ಹುಬ್ಬಳ್ಳಿ: ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮನೆಯೊಳಗೆ ನುಗ್ಗಿದ ಘಟನೆ ಹುಬ್ಬಳ್ಳಿಯ ಕೃಷ್ಣಾಪುರ ಬಡಾವಣೆಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಕಾರಲ್ಲಿದ್ದ ನಾಲ್ವರು ಪಾರಾಗಿದ್ದಾರೆ.
ಕುಡಿದ ಮತ್ತಿನಲ್ಲಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡ ಬಂದ ಚಾಲಕ, ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮನೆಯೊಳಗೆ ನುಗ್ಗಿದೆ.ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನುವಂತಿದೆ. ಘಟನೆಯಲ್ಲಿ ಎರಡು ಕಾರು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದೆ
ಕಾರು ಚಾಲಕ ವಾಸಿಮ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಿಲ್ಲಾ ಮಕ್ಕಳ ಆಸ್ಪತ್ರೆಯಿಂದ ಐದು ದಿನಗಳ ಗಂಡು ಮಗು ಕಳ್ಳತನ; CCTVಯಲ್ಲಿ ದೃಶ್ಯ ಸೆರೆ
Collage Student : ಮಧ್ಯಾಹ್ನ ಊಟ ಮುಗಿಸಿ ಹಾಸ್ಟೆಲ್ ಸೇರಿದ ತುಮಕೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು