Sunday, July 6, 2025

Latest Posts

ಹುಬ್ಬಳ್ಳಿಯ ಮೂರು ದಿಗ್ಗಜರು ದಿಲ್ಲಿಗೆ : ಮಂತ್ರಿ ಸ್ಥಾನ ಯಾರ ಹೆಗಲಿಗೆ..?

- Advertisement -

Hubli News: ಹುಬ್ಬಳ್ಳಿ : ಅವರು ಮೂವರು ರಾಜಕೀಯ ದಿಗ್ಗಜ ನಾಯಕರು. ಇಬ್ಬರು ಮಾಜಿ ಸಿಎಮ್ ಗಳು. ಮೂವರು ಒಂದೇ ನಗರದವರು ಅನ್ನೋದು ಮತ್ತೊಂದು ವಿಶೇಷ. ಒಬ್ಬರು ಮೋದಿ ಸನಿಹ ಇದ್ದವರು. ಮೂವರು ಈ ಸಾರಿ ಒಂದೇ ಬಾರಿಗೆ ದೆಹಲಿಗೆ ಹೊರಟಿದ್ದಾರೆ. ಮೂವರು ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಸಂಸತ್ ಪ್ರವೇಶ ಮಾಡಿದ್ದಾರೆ. ಇಬ್ಬರು ಮಾಜಿ ಸಿಎಮ್ ಗಳು, ಮತ್ತೊಬ್ಬರು ಮಾಜಿ ಕೇಂದ್ರ ಮಂತ್ರಿಗಳು ಇದೀಗ ಮಂತ್ರಿಗಿರಿಗಾಗಿ ಭರ್ಜರಿ ಲಾಭಿ ನಡೆಸಿದ್ದಾರೆ. ಒಂದೇ ನಗರದಲ್ಲಿದ್ದ ಮೂವರು ದಿಗ್ಗಜ ನಾಯಕರಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಅನ್ನೋದು ಸದ್ಯದ ಕೂತುಹಲವಾಗಿದೆ.

ವಾಣಿಜ್ಯ ನಗರಿ, ಚೋಟಾ ಮುಂಬೈ ಎಂದು ಕರೆಸಿಕೊಳ್ಳುವ ಪ್ರದೇಶ. ಪೊಲಟಿಕಲ್ ಪವರ್ ಹೌಸ್ ಆಗಿಯೋ ಹುಬ್ಬಳ್ಳಿ ಸಾಕಷ್ಟು ಜನರಿಗೆ ರಾಜಕೀಯ ಜನ್ಮ ನೀಡಿದೆ. ಇದೇ ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟದಿಂದ ಕೆಲವರು ರಾಜಕೀಯದಲ್ಲಿ ಗಟ್ಟಿ ನೆಲೆ ಕಂಡು ಕಂಡಿದ್ದಾರೆ. ಇದೇ ಹುಬ್ಬಳ್ಳಿ ಧಾರವಾಡ ಬಿಜೆಪಿ ಭದ್ರಕೋಟೆಯೂ ಹೌದು.

ಇದೀಗ ಹುಬ್ಬಳ್ಳಿಯಲ್ಲಿದ್ದ ಮೂವರು ಮೊದಲ ಬಾರಿಗೆ ಒಂದೇ ಸಾರಿಗೆ ಸಂಸತ್ ಗೆ ಹೊರಟಿದ್ದಾರೆ. ಹೌದು.. ಅದರಲ್ಲಿ ಇಬ್ಬರು ಮಾಜಿ ಸಿಎಮ್ ಗಳು. ಮತ್ತೊಬ್ಬರು ಮೋದಿ ಸನಿಹ ಇದ್ದವರು. ಹುಬ್ಬಳ್ಳಿಯ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪ್ರಲ್ಲಾದ್ ಜೋಶಿ ಮೂವರು ಒಂದೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ.

ಹಾವೇರಿ ಲೋಕಸಭೆಯಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧೆ ಮಾಡಿದ್ದ ಬಸವರಾಜ್ ಬೊಮ್ಮಾಯಿ ಆನಂದ ಗಡ್ಡದೇವರಮಠ ವಿರುದ್ಧ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಬೆಳಗಾವಿ ಲೋಕಸಭೆಯಿಂದ ಮೃಣಾಲ್ ಹೆಬ್ಬಾಳಕರ್ ವಿರುದ್ಧ ಭರ್ಜರಿ ಗೆಲವು ದಾಖಲಿಸಿದ್ದಾರೆ. ಇನ್ನೂ ಹುಬ್ಬಳ್ಳಿಯ ಪ್ರಲ್ಲಾದ್ ಜೋಶಿ ಧಾರವಾಡ ಲೋಕಸಭೆಯಿಂದ ವಿನೋದ್ ಅಸೂಟಿ ವಿರುದ್ಧ ಐದನೇ ಬಾರಿ ಗೆದ್ದು ಬೀಗಿದ್ದಾರೆ. ಮೂವರು ಒಂದೇ ಬಾರಿ ಗೆದ್ದಿದ್ದು ಇತಿಹಾಸ ಆದ್ರೆ,ಇದೀಗ ಮೂವರು ನಾಯಕರು ಮಂತ್ರಿಗಿರಿಗೂ ಲಾಭಿ ಮಾಡ್ತೀದಾರೆ.

