Saturday, February 8, 2025

Latest Posts

ಜಿಲ್ಲಾ ಮಕ್ಕಳ ಆಸ್ಪತ್ರೆಯಿಂದ ಐದು ದಿನಗಳ ಗಂಡು ಮಗು ಕಳ್ಳತನ; CCTVಯಲ್ಲಿ ದೃಶ್ಯ ಸೆರೆ

- Advertisement -

ಕೋಲಾರ: ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಐದು ದಿನಗಳ ಗಂಡು ಮಗುವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ನಂದಿನಿ, ಪೂವರಸನ್ ದಂಪತಿಯ 5 ದಿನದ ಗಂಡು ಮಗುವನ್ನು ಕಳ್ಳತನ ಮಾಡಲಾಗಿದ್ದು, ಮೂವರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಗುವನ್ನು ಕಳೆದುಕೊಂಡ ದಂಪತಿ ಮಾಲೂರು ಪಟ್ಟಣದ ಪಟೇಲ್ ಬೀದಿಯ ನಿವಾಸಿಗಳಾಗಿದ್ದು, ಕೋಲಾರ ಜಿಲ್ಲಾ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿನ ಹೆರಿಗೆ ನಂತರದ ಕೊಠಡಿಯಲ್ಲಿದ್ದ ಬಾಣಂತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮಗು ಆಟ ಆಡಿಸುವ ಸೋಗಿನಲ್ಲಿ ಮಹಿಳೆಯರು ಕಳ್ಳತನ ಮಾಡಿದ್ದು, 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲಾಗಿತ್ತು.

ಇನ್ನು, ಮಗುವಿಗೆ ಹೃದಯ ಸಂಬಂದಿ ಖಾಯಿಲೆ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಳೆ ಬೆಂಗಳೂರಿಗೆ ದಂಪತಿಗಳು ತೆರಳಬೇಕಿತ್ತು. ಕೋಲಾರ ಮಕ್ಕಳ ಆಸ್ಪತ್ರೆಯಲ್ಲಿ ಭದ್ರತೆ ಲೋಪದಿಂದ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರು ಕಳ್ಳಿಯರು ಮಗು ಕದ್ದು ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಮೂವುರ ಕಳ್ಳಿಯರು ಎಸ್ಕೇಪ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ ನಂದಿನಿ ರೋಧನ ಮುಗಿಲು ಮುಟ್ಟಿದೆ.

Collage Student : ಮಧ್ಯಾಹ್ನ ಊಟ ಮುಗಿಸಿ ಹಾಸ್ಟೆಲ್ ಸೇರಿದ ತುಮಕೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು

ಕಾಂಗ್ರೆಸ್ ನಾಯಕರದ್ದು ತಪ್ಪಿಲ್ಲ ಎಂದರೆ ಅವರೇಕೆ ಹೆದರುತ್ತಾರೆ?: ರಾಜಸ್ಥಾನದಲ್ಲಿ ಇಡಿ ದಾಳಿ ಬಗ್ಗೆ ಪ್ರಲ್ಹಾದ್ ಜೋಶಿ

ನಾಯಿ ಕಚ್ಚಿದಕ್ಕೆ ಠಾಣೆಗೆ ದೂರು; ಕೋಪಕ್ಕೆ ಬೈಕ್‌ಗಳನ್ನೇ ಸುಟ್ಟು ಹಾಕಿ ನಾಯಿ ಮಾಲೀಕ

- Advertisement -

Latest Posts

Don't Miss