www.karnatakatv.net :ಹುಬ್ಬಳ್ಳಿ : ಬಿಜೆಪಿ ಮತ್ತೊಮ್ಮೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದು ಖಚಿತ. ಈ ಬಾರಿ 60 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಅಂತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಪಾಲಿಕೆ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಶೆಟ್ಟರ್, ಬಿಜೆಪಿ ಚುನಾವಣಾ ವಿಚಾರದಲ್ಲಿ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ, ಈಗಾಗಲೇ ಹಲವಾರು ವಾರ್ಡ್ ಗಳಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. 82 ಸೀಟು ಹಂಚಿಕೆ ಸವಾಲಾಗಿತ್ತು. ಆದ್ರೂ ಕೆಲವರಲ್ಲಿ ಅಸಮಾಧಾನವಿದೆ ಆದ್ರೂ ಬೆಂಬಲ ಜನರಿಂದ ಬೆಂಬಲವಿದೆ, ಹುಬ್ಬಳ್ಳಿಯನ್ನು ನಗರ ಮಾಡಲು ಬಿಜೆಪಿ ಪಣತೊಟ್ಟಿದೆ ಅಂತ ಇದೇ ವೇಳೆ ಶೆಟ್ಟರ್ ತಿಳಿಸಿದ್ರು.
ಈ ಬಾರಿ ವಿದ್ಯಾವಂತರಿಗೆ ಟಿಕೆಟ್ ನೀಡಿದ್ದು, ಮೂರನೇ ಬಾರಿಗೂ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು 60 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದ್ರು.
ಎಎಪಿ ತಮ್ಮ ಅಭ್ಯರ್ಥಿಗಳಿಗೆ ಧಮ್ಕಿ ಹಾಕಿದ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವುದೇ ಗೂಂಡಾ ರಾಜಕೀಯ ಮಾಡಿಲ್ಲ. ಇವೆಲ್ಲಾ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತರೋ ಪ್ರಯತ್ನ ಅಂತ ಹೇಳಿದ್ರು.
ಪಾಲಿಕೆಯಲ್ಲಿ ಹೆಚ್ಚಿನ ಸ್ಥಾನ ಗೆಲುವ ವಿಶ್ವಾಸವಿದೆ ಎಂದು ಇದೇ ವೇಳೆ ಉಸ್ಥಿತರಿದ್ದ ಶಂಕರ್ ಪಾಟೀಲ್ ಮುನ್ನೇನಕೊಪ್ಪ ಅವಳಿ ನಗರದ ಅಭಿವೃದ್ಧಿಗೆ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದ್ರು.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