“ಇಷ್ಟೊತ್ತಿಗೆ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವಾ..?” : ಡಿಕೆಶಿ
ಮೂರು ವರ್ಷದಿಂದ ಬಿಜೆಪಿಯವರು ಯಾಕೆ ಸುಮ್ಮನಿದ್ದರು. ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ವ. ಮೂರು ರ‍್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಕಾಂಗ್ರೆಸ್ ಮಾಡಿದ್ದೆಲ್ಲ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಟ್ವೀಟ್ ಬಗ್ಗೆ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ರ‍್ಷದಿಂದ ಇವರ ಬಾಯಿ ಏನಾಗಿತ್ತು, ಪೆನ್ನು ಏನಾಗಿತ್ತು. ಮೂರು ರ‍್ಷದಿಂದ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.
“ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ” : ಎಚ್.ಡಿ.ಕೆ
ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ನಾಯಕರ ಪ್ರತಿಭಟನೆ ನಡೆಯಿತು. ಈ ವೇಳೆ ಎ ಚ್ ಡಿ ಕುಮಾರ ಸ್ವಾಮಿ, ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ ಹಿಂದಿ ದಿವಸ್ ಗೆ ನಾವು ತೀವ್ರ ವಿರೋದ ಮಾಡ್ತಿವಿ,ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ,ಅಮೃತ ಮಹೋತ್ಸವದ ಆಚರಿಸಿದ್ದೇವೆ,ಒಂದು ರಾಷ್ಟ ಒಂದು ಭಾಷೆ ಎಂದು ಕೇಂದ್ರ ಗೃಹ ಸಚಿವರ ಹೇಳಿದ್ದಾರೆ,ಭಾವನಾತ್ಮಕ ವಿಚಾರಗಳನ್ನ ಕೆದುಕುತ್ತಾ ಇದ್ದಾರೆ,ಎಲ್ಲಾ ರಾಜ್ಯದಲೂ ಹಿಂದಿ ಭಾಷೆಯಿಲ್ಲಾ,ಗುಜಾರಾತಿಗೆ ಹೋದ್ರೆ ಗುಜಾರಾತಿಯಿದೆ,ಒರಿಸಸ್ಸಾಗೆ ಹೋದರೆ ಒರಿಯಾ ಭಾಷೆಯಿದೆ,ಭಾಷೆಯ ಕತ್ತನ್ನು ಹಿಸುಕುವ ಕೆಲಸಕ್ಕೆ ವಿರೋಧ,ಜನತೆಯ ತೆರಿಗೆ ವೆಚ್ಚ ಮಾಡ್ತಿದ್ದಾರೆ,ಪ್ರವಾಹಕ್ಕೆ ದೇಶದ ರಾಜ್ಯದ ನೆರೆ ಹಾವಳಿಗೆ ತುತ್ತಾಗಿರುವ ಜನರ ನೆರವಿಗೆ ಬಂದಿಲ್ಲಾಇದಕ್ಕೆ ನಮ್ಮ ದಿಕ್ಕಾರವಿದೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಎಫ್.ಐ.ಆರ್…?!
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕರ‍್ಟ್ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗೆ ಆದೇಶ ನೀಡಿದೆ. ಕಳೆದ ವಾರ ಈ ಪ್ರಕರಣ ಸಂಬಂಧ ಮರು ವಿಚಾರಣೆಗೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಇಂದು ವಿಚಾರಣೆ ನಡೆದಿದ್ದು ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ. ಬಿಎಸ್ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ ಮರಡಿ, ಸಂಜಯ್ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ
ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನೆಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಫ್ರೀಡಂ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಮೂಲಕ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆಗೆ ಒತ್ತಾಯ ಮಾಡಿದ್ದಾರೆ ಆಮ್ ಆದ್ಮಿ ಪಕ್ಷದ ಕಾರ್ಗಕರ್ತರು. ಸಾರಿಗೆ ನೌಕರರ ಪರವಾಗಿ ಪ್ರತಿಭಟನೆ ನಡೆಸಲಾಯಿತು. ಡಿಪೋ ಮೇನೆಜರ್ ಗಳ ಕಿರುಕುಳ ಹೆಚ್ಚಾಗಿದೆ ಇದರಿಂದ ಬಿಎಂಟಿಸಿ ನೌಕರರ ನಿರಂತರ ಸಾವು ಆಗ್ತಿದೆ ಹಾಗೆಯೆ ಸಾರಿಗೆ ನೌಕರರಿಗೆ ಸಾಕಷ್ಡು ಸಮಸ್ಯೆ ಆಗ್ತಿದೆ ಸಾರಿಗೆ ನೌಕರರ ಸಮಸ್ಯೆಗಳನ್ನ ಸರಿಪಡಿಸುವಲ್ಲಿ ಸಚಿವರು ಹಿಂದೆ ಉಳಿದಿದ್ದಾರೆ ಹೀಗಾಗಿ ಕೂಡಲೇ ಸಾರಿಗೆ ಸಚಿವ ಶ್ರೀರಾಮುಲು ರಾಜಿನಾಮೆ ನೀಡಲಿ ಎಂದು ಪ್ರತಿಭಟನೆ ಮೂಲಕ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ.
ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್ ನಲ್ಲಿ ಬೆಂಕಿ…!
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಒಮಾನ್‌ನ ಮಸ್ಕತ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೊಚ್ಚಿಗೆ ಹೊರಟಿತ್ತು. ವಿಮಾನದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು ೧೪೫ ಪ್ರಯಾಣಿಕರಿದ್ದರು(Pಚಿsseಟಿgeಡಿ). ಅವರೆಲ್ಲರನ್ನು ವಿಮಾನದಿಂದ ರ‍್ಮಿನಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.




