ಈ ವರ್ಷ ಡಿಸೆಂಬರ್ 30ರಿಂದ 2026ರ ಜನವರಿ 8ರವರೆಗೆ ವೈಕುಂಠ ದ್ವಾರ ದರ್ಶನ ನಡೆಯಲಿದೆ. ನವೆಂಬರ್ 18ರಂದು ತಿರುಮಲದ ಅನ್ನಮಯ್ಯ ಭವನದಲ್ಲಿ ನಡೆದ ಟಿಟಿಡಿ ತುರ್ತು ಸಭೆಯಲ್ಲಿ, ಭಕ್ತರ ಸುರಕ್ಷತೆ ಮತ್ತು ಸೌಲಭ್ಯಕ್ಕಾಗಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕಳೆದ ವರ್ಷ ಆಫ್‌ಲೈನ್ ಟೋಕನ್‌ಗಾಗಿ ಸಂಭವಿಸಿದ ಕಾಲ್ತುಳಿತದ ಘಟನೆಗಳನ್ನು ತಪ್ಪಿಸಲು, ಈ ಬಾರಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಿಆರ್ ನಾಯುಡು ಲಡ್ಡು ಬೆಲೆ ಹೆಚ್ಚಳ ಎನ್ನುವುದು ಸುಳ್ಳು ಪ್ರಚಾರ ಎಂದು ಸ್ಪಷ್ಟಪಡಿಸಿ, ಇಂತಹ ಸುಳ್ಳುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಡಿಸೆಂಬರ್ 30, 31 ಮತ್ತು ಜನವರಿ 1ರಂದು ಸರ್ವದರ್ಶನ ಟೋಕನ್‌ಗಳು ಕೇವಲ ಆನ್‌ಲೈನ್ ಇ–DIP ಮೂಲಕ ಮಾತ್ರ ಲಭ್ಯ. ಆಫ್‌ಲೈನ್ ಟೋಕನ್‌ಗಳು ಇರಲಿಲ್ಲ. ಈ ಮೂರು ದಿನಗಳಲ್ಲಿ ರೂ.300 ವಿಶೇಷ ಪ್ರವೇಶ, ಶ್ರೀವಾಣಿ ಟಿಕೆಟ್‌ಗಳು, ಸೇವೆಗಳು ಮತ್ತು ವಿಐಪಿ ಬ್ರೇಕ್ ದರ್ಶನಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಶಿಫಾರಸು ಪತ್ರಗಳನ್ನೂ ಸ್ವೀಕರಿಸಲಾಗುವುದಿಲ್ಲ. ಕೇವಲ ಖುದ್ದಾಗಿ ಬರುವ ಪ್ರೋಟೋಕಾಲ್ ವಿಐಪಿಗಳಿಗೆ ಮಾತ್ರ ಅವಕಾಶವಿರುತ್ತದೆ.
ಜನವರಿ 2ರಿಂದ 8ರವರೆಗೆ ಯಾವುದೇ ಟಿಕೆಟ್ ಇಲ್ಲದೆ ಭಕ್ತರು ನೇರವಾಗಿ ತಿರುಮಲಕ್ಕೆ ಹೋಗಿ ಸರ್ವದರ್ಶನ ಪಡೆಯಬಹುದು. ಈ ಅವಧಿಯಲ್ಲಿ ದಿನಕ್ಕೆ 15,000 ರೂ.300 ಟಿಕೆಟ್‌ಗಳು ಮತ್ತು 1,000 ಶ್ರೀವಾಣಿ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. 10 ದಿನಗಳಲ್ಲಿ 182 ಗಂಟೆಗಳ ದರ್ಶನದಲ್ಲಿ 164 ಗಂಟೆಗಳನ್ನು ಸಾಮಾನ್ಯ ಭಕ್ತರಿಗೆ ಮೀಸಲಿಡಲಾಗಿದೆ. ನವೆಂಬರ್ 27ರಿಂದ ಡಿಸೆಂಬರ್ 1ರವರೆಗೆ ಇ–DIP ನೋಂದಣಿ ವೆಬ್‌ಸೈಟ್, ಅಪ್ಲಿಕೇಶನ್ ಮತ್ತು ವಾಟ್ಸಾಪ್ ಮೂಲಕ ಲಭ್ಯ. ಆಯ್ಕೆಗೊಂಡವರಿಗೆ ಡಿಸೆಂಬರ್ 2ರಂದು ಮಾಹಿತಿ ನೀಡಲಾಗುತ್ತದೆ.
ಜನವರಿ 6, 7 ಮತ್ತು 8ರಂದು ಸ್ಥಳೀಯರಿಗೆ ಪ್ರತಿದಿನ 5,000 ಟೋಕನ್‌ಗಳನ್ನು ಆದ್ಯತೆ ಆಧಾರದ ಮೇಲೆ ನೀಡಲಾಗುತ್ತದೆ. ಒಟ್ಟು 10 ದಿನಗಳಲ್ಲಿ ಸುಮಾರು 9 ಲಕ್ಷ ಭಕ್ತರಿಗೆ ದರ್ಶನ ಒದಗಿಸುವ ಗುರಿ ಹೊಂದಲಾಗಿದೆ. ಆಫ್‌ಲೈನ್ ಟೋಕನ್ ರದ್ದುಗೊಳಿಸಿರುವುದು ಕೆಲವರಿಗೆ ನಿರಾಶೆ ತಂದರೂ, ಭದ್ರತೆ ಮತ್ತು ಪಾರದರ್ಶಕತೆಯಿಗಾಗಿ ಈ ಕ್ರಮ ಅಗತ್ಯವೆಂದು ಟಿಟಿಡಿ ತಿಳಿಸಿದೆ. ಭಕ್ತರು ಆನ್‌ಲೈನ್‌ನಲ್ಲಿ ಸಮಯಕ್ಕೆ ಸರಿಯಾಗಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

