ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ಪವನ್ ಅಭಿಮಾನಿಗಳು ದುರಂತ ಅಂತ್ಯ ಕಂಡಿದ್ದಾರೆ. ನೆಚ್ಚಿನ ನಟನ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್ ಕಟ್ಟುತ್ತಿದ್ದ ವೇಳೆ ಶಾಕ್ ಹೊಡೆದ ಪರಿಣಾಮ ಮೂವರು ಅಭಿಮಾನಿಗಳು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಾಂತಿಪುರಂ ನಗರದಲ್ಲಿ ಈ ಅವಘಡ ಸಂಭವಿಸಿದೆ. ಮೃತರಾದ ಮೂವರು ಅಭಿಮಾನಿಗಳು ಜನಸೇನಾ ಪಕ್ಷದ ಬೆಂಬಲಿಗರಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು ಮೃತರ ಅಗಲಿಕೆಗೆ ವಿಷಾದ ವ್ಯಕ್ತಪಡಿಸಿರೋ ಜನಸೇನಾ ಪಕ್ಷ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದೆ,
ಇನ್ನು ಇದೇ ವಿಚಾರವಾಗಿ ಮಾತನಾಡಿದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಲ್ಲಿ ಈ ಮೊದಲೇ ಮನವಿ ಮಾಡಿದ್ದೆ. ದಯಮಾಡಿ ನಿಮ್ಮ ಜೀವವನ್ನ ಸಂಕಷ್ಟಕ್ಕೆ ನೂಕಬೇಡಿ ಅಂತಾ ಮನವಿ ಮಾಡಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿಗಳು ಈ ರೀತಿ ದುರಂತ ಅಂತ್ಯ ಕಂಡಿರೋದು ಇದೇ ಮೊದಲೇನಲ್ಲ.2018ರಲ್ಲೂ ವೈಜಾಗ್ನ ಪಾಯಕರೋಪೇಟ ಎಂಬಲ್ಲಿ ಪವನ್ ಇಬ್ಬರು ಅಭಿಮಾನಿಗಳು ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದರು,