Tumukuru News : ಹುಲಿ ಉಗುರು ಪ್ರಕರಣ ಸಂಬಂಧ ಧನಂಜಯ್ ಗುರೂಜಿಯವರ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್ ನಡೆದಿದೆ. ಕುಣಿಗಲ್ ತಾಲೂಕಿನ ಬಿದನಗೆರೆ ಮನೆ, ದೇಗುಲದಲ್ಲಿ ಶೋಧ ನಡೆಸಲಾಗಿದೆ. ಮನೆ ಶೋಧ ವೇಳೆ ಧನಂಜಯ್ ಗುರೂಜಿ ಬಳಿಯಿದ್ದ ಹುಲಿ ಉಗುರು ನಾಪತ್ತೆಯಾಗಿದೆ.
ಗುರೂಜಿ ಹುಲಿ ಉಗುರನ್ನು ಎರಡು ವರ್ಷದ ಹಿಂದೆ ಬಿಸಾಡಿದ್ದೇನೆ ಎಂದು ಹೇಳಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹುಲಿ ಉಗುರು ಪತ್ತೆಯಾದ್ರೆ ಧನಂಜಯ್ ಗುರೂಜಿ ಅರೆಸ್ಟ್ ಗ್ಯಾರೆಂಟಿಯಾಗಿದೆ. ಧನಂಜಯ್ ಗುರೂಜಿ ಹುಲಿ ಉಗುರು ಪದಕದ ಚೈನ್ ಹಾಕಿಕೊಂಡಿದ್ದರು. ಧನಂಜಯ್ ಗುರೂಜಿ ಮನೆ ಮತ್ತು ದೇವಸ್ಥಾನದ ಮೇಲೆ ಅಧಿಕಾರಿಗಳ ರೇಡ್ ನಡೆದಿದೆ. RFO ಜಗದೀಶ್ ಮತ್ತು ಟೀಂ ನಿಂದ ಧನಂಜಯ್ ಗುರೂಜಿ ವಿಚಾರಣೆ ನಡೆಸಿದರು.
ಧನಂಜಯ್ ಈ ಬಗ್ಗೆ ಮಾತನಾಡಿದ್ದು, ನನಗೆ 2018ರಲ್ಲಿ ಭಕ್ತರೊಬ್ಬರು ಹುಲಿ ಉಗುರಿನ ಪದಕ ಕೊಟ್ಟಿದ್ರು, ಎರಡು ವರ್ಷಗಳ ನಂತರ ಅದು ಕಪ್ಪಗಾಯಿತು ಹಾಗಾಗಿ ಎಸೆದೆ. ನಾನು ಅದನ್ನು ಬಿಸಾಕಿದ್ದೇನೆ ಈಗ ನನ್ನತ್ರ ಇಲ್ಲ ಎಂದಿದ್ದಾರೆ. ಅರಣ್ಯ ಇಲಾಖೆ RFO ಜಗದೀಶ್ ತಂಡವು ತನಿಖೆ ಮುಂದುವರಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಉಗುರು ಸಿಕ್ಕರೆ FSL ಪರೀಕ್ಷೆ ನಡೆಸಲಿದ್ದಾರೆ. ಹುಲಿ ಉಗುರು ಪತ್ತೆ ಆದ ತಕ್ಷಣ ಧನಂಜಯ್ ಅರೆಸ್ಟ್ ಪಕ್ಕಾ.
Devara Gudda : ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸಿಲುಕಲಿದೆ ಸರ್ಕಾರ ; ದೇವರಗುಡ್ಡ ಕಾರ್ಣಿಕ ನುಡಿ
Jaggesh : ಜಗ್ಗೇಶ್ ಕತ್ತಲ್ಲೂ ಇದೆ ಹುಲಿ ಉಗುರಿನ ಲಾಕೆಟ್ ; ಅವರೇ ಒಪ್ಪಿಕೊಂಡಿದ್ರು