ಅಡುಗೆ ಅಂದರೆ ಇದು – JCB ಸ್ಟೈಲ್ ದಾಲ್ ಮಖಾನಿ

ಸಾಮಾನ್ಯವಾಗಿ ಸಭೆ ಸಮಾರಂಭಗಳು ಇದ್ದಾಗ ನೂರು ಸಾವಿರ ಜನರಿಗೆ ಅಡಿಗೆ ಮಾಡಬೇಕಾದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಸಾಂಬಾರು ಪದಾರ್ಥಗಳು, ಅನ್ನಾಹಾರಗಳನ್ನು ಬೇಯಿಸಲಾಗುತ್ತದೆ.

ಸಾಮಾನ್ಯವಾಗಿ ಸಭೆ ಸಮಾರಂಭಗಳು ಇದ್ದಾಗ ನೂರು ಸಾವಿರ ಜನರಿಗೆ ಅಡಿಗೆ ಮಾಡಬೇಕಾದಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಸಾಂಬಾರು ಪದಾರ್ಥಗಳು, ಅನ್ನಾಹಾರಗಳನ್ನು ಬೇಯಿಸಲಾಗುತ್ತದೆ. ಸಾಂಬಾರುಗಳನ್ನು ತಳ ಹಿಡಿಯದಂತೆ ತಿರುಗಿಸಿ ಹದಗೊಳಿಸಲು ದೊಡ್ಡ ದೊಡ್ಡ ಸೌಟುಗಳನ್ನು ಬಳಸಲಾಗುತ್ತದೆ.

ಆದರೆ ಇಲ್ಲೊಂದು ಕಡೆ ದಾಲ್ ಮಖಾನಿಯನ್ನು ತಳ ಹಿಡಿಯದಂತೆ ತಿರುಗಿಸುವುದಕ್ಕೆ ಜೇಸಿಬಿಯನ್ನು ಬಳಸಲಾಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಅಚ್ಚರಿ ಹಾಗೂ ಆಕ್ರೋಶ ಎರಡನ್ನು ವ್ಯಕ್ತಪಡಿಸಿದ್ದಾರೆ.

ದಾಲ್ ಮಖಾನಿ ಉತ್ತರ ಭಾರತದ ಒಂದು ಸ್ವಾದಿಷ್ಟ ಆಹಾರ. ಈ ದಾಲ್ ಮಖಾನ್ ಅನೇಕ ಆಹಾರಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಉತ್ತರ ಭಾರತದ ಮದುವೆಯ ಆಹಾರದ ಮೆನುವಿನಲ್ಲಿ ಇದು ಕಡ್ಡಾಯವಾಗಿ ಇದ್ದೇ ಇರುತ್ತದೆ. ಇದನ್ನು ತಯಾರಿಸುವಾಗ ಜಾಗರೂಕವಾಗಿರಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದರೂ ತಳ ಹಿಡಿದು ಬಿಡುತ್ತದೆ. ದೊಡ್ಡ ಮಟ್ಟದಲ್ಲಿ ಇದನ್ನು ತಯಾರಿಸುವ ವೇಳೆ ಆಗಾಗ ತಿರುಗಿಸುತ್ತಲೇ ಇರಬೇಕಾಗುತ್ತದೆ.

ಜೆಸಿಬಿಯನ್ನು ಸಾಮಾನ್ಯವಾಗಿ ನಿವೇಶನ ಮಾಡುವುದಕ್ಕೆ ನೆಲಸಮತಟ್ಟು ಮಾಡುವುದಕ್ಕೆ ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ತೆರವು ಕಾರ್ಯಾಚರಣೆ ವೇಳೆ ಚರಂಡಿ ಸ್ವಚ್ಛತೆಯ ಕಾರ್ಯದಲ್ಲಿ ಬಳಸಲಾಗುತ್ತದೆ. ಆದರೆ ಇಲ್ಲಿ ಆಹಾರ ತಯಾರಿಕೆಗೆ ಬಳಸಲಾಗಿದ್ದು, ಈ ವೀಡಿಯೋ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author