ಇದು ಕರ್ನಾಟಕ ಟಿವಿಯ ಇಂಪ್ಯಾಕ್ಟ್ : ಎಚ್ಚೆತ್ತ ಅಧಿಕಾರಿಗಳಿಂದ ಆಸ್ಪತ್ರೆ ನಾಮಫಲಕ ಸರಿ

ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆಯ ನಾಮಫಲಕವನ್ನು ಮರಕ್ಕೆ ಅಡ್ಡಲಾಗಿ ಇಟ್ಟಂತ ಅಧಿಕಾರಿಗಳ ನಿರ್ಲಕ್ಷ್ಯವನ್ನು, ನಿಮ್ಮ ಕರ್ನಾಟಕ ಟಿವಿ ಎತ್ತಿ ತೋರಿಸಿತ್ತು. ಈ ಪರಿಣಾಮವಾಗಿ, ಇದೀಗ ಎಚ್ಚೆತ್ತ ಅಧಿಕಾರಿಗಳಿಂದ ಆಸ್ಪತ್ರೆಯ ನಾಮಫಲಕವನ್ನು ಸರಿಪಡಿಸಲಾಗಿದೆ. ಈ ಮೂಲಕ ಕರ್ನಾಟಕ ಟಿವಿಯ ಇಂಫ್ಯಾಕ್ಟ್ ಗೆ ಅವ್ಯವಸ್ಥೆಯೊಂದು ಸರಿಯಾದಂತೆ ಆಗಿದೆ.

ಹೌದು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ನಾಮಫಲಕವನ್ನು ಮರಕ್ಕೆ ಅಡ್ಡಲಾಗಿ ನಿಲ್ಲಿಸಿದ್ದ ಬಗ್ಗೆ ಕರ್ನಾಟಕ ಟಿವಿಯಲ್ಲಿ ಇದೇ ಏರ್ಪಿಲ್ 5ನೇ ರಂದು ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು, ಕರ್ನಾಟಕ ಟಿವಿ ಸುದ್ದಿಯನ್ನು ನೋಡಿದ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಮರಕ್ಕೆ ಅಡ್ಡಲಾಗಿ ನಿಲ್ಲಿಸಿದ ಸರ್ಕಾರಿ ಆಸ್ಪತ್ರೆಯ ನಾಮಫಲಕವನ್ನು ಈಗಾ ಅಧಿಕಾರಿಗಳು ಎಚ್ಚೆತ್ತು ದೊಡ್ಡಬಳ್ಳಾಪುರ ನಗರದ ಪ್ರವಾಸಿಮಂದಿರದ ಮುಂಭಾಗ ಸೂಕ್ತ ಸ್ಥಳದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನಾಮಫಲಕವನ್ನು ಇಡುವಂತ ಕೆಲಸ ಈಗಾ ದೊಡ್ಡಬಳ್ಳಾಪುರ ತಾಲ್ಲೂಕಿನ ಆರೋಗ್ಯ ಅಧಿಕಾರಿ ಪರಮೇಶ್ ನೇತೃತ್ವದಲ್ಲಿ ಸರಿಯಾದ ಜಾಗದಲ್ಲಿ ನಾಮಫಲಕವನ್ನು ನಿಲ್ಲಿಸಿದ್ದಾರೆ.

ವರದಿ: ಅಭಿಜಿತ್, ಕರ್ನಾಟಕ ಟಿವಿ ದೊಡ್ಡಬಳ್ಳಾಪುರ

About The Author