ಎಣ್ಣೆಪದಾರ್ಥಗಳನ್ನು ಸೇವಿಸಿದ ನಂತರ ನಂತರ ಅಜೀರ್ಣ, ಹೊಟ್ಟೆಭಾರ ಮತ್ತು ಹೊಟ್ಟೆಯಲ್ಲಿ ಸುಡುವ ಸಂವೇದನೆ ಉಂಟಾಗುತ್ತದೆ. ಎಣ್ಣೆಯುಕ್ತ ಆಹಾರ ಸೇವಿಸಲೂ ಬೇಕು ಹಾಗೆಯೇ ಅದರಿಂದಾಗುವ ಸಮಸ್ಯೆಗಳಿಂದ ಪಾರಾಗಲೂ ಬೇಕು ಎನ್ನುವವರು ಈ ಟಿಪ್ಸ್ ಅನ್ನು ಫಾಲೋ ಮಾಡಲೇ ಬೇಕು.
ಎಣ್ಣೆಯಲ್ಲಿ ಕರಿದ ತಿನಿಸುಗಳನ್ನ ತಿಂದ ನಂತರ ಅಥವಾ ಊಟ ಮಾಡಿದ ಬಳಿಕ ಮೊಸರು ಸೇವಿಸುವುದು ಒಳ್ಳೆಯದು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇನ್ನು ನಾವು ಸೇವಿಸುವ ಊಟದಲ್ಲಿ ಫೈಬರ್ ತುಂಬಿದ ಓಟ್ಸ್ ಅಥವಾ ಗೋಧಿ ಅಂಶ ಇರುವುದರಿಂದ ಕರುಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಾಗು ದೀರ್ಘಕಾಲದವರೆಗೆ ನಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.
ನೀರು ನಮ್ಮ ದೇಹಕ್ಕೆ ಅತಿ ಮುಖ್ಯ. ಅದರ ಜೊತೆಗೆ ಗ್ರೀನ್ ಟೀ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲಿನ ಆಕ್ಸಿಡೇಟಿವ್ ಲೋಡ್ ಅನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ಜಿಡ್ಡಿನ ಆಹಾರವನ್ನು ಸಣ್ಣ ಮತ್ತು ಮೃದುವಾದ ರೂಪಗಳಾಗಿ ವಿಭಜಿಸಲು ಜೀರ್ಣಾಂಗ ವ್ಯವಸ್ಥೆಗೆ ಸುಲಭವಾಗುತ್ತದೆ. ಭಾರೀ ಊಟದ ನಂತರ ನೀವು ನೀರನ್ನುಕುಡಿಯದಿದ್ದರೆ ನಿಮ್ಮ ಕರುಳು ಆಹಾರದಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಇನ್ನು ಎಣ್ಣೆಯಲ್ಲಿ ಕರಿದ ತಿನಿಸುಗಳನ್ನ ತಿಂದ ನಂತರ ತಣ್ಣನೆಯ ಆಹಾರ ಅಥವಾ ಐಸ್ ಕ್ರೀಮ್ ನನ್ನು ಸೇವಿಸುವುದರಿಂದ ನಮ್ಮ ನಾಲಗೆಗೆ ರುಚಿಸಿಗಬಹುದು. ಆದರೆ ಅದು ಕರುಳಿಗೆ ಒಳ್ಳೆಯದಲ್ಲ ಹಾಗೂ ಜಿಡ್ಡಿನ ಆಹಾರವನ್ನು ಸರಾಗವಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ಕೊನೆಯದಾಗಿ ಹೇಳುವುದೇನೆಂದರೆ ಎಣ್ಣೆ ಪದಾರ್ಥ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನ ತಿನ್ನುತ್ತೀವೋ ಇಲ್ಲವೋ, ಆದರೆ ಪ್ರತಿ ನಿತ್ಯ ಊಟದ ಬಳಿಕ ವಾಕ್ ಮಾಡುವುದು ಉತ್ತಮ. ಏಕೆಂದರೆ ನಡೆಯುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