Tuesday, October 22, 2024

Latest Posts

ದೀಪಾವಳಿಯಂದು ನಿಮ್ಮ ಮುಖವು ದೀಪದಂತೆ ಹೊಳೆಯಲು ಈ ಟಿಪ್ಸ್ ಅನುಸರಿಸಿ …!

- Advertisement -

Beauty tips:

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಹಬ್ಬಕ್ಕೆ ಮಿಂಚಲು ಮಹಿಳೆಯರು ರೇಷ್ಮೆ ಸೀರೆ, ಮ್ಯಾಚಿಂಗ್ ಇಯರಿಂಗ್ಸ್‌, ಮ್ಯಾಚಿಂಗ್ ಬಳೆಗಳನ್ನು ಸಿದ್ಧಮಾಡಿ ಕೊಳ್ಳುತ್ತಿದ್ದಾರೆ,ಇದರ ಜೊತೆಗೆ ನಿಮ್ಮ ಚರ್ಮವು ಕೂಡ ಹೊಳಿಯುತ್ತಿದ್ದರೆ, ನಿಮ್ಮ ಬಟ್ಟೆಗೆಇನ್ನು ಅಂದ ಹೆಚ್ಚುತ್ತದೆ. ಮತ್ತು ಆಕರ್ಷಕವಾಗಿ ಕಾಣುತ್ತೀರಾ ನಿಮ್ಮ ಮುಖದ ಹೊಳಪು ಹೆಚ್ಚಾಬೇಕಾದರೆ,ಮೊದಲು ನೀವು ನಿಮ್ಮ ಆಹಾರ ಕ್ರಮವನ್ನು ಸರಿಯಾಗಿ ಅನುಸರಿಸಬೇಕು.  ಆರೋಗ್ಯಕರವಾದ ಆಹಾರವನ್ನು ಸೇರಿಸುವುದರಿಂದ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ. ಹಾಗಾದರೆ ಹಬ್ಬದ ದಿನ ಆಕರ್ಷಕವಾಗಿ ಕಾಣಲು ಏನು ಮಾಡಬೇಕು ಎಂದು ತಿಳಿದು ಕೊಳ್ಳೋಣ .

ಆಹಾರದಲ್ಲಿ ನೀವು ಪ್ರತಿದಿನ ವಾಲ್ ನಟ್ಸ್ ಮತ್ತು ಬಾದಾಮಿಗಳನ್ನು ತಪ್ಪದೆ ಸೇವಿಸಬೇಕು.ಇದರಲ್ಲಿ ನಿಮ್ಮ ಚರ್ಮಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳು ಇರುತ್ತದೆ. ಇದು ತ್ವಚೆಯನ್ನು ನಯವಾಗಿರಿಸಲು ಸಹಾಯ ಮಾಡುತ್ತದೆ.ನಿಮ್ಮ ಸ್ಕಿನ್ ಹೈಡ್ರೇಟೆಡ್ ಆಗಿರಲು ಪ್ರತಿದಿನ ಸುಮಾರು 8-10 ಗ್ಲಾಸ್ ನೀರನ್ನು ಕುಡಿಯಬೇಕು,  ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಸಮತೂಲನವಾಗಿ ಸೇವಿಸುವುದು ಬಹಳ ಮುಖ್ಯ,ಇದರಲ್ಲಿ ಸಾಕಷ್ಟು ಪ್ರೋಟೀನ್ ಇರುವುದರಿಂದ ನಿಮ್ಮ ಚರ್ಮ ಆರೋಗ್ಯವಾಗಿ ಕಾಣುತ್ತದೆ. ಇದರ ಜೊತೆಗೆ ನಯವಾಗಿ ಹೊಳೆಯುವ ಕೂದಲಿನ ಆರೈಕೆ ಬಹಳ ಮುಖ್ಯವಾಗಿರುತ್ತದೆ.

ನಿಮ್ಮ ದೇಹದಿಂದ ಎಲ್ಲಾ ರೀತಿಯ ಮಾಲಿನ್ಯಕಾರಕಗಳನ್ನು ಹೊರ ಹಾಕಲು ದಿನಕ್ಕೆ 45-60 ನಿಮಿಷಗಳ ಕಾಲ ವ್ಯಾಯಾಮ ಮಾಡಿ.ಇದು ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ .ಪ್ರತಿ ರಾತ್ರಿ 7-8 ಗಂಟೆಗಳ ಕಾಲ ನಿದ್ರಿಸಿ ಇದು ನಿಮ್ಮ ತ್ವಚೆಯನ್ನು ಸಡಿಲಗೊಳ್ಳಲು ಸಹಾಯ ಮಾಡುತ್ತದೆ. ನೀವು ನಿದ್ದೆ ಮಾಡುವಾಗ ನಿಮ್ಮ ಚರ್ಮವು ಕಾಲಜನ್ ಅನ್ನು ಪುನರುತ್ಪಾದಿಸುತ್ತದೆ ಮತ್ತು UV-ಸಂಬಂಧಿತ ಹಾನಿಯನ್ನು ಸರಿಪಡಿಸುತ್ತದೆ.

ತೆಂಗಿನ ಹಾಲು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ6 ಇತ್ಯಾದಿ ಪೋಷಕಾಂಶಗಳಿವೆ, ಇದು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ತೆಂಗಿನ ಹಾಲು ನಿಮ್ಮ ಚರ್ಮಕ್ಕೆ ಉಪಯೋಗಕಾರಿ ಯಾಗಿದೆ. ಹಾಗೂ ನೀವು ಆಮ್ಲಾವನ್ನು ಸೇವಿಸಿದರೆ ಅದರಲ್ಲಿ ವಿಟಮಿನ್ “ಸಿ” ಹೇರಳವಾಗಿ ಇರುತ್ತದೆ.ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಹಾಗೂ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಕ್ಲೀನಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್‌ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಆದ್ದರಿಂದ ಪ್ರತಿದಿನ ಉತ್ತಮ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್(CTM) ದಿನಚರಿಯನ್ನು ಅನುಸರಿಸಿ. ನಂತರ,ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಪ್ರತಿದಿನ ಸನ್ ಸ್ಕ್ರೀನ್ ಅನ್ನು ಬಳಸಿ.

ಚರ್ಮವನ್ನು ಆರೋಗ್ಯಕರವಾಗಿ ಅಭಿವೃದ್ಧಿಪಡಿಸಲು ಸಮಯ ಬೇಕಾಗುತ್ತದೆ. ಇದು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಅತ್ಯುತ್ತಮ ತ್ವಚೆ ಉತ್ಪನ್ನಗಳ ಬಳಕೆಯಿಂದ ಸಾಧ್ಯವಾಗುತ್ತದೆ. ನಿಮಗೆ ತ್ವರಿತ ಪರಿಹಾರ ಅಗತ್ಯವಿದ್ದರೆ ಫೇಸ್‌ ಮಾಸ್ಕ್ ಅನ್ನು ಪ್ರಯತ್ನಿಸಿ. ಶೀಟ್ ಮಾಸ್ಕ್ ಬಳಸಿ.

ಯೌವನಯುತವಾದ ಚರ್ಮವನ್ನು ಪಡೆಯಬೇಕಾದರೆ ಈ ಫೇಸ್ ಪ್ಯಾಕ್‌ ಅನ್ನು ಬಳಸಿ…!

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

ಕೇವಲ ಒಂದು ತಿಂಗಳಲ್ಲಿ ನಿಮ್ಮ ತೂಕ ಕಡಿಮೆ ಮಾಡಬಹುದು ….!

 

- Advertisement -

Latest Posts

Don't Miss