ಕಪ್ಪು ಎಳ್ಳಿನ ಬಗ್ಗೆ ಎಷ್ಟೋ ಜನಕ್ಕೆ ತಿಳಿಯದೆ ಇರುವ ವಿಷಯದ ಬಗ್ಗೆ ತಿಳಿಯೋಣ. ನಮ್ಮ ಸನಾತನ ಕಾಲದಿಂದಲೂ ಒಂದೊಂದು ಧಾನ ಧರ್ಮಕ್ಕೆ ಅದರದೇ ಆದ ಪ್ರಾಮುಖ್ಯತೆ ವಿಶೇಷತೆಗಳಿವೆ ಧಾನ್ಯಗಳ ದಾನದಿಂದ ನಮ್ಮ ಅನೇಕ ದೋಷಗಳು ನಿವಾರಣೆ ಆಗುತ್ತದೆ. ಅದರಲ್ಲಿ ಒಂದು ಧಾನ್ಯ ಕಪ್ಪುಎಳ್ಳು, ಶನಿ ದೇವನಿಗೆ , ವಜ್ರಕಾಯ ಆಂಜನೇಯನಿಗೆ ತುಂಬಾ ಪ್ರಿಯವಾದದ್ದು ಕಪ್ಪು ಎಳ್ಳು . ಇದನ್ನು ರಾಹು, ಕೇತು, ಶನಿಮಹಾತ್ಮ ,ಆಂಜನೇಯನ ದಿವ್ಯ ಅನುಗ್ರಹಕ್ಕೆ ಉಪಯೋಗಿಸುತ್ತಾರೆ. ಒಂದು ಲೋಟದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ಇದಕ್ಕೆ ಕಪ್ಪು ಎಳ್ಳು ಸೇರಿಸಬೇಕು. ನಾವು ಮಿಶ್ರಣ ಮಾಡಿದ ನೀರಿನಿಂದ ಪರಮೇಶ್ವರನ ಲಿಂಗಕ್ಕೆ ಅಭಿಷೇಕ ಮಾಡಬೇಕು ಹಾಗೆ ಅಭಿಷೇಕ ಮಾಡುವಾಗ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮನಸ್ಸಿನಲ್ಲಿ ಜಪಿಸಿಕೊಳ್ಳುತ್ತಾ ಆ ಜಲವನ್ನು ಶಿವನ ಲಿಂಗದ ಮೇಲೆ ಹಾಕುತ್ತಾ ಪ್ರಾರ್ಥಿಸಿ ಕೊಳ್ಳಬೇಕು ಹೀಗೆ ಪ್ರಾರ್ಥಿಸಿ ಕೊಳ್ಳುವುದರಿಂದ ಶಿವನ ಅನುಗ್ರಹಕ್ಕೆ ಬೇಗ ಪಾತ್ರರಾಗುತ್ತೇವೆ. ಶಿವನ ಆಶೀರ್ವಾದ ಕೂಡ ನಮಗೆ ಲಭಿಸುತ್ತದೆ.
