Movie News: ನಿರ್ದೇಶಕ ರಾಜಮೌಳಿ ಜೊತೆ ಯಾರು ಸಿನಿಮಾ ಮಾಡ್ತಾರೋ, ಅವರ ಮುಂದಿನ ಸಿನಿಮಾ ಪಕ್ಕಾ ಫ್ಲಾಪ್ ಆಗಿರುತ್ತದೆ ಅಂತಾ ಎಲ್ಲರೂ ಹೇಳುತ್ತಾರೆ. ಅದೇ ರೀತಿ ಹಲವು ಹೀರೋಗಳ ಸಿನಿಮಾ ಫ್ಲಾಪ್ ಆಗಿರುವುದು ಇದ್ಕಕೆ ಉದಾಹರಣೆಯಾಗಿದೆ.
ಪ್ರಭಾಸ್, ರಾಮ್‌ಚರಣ್, ಜೂನಿಯರ್ ಎನ್‌ಟಿಆರ್ ಸೇರಿ ಹಲವರ ಸಿನಿಮಾಗಳು ಫ್ಲಾಪ್ ಆಗಿದೆ. ಬಾಹುಬಲಿ ಪಾರ್ಟ್ 2 ಸಖತ್ ಫೇಮಸ್ ಆಗಿ, ಸಾಹೋ ಸಿನಿಮಾ ಫ್ಲಾಪ್ ಆಯ್ತು. ಆರ್ಆರ್ಆರ್ ಸಿನಿಮಾ ಹಿಟ್ ಆಗಿ, ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ಮತ್ತು ರಾಮ್‌ಚರಣ್ ನಟನೆಯ ಆಚಾರ್ಯ ಸಿನಿಮಾ ಹಿಟ್ ಆಗದೇ ಉಳಿಯಿತು.
ಇದೇ ರೀತಿ ಡೇವಿಡ್ ವಾರ್ನರ್ ಕೂಡ ಐಪಿಎಲ್ ಬಿಡ್ಡಿಂಗ್‌ನಲ್ಲಿ ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ. ಇದಕ್ಕೆ ಕಾರಣ ರಾಜಮೌಳಿ ಅಂತಿದ್ದಾರೆ ಕೆಲವರು. ಯಾಕಂದ್ರೆ ಆ್ಯಡ್ ಒಂದರಲ್ಲಿ ರಾಜಮೌಳಿ ಡೇವಿಡ್ ವಾರ್ನರ್ ಜೊತೆ ಸಿನಿಮಾ ಮಾಡುವ ರೀತಿ ಆ್ಯಕ್ಟ್ ಮಾಡಿದ್ದರು. ಇದೀಗ ಡೇವಿಡ್ ಕೂಡ ಒಂದು ರೀತಿಯ ಫ್ಲಾಪ್ ಆಗಿದ್ದು, ಇದಕ್ಕೆ ರಾಜಮೌಳಿ ಜೊತೆ ಆ್ಯಕ್ಟ್ ಮಾಡಿದ್ದೇ ಕಾರಣ ಅಂತಿದ್ದಾರೆ ಕೆಲ ನೆಟ್ಟಿಗರು.
Rajamouli curse for real
pic.twitter.com/Gerwgd2Rr3— Surya (@msdian_dhfm7) November 26, 2024