷೇತ್ರಗಳಿಗೆ ಅನುದಾನ ನೀಡಿದ್ದರ ಬಗ್ಗೆ ಪ್ರಶ್ನಿಸಿದ್ದು, ಯಾಕೆ ಹೀಗೆ ಮಾಡಿದ್ದು ಎಂದು ಕಾರಣ ಕೇಳಿದ್ದಾರೆ. ಇದಕ್ಕಕೆ ಉತ್ತರಿಸಿದ ಡಿಕೆಶಿ, ನನ್ನ ಎದುರು ತಗ್ಗಿ ಬಗ್ಗಿ ಇರಬೇಕು. ಎಲ್ಲರ ಬಳಿ ಇದ್ದ ಹಾಗೆ ನನ್ನ ಬಳಿ ಇರಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಬೆಂಗಳೂರು ದಕ್ಷಿಣ ಭಾಗದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಹೇಳಿದ್ದಾರೆ. ಇದರಿಂದ ನಮಗೆ ಬೇಸರವಾಗಿದೆ. ಅವರು ಹೇಳಿದ ಮಾತು ಸತ್ಯ ಮಾಡಿ ತೋರಿಸಲಿ, ಬಳಿಕ ನಾವು ಜಯನಗರಕ್ಕೆ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಪ್ರತೀ ಕ್ಷೇತ್ರದ ರಸ್ತೆ ಕಾಮಗಾಾರಿಗೆ 10 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಆದರೆ ಜಯನಗರಕ್ಕೆ ಮಾತ್ರ ಅನುದಾಾನ ನೀಡಿರಲಿಲ್ಲ. ಈ ಬಗ್ಗೆ ಅಲ್ಲಿನ ಶಾಸಕ ರಾಮಮೂರ್ತಿ, ಇದು ಸೇಡಿನ ರಾಜಕಾರಣ ಎಂದು ಆರೋಪಿಸಿದ್ದರು.

- Advertisement -

Latest Posts

Don't Miss