ಮದ್ದೂರು ಕಲ್ಲು ತೂರಾಟ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಉನ್ನತ ಸಭೆ ನಡೆಸಿ ಮಾಹಿತಿ ನೀಡಿದ್ದಾರೆ. ಹಿಂದೂಗಳಾಗ್ಲಿ ಮುಸಲ್ಮಾರೇ ಆಗ್ಲಿ, ಯಾರೇ ಮಾಡಿದ್ರೂ ತಪ್ಪು ತಪ್ಪೇ.. ಉಸ್ತುವಾರಿ ಸಚಿವರ ವರದಿ ಆಧರಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮದ್ದೂರಿನಲ್ಲಿ ಪೊಲೀಸ್‌ನವರು ಇಲ್ಲಿಯವರೆಗೆ ತಪ್ಪುಗಳನ್ನು ಮಾಡಿಲ್ಲ. ಕಾನೂನು ರೀತಿ ನಡೆದುಕೊಂಡಿದ್ದಾರೆ. ಮಸೀದಿ ಎದುರು ಮೆರವಣಿಗೆ ಹೋಗುವಾಗ, ಸ್ವಲ್ಪ ಗಲಾಟೆ ಆಗಿದೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ನೀವು ಇಲ್ಲಿ ನಿಲ್ಲಬೇಡಿ ಹೋಗಿ ಅಂದ್ರು ಕೇಳಿಲ್ಲ. ಗುಂಪು ಕಟ್ಟಿಕೊಂಡು ಗಲಾಟೆ ಮಾಡೋಕೆ ಶುರು ಮಾಡಿದ್ದಾರೆ. ಅದಕ್ಕಾಗಿ ಲಘು ಲಾಠಿ ಚಾರ್ಜ್ ಮಾಡಿದ್ದಾರೆ. 21 ಜನ ಅರೆಸ್ಟ್ ಆಗಿದ್ದಾರೆ.
ಹಿಂದೂಗಳೇ ಮಾಡ್ಲಿ, ಮುಸಲ್ಮಾನರೇ ಆಗ್ಲಿ. ಯಾರೇ ಆದ್ರೂ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಎಲ್ಲೂ ಕೂಡ ಈ ರೀತಿ ನಡೆದಿಲ್ಲ. ಮದ್ದೂರಿನಲ್ಲಿ ಹೀಗಾಗಿದೆ. ಲಾಸ್ಟ್ ಇಯರ್ ನಾಗಮಂಗಲದಲ್ಲಿ ಆಗಿತ್ತು. ಈ ವರ್ಷ ನಾಗಮಂಗಲದಲ್ಲಿ ಆಗಿಲ್ಲ ಅಂತಾ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡ್ರು.
ಸಿಎಂ ಸುದ್ದಿಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಕೂಡ ಮಾತನಾಡಿದರು. ತಪ್ಪು ಮಾಡಿದವರ ಮೇಲೆ ಕ್ರಮಕ್ಕೆ, ಸರ್ಕಾರ ಹಿಂದೆ ಮುಂದೆ ನೋಡಿಲ್ಲ. ಈಗಾಗಲೇ 21 ಮಂದಿಯನ್ನು ಬಂಧಿಸಿದ್ದೇವೆ. ಆದರೂ ಅನಾವಶ್ಯಕವಾಗಿ ಪ್ರತಿಭಟನೆ ಮಾಡೋದನ್ನ, ಪ್ರಚೋದನೆ ಅನ್ನದೇ ಇನ್ನೇನ್ ಅಂತಾರೆ. ಈಗ ಬಿಜೆಪಿಯವ್ರಿಗೆ ನೆಲ ಇಲ್ಲ. ಧರ್ಮದ ವಿಚಾರ ಬಿಟ್ರೆ ಯಾವುದೇ ವಿಷಯವೂ ಅವರಿಗಿಲ್ಲ. ಏನಾದ್ರೂ ಮಾಡಿ ಪಾರ್ಟಿ ಕಟ್ಟೋಕೆ ಇದನ್ನ ಉಪಯೋಗಿಸುತ್ತಿದ್ದಾರೆ. ಆದ್ರೆ, ನಾವು ಕೋಮುವಾದದಿಂದ ಪಾರ್ಟಿ ಕಟ್ಟಲ್ಲ ಎಂದ್ರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಕೋಮುವಾದದಿಂದ ರಾಜಕೀಯ ಮಾಡಲೇಬಾರದು. ಅದೊಂದು ರಾಜಕೀಯ ಪಕ್ಷದ ಕೆಲಸ ಅಲ್ವೇ ಅಲ್ಲ ಅಂದ್ರು. ಕಾಂಗ್ರೆಸ್‌ನಿಂದ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಮಾಡೋಕಾಗ್ತಿಲ್ಲ ಅನ್ನುವ ಬಿಜೆಪಿ ಆರೋಪಕ್ಕೆ, ಸಮಾಜದ ನೆಮ್ಮದಿ ಕೆಡಿಸಿದ್ರೆ ಅದು ಬಿಜೆಪಿಯವರು ಅಂತಾ ವ್ಯಂಗ್ಯವಾಡಿದ್ರು. ಇನ್ನು, ಕಾಂಗ್ರೆಸ್ ಪಕ್ಷ ಅವನತಿಯ ಹಾದಿ ಹಿಡಿದಿದೆ ಅನ್ನೋ ಹೆಚ್.ಡಿ. ಕುಮಾರಸ್ವಾಮಿ ಮಾತಿಗೆ, ಸಿಎಂ ಸಿದ್ದರಾಮಯ್ಯ ನಗುತ್ತಲೇ ಟಾಂಗ್ ಕೊಟ್ರು. ಅವರ ಪಕ್ಷ ಪತನದ ಹಾದಿ ಹಿಡಿದಿದೆ ಅದನ್ನ ನೋಡಿಕೊಳ್ಳಲಿ ಅಂತಾ ತಿರುಗೇಟು ಕೊಟ್ಟಿದ್ದಾರೆ.

