Saturday, April 19, 2025

Latest Posts

ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಗೌಡ್ರಿಗೆ ಟಿಕೇಟ್ ಫಿಕ್ಸ್ !

- Advertisement -

Political News

ಬೆಂಗಳೂರು(ಫೆ.7): ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಲು ಜೋರಾಗಿದ್ದು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಜಟಾಪಟಿ ಶುರುವಾಗಿದೆ ಹಾಗಾಗಿ ಆಕಾಂಕ್ಷಿಗಳಿಗೆ ಯಾರಿಗೆ ಟಿಕೆಟ್ ನೀಡಬೇಕು ಅನ್ನುವುದರ ಕುರಿತು ಸಭೆಯನ್ನು ಹಮ್ಮಿಕೊಂಡು. ಕೊನೆಗೂ ಟಿಕೆಟ್ ಅನ್ನು ಅಂತಿಮಗೊಳಿಸಲಾಯಿತು. ಹಾಗಿದ್ರೆ ಟಿಕೆಟ್ ಯಾರಿಗೆ ಅಂತಿಮವಾಯಿತು.

ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಹೆಚ್ ಸಿ ಜವರಾಯಿಗೌಡ ಮತ್ತು ಹನುಮಂತೇಗೌಡ , ನಾ ಮುಂದು ತಾ ಮುಂದು ಎನ್ನುವಂತೆ ಸಾಮಾಜಿಕ ಕಾರ್ಯಗಳ ಮೂಲಕ ಕುಮಾರಸ್ವಾಮಿ ಅವರನ್ನು ಮನವೊಲಿಸಲು ಮುಂದಾಗಿದ್ದರು. ಹಾಗಾದರೆ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾಗ ಕುದ್ದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಕೊನೆಗೂ ಜವರಾಯಿಗೌಡರಿಗೆ ಟಿಕೆಟ್ ಅನ್ನು ಅಂತಿಮಗೊಳಿಸಲಾಯಿತು . ಈ ವೇಳೆ ಮಾತನಾಡಿದ ಕುಮಾರಸ್ವಾಮಿಯವರು ಹಲವಾರು ಬಾರಿ ಜವರಾಯಗೌಡರು ಚುನಾವಣೆಗೆ ಸ್ಪರ್ಧೆ ಮಾಡಿ ಕಡಿಮೆ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ .ಹಾಗಾಗಿ ಬಿದ್ದವರನ್ನು ಮೇಲೆ ಎಬ್ಬಿಸಲೆಂದೇ ಈ ಬಾರಿ ಮತ್ತೊಮ್ಮೆ ಅವರನ್ನೇ ಸ್ಪರ್ಧೆಗೆ ಇಳಿಸಿ ಚುನಾವಣೆಯಲ್ಲಿ ಗೆಲ್ಲಿಸಲು ನಾನೆ ನೇತೃತ್ವ ವಹಿಸಿಕೊಂಡರು ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆಂದು ದೈರ್ಯ ತುಂಬಿದರು.

ಇನ್ನು ಮುಂದುವರೆದು ಕುಮಾರಸ್ವಾಮಿಯವರು ಜವರಾಯ ಗೌಡರ ಕುರಿತು ಮಾತನಾಡುತ್ತಾ ನೀವು ಕಳೆದ ಬಾರಿ ಚುನಾವಣೆಯಲ್ಲಿ ಸರಿಯಾಗಿ ಉಸ್ತುವಾರಿ ವಹಿಸಿಕೊಂಡಿರಲಿಲ್ಲ . ಸಿಕ್ಕಸಿಕ್ಕವರಿಗೆ ಹಣವನ್ನು ಕೊಟ್ಟು ಬೇಕಾಬಿಟ್ಟಿ ದುಡ್ಡು ಖರ್ಚು ಮಾಡಿಕೊಂಡಿದ್ದೀರಿ ಆದರೆ ಈ ಬಾರಿ ಸರಿಯಾದವರನ್ನು ಆಯ್ಕೆ ಮಾಡಿ ಚುನಾವಣೆ ಖರ್ಚು ವೆಚ್ಚ ನಿಭಾಯಿಸಿ ಎಂದು ಸಲಹೆ ನೀಡಿದರು . ಕುಮಾರಸ್ವಾಮಿಯವರ ಮಾತನ್ನು ಕೇಳಿದಂತಹ ಜವರಾಯಗೌಡರು ವೇದಿಕೆ ಮೇಲೆ ಕಣ್ಣೀರು ಹಾಕಿದರು.

ಹಾಗೂ ಇನ್ನೂ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿರುವಂತಹ ಹನುಮಂತೇಗೌಡ ಜವರಾಯಗೌಡ ರವರ ಕುರಿತು ಮಾತನಾಡುತ್ತಾ ಮತ್ತೊಮ್ಮೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜವರಾಯಗೌಡರ ಸ್ಪರ್ಧೆಗಿಳಿಯಲಿದ್ದು ನನ್ನ ಮುಂದಾಳತ್ವದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಅವರನ್ನು ಅತಿ ಬಹುಮತದಿಂದ ಹಾರಿಸಿ ತರಲು ಹಗಲಿರುಳು ಶ್ರಮವಹಿಸುತ್ತೇನೆ . ಹಾಗಾಗಿ ಕಾರ್ಯಕರ್ತರಲ್ಲರು ಕೂಡಿ ಒಟ್ಟಾಗಿ ಚುನಾವಣೆ ಪ್ರಚಾರದಲ್ಲಿ ಕೈಗೊಳ್ಳೊಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.

ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಪ್ರಬಲ ಪೈಪೋಟಿ ಕೊಡಲು ಮುಂದಾಗಿರುವ ಜವರಾಯ ಗೌಡರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮುಂದಾಳತ್ವದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ ಎಂದು ಜವರಾಯ ಗೌಡರಿಗೆ ಮಾತು ಕೊಟ್ಟಿದ್ದಾರೆ. ಹಾಗಾದರೆ ಈ ಬಾರಿ ಚುನಾವಣೆ ಪ್ರಚಾರ ಹೇಗಿಲ್ಲ ನಡೆಯಲಿದೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

- Advertisement -

Latest Posts

Don't Miss