ಬೆಂಗಳೂರು:ಪೊಲೀಸರು ಜನರ ರಕ್ಷಣೆ ಮಾಡೋದಕ್ಕೂ ಸೈ, ಅವರಿಗೆ ಬಂದ ಕಷ್ಟಗಳಿಗೆ ಹೆಗಲು ಕೊಡೋದಕ್ಕೂ ಜೈ ಎನ್ನುವುದಕ್ಕೆ, ಈ ಘಟನೆಯೇ ಸಾಕ್ಷಿ. ಆಕೆ ಮಾಡಿದಂತ ಒಂದು ಕರೆಯಿಂದಾಗಿ ಸ್ಥಳಕ್ಕೆ ಹೋಗಿ, ಆ ಮಹಿಳೆಯ ಕಷ್ಟವನ್ನು ಕೇಳಿ, ಸಮಸ್ಯೆ ಬಗೆ ಹರಿಸಿ, ಮನೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಬರೋ ಪೊಲೀಸರು ಇರ್ತಾರೆ ಅಂದ್ರೇ ನೀವು ನಂಬೋದೇ ಇಲ್ಲ.. ಆದ್ರೇ.. ನಂಬಲೇ ಬೇಕು.. ಆ ಬಗ್ಗೆ ಮುಂದೆ ಸುದ್ದಿ ಓದಿ..
ಏಪ್ರಿಲ್ 22, 2022ರಂದು ರಾತ್ರಿ 9.53ಕ್ಕೆ 112ಗೆ ಕರೆ ಮಾಡಿದಂತ ಮಹಿಳೆಯೊಬ್ಬರು, ತನಗೆ ಶಸ್ತ್ರ ಗರ್ಭಕೋಶದ ಚಿಕಿತ್ಸೆ ಆಗಿದೆ. ಖಾಸಗಿ ಆಸ್ಪತ್ರೆಯವರು 1.25 ಲಕ್ಷ ಚಾರ್ಜ್ ಮಾಡಿದ್ದಾರೆ. ಕಡಿಮೆ ಮಾಡಿ ಅಂತ ಗೋಗರೆದ್ರೂ ಕೇಳುತ್ತಿಲ್ಲ. ಬಿಲ್ ಕಟ್ಟದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಮಾಡಲ್ಲ ಅಂತ ಹೇಳುತ್ತಿದ್ದಾರೆ ಎಂಬುದಾಗಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ.
ಮಹಿಳೆ ಕರೆ ಮಾಡಿದಂತ ವ್ಯಾಪ್ತಿ ವಿಜಯನಗರ ಪೊಲೀಸ್ ಠಾಣೆಗೆ ಬರೋ ಕಾರಣ, ಕರ್ತವ್ಯದಲ್ಲಿದ್ದಂತ ಹೊಯ್ಸಳ-87ರ ಪೊಲೀಸ್ ಸಿಬ್ಬಂದಿಗಳಾದಂತ ಎಎಸ್ಐ ಜಗದೀಶ್, ಎಸಿಪಿ ಮೋಹನ್ ಗೆ ಹೋಗಿ ನೋಡಿ, ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗುತ್ತದೆ. ಕಂಟ್ರೋಲ್ ರೂಂ ನಿಂದ ಬಂದ ಮಾಹಿತಿ ಆಧರಿಸಿ, ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿಗಳು ತೆರಳಿ, ಮಹಿಳೆ ಕಷ್ಟವನ್ನು ಕೇಳುತ್ತಾರೆ.
