ಈ ದೀಪಾವಳಿ ಹಬ್ಬದ ಹಿನ್ನೆಲೆ, ಪ್ರಮುಖ ಕಾರು ತಯಾರಿಕಾ ಕಂಪನಿಗಳು ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿವೆ. ₹7 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿರುವುದು ಕಾರು ಖರೀದಿದಾರರಲ್ಲಿ ಉತ್ಸಾಹ ಮೂಡಿಸಿದೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಕಿಯಾ, ಹುಂಡೈ, ಹೋಂಡಾ ಮತ್ತು ರೆನಾಲ್ಟ್ ಮುಂತಾದ ಕಂಪನಿಗಳು ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ಸೌಲಭ್ಯ ಮತ್ತು ಸ್ಕ್ರ್ಯಾಪ್‌ಪೇಜ್ ಕೊಡುಗೆಗಳು ಸೇರಿದಂತೆ ಬಂಪರ್ ಆಫರ್‌ಗಳನ್ನು ಪ್ರಕಟಿಸಿವೆ.
ಮಾರುತಿ ಸುಜುಕಿ ವಿಶೇಷ ಆಫರ್ಸ್ ಗಮನಿಸೋದಾದ್ರೆ ಗ್ರ್ಯಾಂಡ್ ವಿಟಾರಾ ₹1,80,000 ರಿಯಾಯಿತಿ (ಸ್ಟ್ರಾಂಗ್- ಹೈಬ್ರಿಡ್, ಪೆಟ್ರೋಲ್, ಸಿಎನ್‌ಜಿ) ಬಲೆನೋ ಡೆಲ್ಟಾ AMT: ₹1,05,000 ರಿಯಾಯಿತಿ, ವ್ಯಾಗನ್ R: ₹57,500 ರಿಯಾಯಿತಿ, ಆಲ್ಟೊ ಕೆ10, ಸೆಲೋರಿಯೊ, ಸ್ವಿಫ್ಟ್, ಇಕೋ ₹42,000 – ₹52,500 ರಿಯಾಯಿತಿ. ಟೂರ್ ಮಾದರಿಗಳು (H1, H3, V, M) ₹15,000 – ₹65,500 ರಿಯಾಯಿತಿ. ಎರ್ಟಿಗಾ, ಡಿಜೈರ್, ಬ್ರೆಝಾ: ₹25,000 – ₹35,000 ರಿಯಾಯಿತಿ ಇದೆ.
ಟಾಟಾ ಮೋಟಾರ್ಸ್ ದೀಪಾವಳಿ ಕೊಡುಗೆಗಳು. ಟಿಯಾಗೊ ₹25,000 (₹10,000 ನಗದು + ₹15,000 ವಿನಿಮಯ), ಟೈಗೋರ್, ನೆಕ್ಸಾನ್ ₹30,000ವರೆಗೆ ರಿಯಾಯಿತಿ, ಪಂಚ್ ₹20,000 ರಿಯಾಯಿತಿ, ಕರ್ವ್ ₹40,000 ರಿಯಾಯಿತಿ, ಹ್ಯಾರಿಯರ್, ಸಫಾರಿ ₹50,000 ರಿಯಾಯಿತಿ (₹25,000 ನಗದು + ₹25,000 ವಿನಿಮಯ) ಇದೆ.
ಕಿಯಾ ಹಬ್ಬದ ಸಡಗರ ಜೋರಾಗಿದೆ. ಸೋನೆಟ್ ₹45,000 ಜೊತೆಗೆ (₹10,000 ನಗದು + ₹20,000 ವಿನಿಮಯ + ₹15,000 ಕಾರ್ಪೊರೇಟ್) ಸೆಲ್ಟೋಸ್ ₹75,000ವರೆಗೆ ಕೊಡುಗೆ ಇದೆ. ಸೈರೋಸ್, ಕಾರ್ನಿವಲ್ ₹80,000 – ₹1,15,000 ರಿಯಾಯಿತಿ ಇದೆ.
ಹೋಂಡಾ, ರೆನಾಲ್ಟ್ ಕೂಡ ದೀಪಾವಳಿ ಆಫರ್ ನೀಡಿವೆ. ದೀಪಾವಳಿಯ ಈ ಹಬ್ಬದ ಸಡಗರದಲ್ಲಿ ಹೊಸ ಕಾರು ಖರೀದಿಗೆ ಯೋಜಿಸುತ್ತಿದ್ದವರಿಗೆ ಇದು ಅತ್ಯುತ್ತಮ ಅವಕಾಶ. ಆದರೆ, ಎಲ್ಲ ಆಫರ್‌ಗಳು ಆಯ್ದ ಡೀಲರ್‌ಗಳು ಹಾಗೂ ರೂಪಾಂತರಗಳಿಗೆ ಮಾತ್ರ ಅನ್ವಯವಾಗಬಹುದು. ಖರೀದಿಗೆ ಮುನ್ನ ಸ್ಥಳೀಯ ಶೋರೂಮ್‌ನಲ್ಲಿ ಅಧಿಕೃತ ಮಾಹಿತಿ ಪರಿಶೀಲಿಸುವುದು ಉತ್ತಮ.
ವರದಿ : ಲಾವಣ್ಯ ಅನಿಗೋಳ