ನಂತರ ನಿಮಗೆ ತಿಳಿದ ಹಾಗೆ ಬಿಲ್ವಪತ್ರೆಯ ಜೊತೆಗೆ ಕಪ್ಪು ಎಳ್ಳನ್ನು ಹಾಕಿ ದಾನ ಮಾಡಬೇಕು ಕಪ್ಪು ಎಳ್ಳು ಶನಿಮಹಾತ್ಮನಿಗೆ ಪ್ರಿಯ, ಬಿಲ್ವಪತ್ರೆ ಶಿವನಿಗೆ ಪ್ರಿಯ, ಇವೆರಡನ್ನು ಸೇರಿಸಿ ದಾನ ಧರ್ಮ ಮಾಡುವುದರಿಂದ ಶಿವನ ಮತ್ತು ಶನಿಮಹಾತ್ಮನ ಅನುಗ್ರಹಕ್ಕೆ ಒಳಗಾಗುತ್ತೆವೆ. ಶನಿಮಹಾತ್ಮನ ಅನುಗ್ರಹ ಯಾವ ವ್ಯಕ್ತಿಯ ಮೇಲೆ ಇದ್ದರೂ ಸಹ ಅವನು ಉನ್ನತಮಟ್ಟಕ್ಕೆ ಏರಬಲ್ಲ. ಇನ್ನು ಶನಿ ಮಹಾತ್ಮನ ಕಾಟದಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲಾರ. ಆದ್ದರಿಂದ ಶನಿ ಮಹಾತ್ಮನನ್ನು ಪ್ರಿಯವಾಗಿ ಒಲಿಸಿಕೊಂಡರೆ ಆತ ನಮಗೆ ಒಳ್ಳೆಯ ದಾರಿಯನ್ನು ತೋರಿಸುತ್ತಾನೆ. ಬಿಲ್ವಪತ್ರೆಯನ್ನು ದಾನ ಮಾಡುವುದರಿಂದ ಶಿವನ ಅನುಗ್ರಹ ನಮ್ಮ ಮೇಲಿರುತ್ತದೆ. ಇಂದರಿಂದ ರಾಹು ಕೇತು ಹಾಗೆ ಶನಿದೇವರ ಕೆಟ್ಟ ದೃಷ್ಟಿಯು ನಿಮ್ಮ ಮೇಲೆ ಬಿಡುಳುವುದಿಲ್ಲ. ಇದನ್ನು ಮಾಡುವುದರಿಂದ ಕಾಳ ಸರ್ಪದೋಷ, ಮುಖ್ಯವಾಗಿ ಕಾಳಸರ್ಪ ದೋಷದಿಂದ ಮದುವೆಯಲ್ಲಿ ವಿಗ್ನ ಅಥವಾ ಸಂತಾನವಿಲ್ಲದೆ ನೋವನ್ನುಂಟು ಮಾಡುವುದು, ಹೊಸ ವ್ಯಾಪಾರ ವಹಿವಾಟುಗಳು ನಡೆಯದೆ ನಿಂತು ಹೋಗುತ್ತವೆ. ಮುಖ್ಯವಾಗಿ ಕಾಳ ಸರ್ಪದೋಷ ವನ್ನು ಈ ಎಳ್ಳು ದಾನದಿಂದ ನಿವಾರಿಸಿ ಕೊಳ್ಳಬಹುದು ಇನ್ನು ಯಾರು ಸಾಡೇಸಾತಿನ ಶನಿಕಾಟಕ್ಕೆ ಸಿಕ್ಕಿದರೋ ಅವರು ಕೂಡ ಈ ಒಂದು ಶನಿಕಾಟದಿಂದ ಆದಷ್ಟು ಬೇಗ ಮುಕ್ತರಾಗುತ್ತಾರೆ. ಇನ್ನು ಪಿತೃ ದೋಷ ತಂದೆ ತಾತಂದಿರು ಮುತ್ತಾತಂದಿರು ಮಾಡಿದ ದೋಷಗಳು ಕೂಡ ದೂರ ಆಗುತ್ತವೆ. ಹಾಲಿನ ಜೊತೆ ಕಪ್ಪು ಎಳ್ಳನ್ನು ಮಿಶ್ರಣ ಮಾಡಿ ಅಶ್ವತಕಟ್ಟೆ ಇರುವ ಅರಳಿ ಮರಕ್ಕೆ ಹಾಕುವುದರಿಂದ ಎಲ್ಲಾ ಜಾತಕ ದೋಷಗಳು, ಕಷ್ಟಗಳು ದೂರವಾಗುತ್ತವೆ. ಕಪ್ಪುಎಳ್ಳು ಮತ್ತು ಕಪ್ಪು ಉದ್ದನ್ನು ಪ್ರತಿ ಶನಿವಾರದಂದು ಬಡವರಿಗೆ ದಾನ ಮಾಡಬೇಕು ಇದರಿಂದ ಹಣದ ಸಮಸ್ಯೆ ಕೂಡ ದೂರವಾಗುತ್ತದೆ. ಶನಿವಾರದಂದು ಶನಿದೇವನ ದೇವಸ್ಥಾನದಲ್ಲಿ ಪ್ರಸಾದ ಮುಖಾಂತರ ಕೂಡ ನೀವು ಕೊಡಬಹುದು. ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಅನೇಕ ಕಷ್ಟ ಕಾರ್ಪಣ್ಯಗಳಿಂದ ದೂರವಾಗಬಹುದು.