ದೆಹಲಿ ಮಟ್ಟದಲ್ಲಿ ಮೂವರು ನಾಯಕರು ಮೋದಿ ಕ್ಯಾಬಿನೆಟ್ ಸೇರಬೇಕೆಂದು ಲಾಭಿ ಶುರುಮಾಡಿದ್ದಾರೆ.ಕಳೆದ ಬಾರಿ ಮೋದಿ ಸರ್ಕಾರದಲ್ಲಿ ಗಣಿ ಕಲ್ಲಿದ್ದಲು ಸಚಿವರಾಗಿದ್ದ ಜೋಶಿ ಮತ್ತೊಮ್ಮೆ ಮಂತ್ರಿ ಆಗೋ ತವಕದಲ್ಲಿದ್ದಾರೆ. ಧಾರವಾಡ ಲೋಕಸಭೆಯಿಂದ ಪ್ರಲ್ಲಾದ್ ಜೋಶಿ ಐದನೇ ಬಾರಿ ಗೆದ್ದಿದ್ದರು ಈ ಬಾರಿ ಮಂತ್ರಿ ಸ್ಥಾನಕ್ಕೆ ಹುಬ್ಬಳ್ಳಿಯ ಇನ್ನಿಬ್ಬರು ನಾಯಕರು ಅಡ್ಡಗಾಲ ಆಗೋ ಸಾಧ್ಯತೆ ಇದೆ.ಒಂದು ಕಾಲದಲ್ಲಿ ಜೋಡೆತ್ತಿನಂತೆ ಓಡಾಡುತ್ತಿದ್ದ ಜಗದೀಶ್ ಶೆಟ್ಟರ್, ಪ್ರಲ್ಲಾದ್ ಜೋಶಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಬೇರೆಯಾಗಿದ್ರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋಗಿದ್ರು. ಯಾವಾಗ ವಿಜಯೇಂದ್ರ ಅಧ್ಯಕ್ಷರಾದರೋ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಗೆ ಬಂದ್ರು. ಬಿಜೆಪಿಗೆ ಬರೋದಷ್ಟೆ ಅಲ್ಲ, ಬೆಳಗಾವಿಯ ಲೋಕಸಭೆಗೆ ಟಿಕೆಟ್ ಪಡೆದು ಭರ್ಜರಿ ಗೆಲವು ಸಾಧಿಸಿದ್ದಾರೆ. ಈಗಲೂ ಜೋಶಿ ಶೆಟ್ಟರ್ ನಡುವೆ ಅಷ್ಟಕಷ್ಟೆ ಎಂದು ಆಪ್ತ ವಲಯ ಮಾತಾಡ್ತಿದೆ. ಈ ಇಬ್ಬರು ನಾಯಕರ ಮಧ್ಯೆ ಮಾಜಿ ಸಿಎಮ್ ಬಸವರಾಜ್ ಬೊಮ್ಮಾಯಿ ಕೂಡಾ ಮಂತ್ರಿ ರೇಸ್ ನಲ್ಲಿದ್ದಾರೆ.ಅವರು ಕೂಡಾ ಹುಬ್ಬಳ್ಳಿಯವರೇ,ಹುಬ್ಬಳ್ಳಿಯ ಆದರ್ಶ ನಗರದಲ್ಲಿ ಬೊಮ್ಮಾಯಿ ನಿವಾಸ ಇರೋದು.ಮೂವರು ನಾಯಕರ ನಡುವೆ ಮಂತ್ರಿಗಿರಿಗಾಗಿ ಬಿಗ್ ಫೈಟ್ ನಡೆದಿದೆ.ಈಗಾಗಲೇ ಮೂವರು ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಸಂಗಮೇಶ್ ಸತ್ತಿಗೇರಿ ಪೊಲಿಟಿಕಲ್ ಬ್ಯೂರೋ ಹುಬ್ಬಳ್ಳಿ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ

ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಗೇಂದ್ರ

- Advertisement -

Latest Posts

Don't Miss