Monday, October 6, 2025

Latest Posts

Tiger : ಹುಲಿ ಗಣತಿ 2022ರ ವರದಿ ಪ್ರಕಾರ ಕರುನಾಡಿಗೆ 2ನೇ ಸ್ಥಾನ…!

- Advertisement -

State News : ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರವು ಹುಲಿ ಗಣತಿ 2022ರ ರಾಜ್ಯವಾರು ವರದಿಯನ್ನು ಬಿಡುಗಡೆಗೊಳಿಸಿದೆ. ವರದಿ ಪ್ರಕಾರ, ಮೊದಲ ಸ್ಥಾನವನ್ನು ಮಧ್ಯಪ್ರದೇಶ ಪಡೆದುಕೊಂಡಿದ್ದು, ಕರ್ನಾಟಕ ಎರಡನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಉತ್ತರಾಖಂಡ ರಾಜ್ಯ ಪಡೆದುಕೊಂಡಿದೆ.

2022ರ ವರದಿ ಪ್ರಕಾರ, ಕರ್ನಾಟಕದಲ್ಲಿ 563 ಹುಲಿಗಳಿವೆ. ಮೊದಲ ಸ್ಥಾನ ಪಡೆದಿರುವ ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 560 ಹುಲಿಗಳಿವೆ. ಒಟ್ಟಾರೆ ಭಾರತ ದೇಶದಲ್ಲಿ ಒಟ್ಟು ಹುಲಿಗಳ ಸಂಖ್ಯೆ 3,682 ಇದೆ ಎನ್ನಲಾಗಿದೆ.

ಈ ಬಾರಿ ಮೊದಲ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಕರ್ನಾಟಕ ಇತ್ತು. 2018 ರ ಗಣತಿಯಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕಕ್ಕೂ ಕೇವಲ ಎರಡು ಹುಲಿಯಷ್ಟೆ ವ್ಯತ್ಯಾಸ ಇತ್ತು.

ಆದರೆ ಈ ಬಾರಿ 222 ಹುಲಿಗಳ ವ್ಯತ್ಯಾಸ ಕಂಡುಬಂದಿದೆ. ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ.

Award : “ನನ್ನ ಜೀವನ, ನನ್ನ ಸ್ವಚ್ಚ ನಗರ” ಪ್ರಶಸ್ತಿ ಪ್ರದಾನ

Kutumbasree : ಪೆರ್ಲ ಬಯಲಿನಲ್ಲಿ ಎಣ್ಮಕಜೆ ಕುಟುಂಬಶ್ರೀ “ವರ್ಷ ಋತು ಸಂಭ್ರಮ”ಯಶಸ್ವಿ  ಕಾರ್ಯಕ್ರಮ

Siddaramaiah : ಮಂಡ್ಯಕ್ಕೆ ಸಿಎಂ ಭೇಟಿ : ಸ್ಪೀಡ್ ಡಿಟೆಕ್ಟರ್ ಗೆ ಚಾಲನೆ

- Advertisement -

Latest Posts

Don't Miss