ಆ ಮಹಿಳೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತ ಬರೋ ಕಡಿಮೆ ಸಂಬಂಳದಲ್ಲಿಯೂ ಜೀವನ ನಡೆಸೋ ಕಷ್ಟವನ್ನು ಕೇಳಿದಂತ ಪೊಲೀಸರು ಮನ ಕರಗುತ್ತೆ. ಮಹಿಳೆಗೆ ಹೇಗಾದ್ರೂ ನೆರವಾಗಬೇಕು. ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದು, ತಮ್ಮ ಕಿಸೆಯಲ್ಲಿದ್ದಂತ 10 ಸಾವಿರ ರೂ ಸಹಾಯ ಮಾಡುತ್ತಾರೆ. ಆದ್ರೇ.. ಇಷ್ಟೇ ಹಣಕ್ಕೆ ಆಸ್ಪತ್ರೆ ಬಿಲ್ ಕಟ್ಟೋದಕ್ಕೆ ಆಗೋದಿಲ್ಲವೆಂದು ಗೋಳಾಡಿದ ಮಹಿಳೆಯ ಕಷ್ಟಕ್ಕೆ ಸ್ಪಂದಿಸೋ ಕೆಲಸಕ್ಕೆ ಇಳಿಯುತ್ತಾರೆ.
ಸ್ನೇಹಿತರು, ಪರಿಚಯಸ್ಥರಿಂದ ಮತ್ತೆ 25 ಸಾವಿರ ಹಣ ಹೊಂದಿಸಿ, ಆಕೆಗೆ ನೀಡುತ್ತಾರೆ. ಪೊಲೀಸರೇ ನೆರವಾಗಿ ಹಣ ಅವರಿವರಿಂದ ಸಹಾಯ ಮಾಡಿಸ್ತಾ ಇರೋದನ್ನು ಕಂಡ ಆಸ್ಪತ್ರೆ ಆಡಳಿತ ಮಂಡಳಿ, ಐದು ಸಾವಿರ ಬಿಡ್ತೀನಿ 1.25 ಲಕ್ಷ ಹಣದಲ್ಲಿ ಎಂದು ಹೇಳಿದವರು, ಅಂತಿಮವಾಗಿ 20 ಸಾವಿರ ಡಿಸ್ಕೌಂಟ್ ಕೊಡ್ತಾರೆ. ಹೀಗಾಗಿ ಮಹಿಳೆಯ ಬಳಿಯಲ್ಲಿದ್ದಂತ 70 ಸಾವಿರ ಹಾಗೂ ಎಎಸ್ಐ ಜಗದೀಶ್, ಎಸಿಪಿ ಮೋಹನ್ ತಾವೇ ನೀಡಿದ 10 ಸಾವಿರ ಜೊತೆಗೆ ಸ್ನೇಹಿತರಿಂದ ಕೊಡಿಸಿದಂತ 25 ಸಾವಿರ ಸೇರಿಸಿ ಒಟ್ಟು 1.05 ಲಕ್ಷ ಹಣವನ್ನು ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಬಿಲ್ ಗೆ ಪೇ ಮಾಡ್ತಾರೆ. ಆ ಮೂಲಕ ಮಾನವೀಯತೆ ಮೆರೆದು, ಆ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ, ಮನೆಗೆ ಕಳುಸೋ ವರೆಗೆ ಖುದ್ದು ಮುಂದೆ ನಿಂತು ಕೆಲಸ ಮಾಡಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ನಮ್ಮ 112 ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ಎಎಸ್ಐ ಜಗದೀಶ್, ಎಸಿಪಿ ಮೋಹನ್ ಕಾರ್ಯಕ್ಕೆ ಬೆಂಗಳೂರು ನಗರ ಪೊಲೀಸರು ಮೆಚ್ಚುಗೆ ವ್ಯಕ್ತ ಪಡಿಸಿದೆ.
ಈ ಪೋಸ್ಟ್ ಓದಿದಂತ ನೂರಾರು ಮಂದಿ, ಎಎಸ್ಐ ಜಗದೀಶ್ ಮತ್ತು ಎಸಿಪಿ ಮೋಹನ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮಹಿಳೆಯ ನೋವಿಗೆ, ಕಷ್ಟಕ್ಕೆ ನೆರವಾದಂತ ಪೊಲೀಸ್ ಸಿಬ್ಬಂದಿಗೆ ಮೆಚ್ಚುಗೆಯ ಮಹಾಪೂರವನ್ನೇ ವ್ಯಕ್ತ ಪಡಿಸಿದ್ದಾರೆ.




