ಮನುಷ್ಯನ ದಿನನಿತ್ಯದ ಜೀವನದಲ್ಲಿ ಹಾಲು ತುಂಬಾನೇ ಮುಖ್ಯ. ಕಾಫಿ ಟೀ ಮಾಡೋಕೂ ಹಾಲು ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಬಿಳಿ ಹಾಲನ್ನು ನೋಡಿದ್ದೇವೆ.. ಹಾಲು ಇರೋದೇ ಬೆಳ್ಳಗೆ ಅನ್ನೋದು ನಮಗೆಲ್ಲಾ ಗೊತ್ತಿದೆ.. ಆದ್ರೆ ಕಪ್ಪು ಬಣ್ಣದ ಹಾಲು ಕೂಡ ಇದೆ ಅಂದ್ರೆ ಗೊತ್ತಾ? ಪ್ರಾಣಿಯೊಂದು ಕಪ್ಪು ಬಣ್ಣದಲ್ಲಿ ಹಾಲು ಕೊಡುತ್ತೆ.. ಈ ವಿಷ್ಯಾ ಎಷ್ಟೋ ಜನರಿಗೆ ಗೊತ್ತೇ ಇಲ್ಲ.. ಕಪ್ಪು ಬಣ್ಣದ ಹಾಲು ಕೊಡುವ ಪ್ರಾಣಿ ಯಾವುದು, ಅದು ಹೇಗಿರುತ್ತೆ ಅನ್ನೋದನ್ನ ತೋರಿಸ್ತೀವಿ .
ಹಾಲಂದ್ರೆ ಎಲ್ಲರಿಗೂ ಇಷ್ಟ ಯಾಕಂದ್ರೆ ಹಾಲಿನಲ್ಲಿ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶಗಳು ಇರ್ತವೆ. ಅದರಲ್ಲೂ ದನಗಳು ನೀಡುವ ಬಿಳಿ ಬಣ್ಣದ ಹಾಲನ್ನ ನಾವೇಲ್ಲ ನೋಡಿರ್ತೀವಿ ,ಆದರೆ ಇಲ್ಲೊಂದು ಪ್ರಾಣಿ ಕಪ್ಪು ಬಣ್ಣದ ಹಾಲನ್ನ ಕೊಡ್ತಾವಂತೆ.. ಹಾಲು ಕಪ್ಪಗಿರುವುದು ನಿಜಕ್ಕೂ ಅಚ್ಚರಿಯ ವಿಷ್ಯವೇ ..
ನವಜಾತ ಶಿಶುಗಳಿಗೆ ತಾಯಿ ಎದೆಹಾಲು ಕುಡಿಸುತ್ತಾರೆ. ಅದೇ ಸ್ವಲ್ಪ ವಯಸ್ಸಾದಾಗ ಅವರಿಗೆ ಹಸು ಹಾಲನ್ನು ನೀಡಲಾಗುತ್ತದೆ. ಮನುಷ್ಯರು ಮಾತ್ರವಲ್ಲದೆ ಆಡು, ಹಸು, ಒಂಟೆ, ಸಿಂಹ ಮತ್ತು ಹುಲಿ ಸೇರಿದಂತೆ ಹಲವು ಪ್ರಾಣಿಗಳು, ಅನೇಕ ಸಸ್ತನಿಗಳು ಕೂಡ ತಾಯಿಯ ಹಾಲನ್ನು ಸೇವಿಸಿಯೇ ಬೆಳೆಯುತ್ತವೆ. ಪ್ರಪಂಚದಲ್ಲಿ ಸುಮಾರು 6,400 ಬಗೆಯ ಸಸ್ತನಿಗಳಿವೆ. ವಿಶೇಷವೆಂದರೆ ಈ 6,400 ಸಸ್ತನಿಗಳಲ್ಲಿ ಒಂದು ಪ್ರಾಣಿ ಮಾತ್ರ ಕಪ್ಪು ಹಾಲನ್ನು ಉತ್ಪಾದಿಸುತ್ತಂತೆ ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು .
ಈ ರೀತಿ ಕಪ್ಪು ಹಾಲನ್ನು ನೀಡುವ ಪ್ರಾಣಿ ಅಂದ್ರೆ ಅದು ಘೇಂಡಾಮೃಗ.. ಆಫ್ರಿಕನ್ ಕಪ್ಪು ಘೇಂಡಾಮೃಗ ಕಪ್ಪು ಹಾಲನ್ನು ಕೊಡುತ್ತೆ. ಈ ಜಾತಿಯ ಘೇಂಡಾಮೃಗಗಳ ಹಾಲಿನಲ್ಲಿ ಕೇವಲ ಶೇ.0.2ರಷ್ಟು ಕೊಬ್ಬು ಇರುತ್ತೆ. ಅದಲ್ಲದೆ ಈ ಘೇಂಡಾಮೃಗದ ಹಾಲು, ನೊರೆ ನೊರೆಯಾದ ಕಪ್ಪು ಬಣ್ಣದಿಂದ ಕೂಡಿರುತ್ತದೆ.
ಅಂದಹಾಗೇ ಈ ಕಪ್ಪು ಘೇಂಡಾಮೃಗಗಳು 4 ರಿಂದ 5 ವರ್ಷ ವಯಸ್ಸಿನಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತದೆ. ಇಂತಹ ಘೇಂಡಾಮೃಗಗಳು ಒಂದು ವರ್ಷಕ್ಕಿಂತಲೂ ಹೆಚ್ಚಿನ ಕಾಲದವರೆಗೆ ಗರ್ಭಿಣಿಯಾಗಿರುತ್ತದೆ,ಹಾಗೂ ಈ ಪ್ರಾಣಿಗಳು ಒಂದು ಬಾರಿ ಕೇವಲ ಒಂದೇ ಮರಿಗೆ ಮಾತ್ರ ಜನ್ಮ ನೀಡುತ್ತದೆ.