Mandya: ಮಂಡ್ಯ: ಚೆಸ್ಕಾಂ ಇಲಾಖೆಯಲ್ಲಿ ಅಧಿಕೃತ ನಂಬರ್ ಮಾಡಿಸಿಕೊಂಡು ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ವಿದ್ಯುತ್ ಲೈನ್ ಅನ್ನು, ನಾಲ್ಕು ಜನರು ಸೇರಿಕೊಂಡು ರಾತ್ರಿ ವೇಳೆ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಕಾರಣ, ರೈತನ ಬೆಳೆ ಒಣಗಿ ಹೋಗುವ ಸ್ಥಿತಿಗೆ ತಲುಪಿರೊ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಚಿಕ್ಕಳಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ತಮ್ಮಯ್ಯಶೆಟ್ಟಿ ಎಂಬ ರೈತ ಪೊಲೀಸ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಚಿಕ್ಕಳಲೆ ಗ್ರಾಮದ ಜಯಣ್ಣ, ಯೋಗಟಚಾರಿ, ಮಂಜು, ಮಲ್ಲ ಎಂಬುವರು ಗುಂಪುಕಟ್ಟಿಕೊಂಡು ತಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದು, ಕೊಳವೆಬಾವಿ ಆಶ್ರಿತ ನೀರಾವರಿ ಯೋಜನೆಗೆ ಪಡೆದುಕೊಂಡಿರುವ ವಿದ್ಯುತ್ ಸಂಪರ್ಕವನ್ನು ಪದೇ ಪದೇ ಕಡಿತಗೊಳಿಸುವ ಮೂಲಕ ಪುಂಡಾಟಿಕೆ ಮೆರೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಪುಂಡರ ಹಾವಳಿಯಿಂದಾಗಿ ಕುಂಬಳಕಾಯಿ ಬೆಳೆ ಒಣಗುತ್ತಿದ್ದು ಲಕ್ಷಾಂತರ ರೂ ನಷ್ಟ ಉಂಟಾಗುವ ಆತಂಕ ಎದುರಾಗಿದೆ. ಆದಾಯ ಬರುವ ಕುಂಬಳ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ ಪುಂಡರ ವಿರುದ್ದ ಕ್ರಮಕೈಗೊಂಡು ತಮ್ಮಬೆಳೆ ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.




