Thursday, November 27, 2025

Latest Posts

ಆಫೀಸ್‌ ಹೋಗೋರಿಗೆ ಬೆಸ್ಟ್‌ ಬೈಕ್‌ ಇದು

- Advertisement -

ಬೆಂಗಳೂರಿನಂತಹ ಮಹಾನಗರಗಳಲ್ಲಿ ಡೈಲಿ ಆಫೀಸ್‌ಗೆ ಹೋಗೋದು ತುಂಬಾ ಪ್ರಯಾಸದ ಕೆಲಸ. ಇಂತಹ ಸಂದರ್ಭದಲ್ಲಿ ಬೈಕ್‌ಗಳು ತೀರಾ ಅನಿವಾರ್ಯ. ಅದರಲ್ಲೂ Tvs Radeon ಎಲ್ಲ ವಿಧದಲ್ಲೂ ನೆರವಾಗಬಲ್ಲದು. ಇದು ಬಹುತೇಕರ ಆಯ್ಕೆಯ ದ್ವಿಚಕ್ರ ವಾಹನವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ.

ನೂತನ ಟಿವಿಎಸ್ ರೇಡಿಯನ್ ಅಗ್ಗದ ದರದಲ್ಲೂ ಲಭ್ಯವಿದ್ದು, ರೂ.73,518 ರಿಂದ ರೂ. 86,845 ಬೆಲೆಯನ್ನು ಹೊಂದಿದೆ. ಶ್ರೀಸಾಮಾನ್ಯರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು. ಬ್ಲ್ಯಾಕ್ ಎಡಿಷನ್, ಬೇಸ್ ಎಡಿಷನ್, ಡಿಜಿಟಲ್ ಕ್ಲಸ್ಟರ್ ಡ್ರಮ್ ಹಾಗೂ ಡಿಜಿಟಲ್ ಕ್ಲಸ್ಟರ್ ಡಿಸ್ಕ್ ಎಂಬ ವೇರಿಯೆಂಟ್ಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ರೌಂಡ್ ಹೆಡ್‌ಲ್ಯಾಂಪ್, LED DRL ಗಳು ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಲ್ ಬ್ಲ್ಯಾಕ್, ಆಲ್ ಬ್ಲ್ಯಾಕ್, ಟೈಟಾನಿಯಂ ಗ್ರೇ, ರಾಯಲ್ ಪರ್ಪಲ್ ಹಾಗೂ ಸ್ಟಾರ್‌ಲೈಟ್ ಬ್ಲ್ಯೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಟಿವಿಎಸ್ ರೇಡಿಯನ್ ಬೈಕ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಗ್ರಾಬ್ ರೈಲ್‌ಗಳು, ಲಗೇಜ್‌ ಹುಕ್, ಎಲೆಕ್ಟ್ರಿಕ್ ಸೆಲ್ಫ್-ಸ್ಟಾರ್ಟ್,ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‌ಗಳನ್ನು ಪಡೆದಿದೆ.

ಈ ಜೂನ್ ತಿಂಗಳಲ್ಲಿ ರೇಡಿಯನ್ ಬೈಕ್‌ಗಳನ್ನು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಳಿಸಲಾಗಿದೆ. ಒಟ್ಟು 8,863 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 10,274 ಯುನಿಟ್‌ಗಳನ್ನು ಮಾರಲಾಗದೆ. ಈ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -13.73% ಇಳಿಕೆಯಾಗಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss