Saturday, July 27, 2024

Latest Posts

Tiger nail: ವರದಿ ಬರುವ ಮುನ್ನವೇ ಕ್ಲೀನ್ ಚೀಟ್; ಹುಲಿ ಉಗುರಿನ ಪದಕ..!

- Advertisement -

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ವ್ಯಕ್ತಿಗಳ ಮನೆಯಲ್ಲಿ ರಾಜ್ಯದೆಲ್ಲೆಡೆ ಶೋಧ ಮುಂದುವರಿದಿದ್ದು, ನಗರದಲ್ಲಿ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿಯ ನಿವಾಸ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಆರ್ಯವರ್ಧನ್ ಗುರೂಜಿ, ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಾಮರಾಜಪೇಟೆ ಬಳಿಯ ಶಂಕರಪುರದ ಪಂಪ ಮಹಾಕವಿ ರಸ್ತೆಯಲ್ಲಿನ ಆರ್ಯವರ್ಧನ್ ಗುರೂಜಿಯ ಕಚೇರಿ ಮೇಲೆ ದಾಳಿ ನಡೆಸಿದರು. ಕಚೇರಿಯನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು ಆರ್ಯವರ್ಧನ್ ಅವರಿಂದ ಪೆಂಡೆಂಟ್ ಜಪ್ತಿ ಮಾಡಿ, ಹೇಳಿಕೆ ಪಡೆದುಕೊಂಡಿದ್ದಾರೆ.

ವರದಿ ಬರುವ ಮುನ್ನವೇ ಕ್ಲೀನ್‌ಚಿಟ್!

ಸೆಲೆಬ್ರೆಟಿಗಳಿಂದ ವಶಕ್ಕೆ ಪಡೆಯಲಾದ ಹುಲಿ ಉಗುರಿನ ಮಾದರಿಯ ಎಫ್‌ಎಸ್‌ಎಲ್ ವರದಿ ಬರುವುದಕ್ಕೆ ಮುನ್ನವೇ ಅವರ ಬಳಿಯಲ್ಲಿ ದೊರೆತಿರುವ ಹುಲಿ ಉಗುರಿನ ಮಾದರಿ ನಕಲಿ ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದು, ಆ ಮೂಲಕ ಪರೋಕ್ಷವಾಗಿ ಕ್ಲೀನ್‌ಚಿಟ್ ನೀಡುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದೊಂದಿಗೆ ಆರಂಭವಾದ ಪ್ರಕರಣ ಇದೀಗ ಚಲನಚಿತ್ರ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್ ಅವರ ಕೊರಳಿಗೂ ಸುತ್ತಿಕೊಂಡಿದೆ. ಬುಧವಾರ ನಟರ ಮನೆಗಳ ಮೇಲೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಅವರಿಂದ ಹುಲಿ ಉಗುರಿನ ಮಾದರಿಯನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಇನ್ನಷ್ಟೇ ಬರಬೇಕಿದೆ. ಅಷ್ಟರಲ್ಲಾಗಲೇ ಜಗ್ಗೇಶ್ ಹೊರತುಪಡಿಸಿ ಉಳಿದಿಬ್ಬರ ಬಳಿ ಪಡೆಯಲಾದ ಹುಲಿ ಉಗುರಿನ ಮಾದರಿ ನಕಲಿ ಎಂದು ಹಿರಿಯ ಅರಣ್ಯಾಧಿಕಾರಿಗಳೇ ಹೇಳಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಹುಲಿ ಉಗುರು ಹೊಂದಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನಲ್ಲಿ ೫ ಕಡೆ ಪರಿಶೀಲನೆ ನಡೆಸಲಾಗಿದೆ. ದೂರು ಬಂದಿದ್ದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿ ಪರಿಶೀಲಿಸಲಾಗಿದೆ. ದಾಳಿ ವೇಳೆ ವಶಕ್ಕೆ ಪಡೆದ ಹುಲಿ ಉಗುರಿನ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ಅದು ಹುಲಿ ಉಗುರು ಹೌದೋ ಅಲ್ಲವೋ ಎಂಬುದು ಖಚಿತವಾಗಲಿದೆ ಎಂದರು.
ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್‌ಲೈನ್ ವೆಂಕಟೇಶ್ ಮನೆಗೆ ತೆರಳಿ ಪರಿಶೀಲಿಸಿ, ವಿಚಾರಣೆ ಮಾಡಿದ್ದೇವೆ. ನಿಖಿಲ್ ಮತ್ತು ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರುಗಳು ಮೇಲ್ನೋಟಕ್ಕೆ ನಕಲಿ ಎಂಬುದು ಕಂಡುಬಂದಿದೆ. ಇನ್ನು, ಜಗ್ಗೇಶ್ ಮನೆಯಲ್ಲಿ ದೊರೆತ ಹುಲಿ ಉಗುರು ಬಹಳ ಹಳೆಯದ್ದು. ಅದನ್ನು ಪರಿಶೀಲಿಸಲಾಗುತ್ತಿದೆ. ಜಗ್ಗೇಶ್ ಅವರ ಹಿಂದಿನ ವಿಡಿಯೊ ಸ್ಟೇಟ್‌ಮೆಂಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಬದಲಾಯಿಸಿ ನಕಲಿ ಉಗುರು ನೀಡಿದರೆ ಕ್ರಮ:
ಚಲನಚಿತ್ರ ನಟರು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರು ನೀಡುವ ವೇಳೆ ಅದನ್ನು ಬದಲಿಸಿ ನಕಲಿ ಉಗುರು ನೀಡಿದ್ದು ದೃಢಪಟ್ಟರೆ ಅಥವಾ ಆ ಕುರಿತು ಸಾಕ್ಷಿಗಳು ದೊರೆತರೆ ಸಾಕ್ಷಿ ನಾಶದ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಎಲ್ಲ ವಿಧದಲ್ಲೂ ನಾವು ತನಿಖೆ ಮಾಡುತ್ತಿದ್ದೇವೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Drunk and drive; ಕುಡಿದ ಮತ್ತಿನಲ್ಲಿ ಕಾರನ್ನು ಮನೆಯೊಳಗೆ ನುಗ್ಗಿಸಿದ ಮದ್ಯಪ್ರಿಯ..!

ಜಾತ್ರಾ ಮೆರವಣಿಗೆ ವೇಳೆ ಗಲಾಟೆ, ಪೊಲೀಸರ ಮೇಲೆ ಕಲ್ಲು ತೂರಾಟ..!

ಜಿಲ್ಲಾ ಮಕ್ಕಳ ಆಸ್ಪತ್ರೆಯಿಂದ ಐದು ದಿನಗಳ ಗಂಡು ಮಗು ಕಳ್ಳತನ; CCTVಯಲ್ಲಿ ದೃಶ್ಯ ಸೆರೆ

- Advertisement -

Latest Posts

Don't Miss