ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಅವರ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿದ್ದವು. ಆ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ಫೆಬ್ರವರಿ 26ಕ್ಕೆ ಇವರಿಬ್ಬರ ವಿವಾಹ ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ. ಇನ್ನು, ಈಗಾಗಲೇ ವೈರಲ್ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಆಮಂತ್ರಣ ಪತ್ರದಲ್ಲಿ ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ. ವಿಷಯ ಏನಪ್ಪಾ ಅಂದರೆ, ಈ ಅದ್ಧೂರಿ ವಿವಾಹದಲ್ಲಿ ಒಂದಷ್ಟು ಅತಿಥಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೌದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಗೆ ಯಾರೆಲ್ಲ ಗಣ್ಯರು ಅಥವಾ ಗೆಳೆಯರು ಬರುತ್ತಾರೋ, ಅವರ ಮೊಬೈಲ್ ನಿಷೇಧಿಸಲಾಗಿದೆ. ಹೌದು, ವಿವಾಹದ ಫೋಟೋಗಳು ಹೊರಗಡೆ ಬರಬಾರದು ಎಂಬುದನ್ನು ತಡೆಯಲು ಈ ರೂಲ್ಸ್ ತರಲಾಗಿದೆಯಂತೆ.
ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಇವರಿಬ್ಬರ ಮದುವೆ ಫೆ.26ಕ್ಕೆ ಫಿಕ್ಸ್. ಸೆಲಿಬ್ರಿಟೀಸ್ ಮದುವಗಳೆಂದರೆ ಹಾಗೆ. ಮದುವೆ ಅದ್ಧೂರಿಯಾಗಿರುತ್ತೆ. ದೊಡ್ಡ ದೊಡ್ಡ ವ್ಯಕ್ತಿಗಳೇ ಬರುತ್ತಾರೆ. ಅದರೊಂದಿಗೆ ಎಲ್ಲೋ ಒಂದು ಕಡೆ ಫೋಟೋಗಳು ಲೀಕ್ ಆಗಿಬಿಟ್ಟರೆ ಹೇಗೆ ಅನ್ನುವ ಕಾರಣಕ್ಕೆ ಮೊಬೈಲ್‌ಗಳನ್ನೇ ನಿಷೇಧಿಸಲಾಗಿದೆ. ಈಗಾಗಲೇ ಅವರ ವಿವಾಹ ಆಮಂತ್ರಣ ಪತ್ರಿಕೆಯ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಮದುವೆ ನಡೆಯೋ ಸ್ಥಳದಲ್ಲಿ ಮೊಬೈಲ್ ನಿಷೇಧದ ನಿಯಮ ಬಗ್ಗೆ ಸದ್ಯ ಸುದ್ದಿಯಾಗುತ್ತಿದೆ.
ಅಂದಹಾಗೆ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದೂ ಇಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ಹೇಳಲಾಗಿದೆ. ಅವರೆಲ್ಲರಿಗೂ ಮೊಬೈಲ್ ತರದಂತೆ ಕಠಿಣ ನಿಯಮ ಮಾಡಲಾಗಿದೆ. ಮದುವೆಗೆ ಬರುವ ಅತಿಥಿಗಳು ಮೊಬೈಲ್ ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಕೂಡ ಮಾಡಲಾಗುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಲು ಒಂದಷ್ಟು ಜನರನ್ನು ನೇಮಿಸಲಾಗಿದೆ.
ಅದೇನೆ ಇರಲಿ, ಮದ್ವೆ ಅಂದಮೇಲೆ, ಎಲ್ಲೋ ಒಂದು ಕಡೆ ಫೋಟೋ, ವಿಡಿಯೋ ಲೀಕ್ ಆಗೋದು ಸಹಜ. ಆದರೆ, ತಮ್ಮ ಮದುವೆಯ ಯಾವುದೇ ಫೋಟೋ ಆಗಲಿ, ವಿಡಿಯೋ ಆಗಲಿ ಲೀಕ್ ಆಗದಂತೆ ನೋಡಿಕೊಳ್ಳುವುದೇ ರಶ್ಮಿಕಾ ಮತ್ತು ವಿಜಯ್‌ಗೆ ದೊಡ್ಡ ಚಾಲೆಂಜ್. ಈ ಹಿಂದೆ ಕತ್ರಿನಾ ಕೈಫ್-ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಸಖತ್ ಆಗಿ ವರ್ಕೌಟ್ ಆಗಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೇ ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನೊಂದು ವಿಷಯವೇನೆಂದರೆ, ಚಿತ್ರರಂಗದಲ್ಲೇ ಇರುವ ಅವರು ಇದುವರೆಗೆ ಯಾರನ್ನೂ ಮದುವೆಗೆ ಆಮಂತ್ರಿಸಿಲ್ಲ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಹಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಹೈದರಾಬಾದ್ನ ಆರತಕ್ಷತೆಗೆ ಆಮಂತ್ರಿಸಲಾಗುತ್ತಿದೆ. ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದೆ ಎಂಬುದು ವಿಶೇಷ.
ಇದೆಲ್ಲಾ ಸರಿ, ಮದ್ವೆ ಆಗುತ್ತಿರೋದೇ ನಿಜವಂತೆ. ಇನ್ನು, ಆ ಮದುವೆಯ ಫೋಟೋಗಳೇಕೆ ರಿವೀಲ್ ಆಗಬಾರದು. ಫೋಟೋಗಳನ್ನು ಜನ ನೋಡಿದರೇನಾಗುತ್ತೆ ಅನ್ನುವ ಪ್ರಶ್ನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ.




