Friday, July 11, 2025

Latest Posts

ಈ ದಿನದ ಪ್ರಮುಖ ಸುದ್ದಿಗಳು…!

- Advertisement -

1.ಕ್ವಾಡ್ ನಲ್ಲಿ ಪ್ರಧಾನಿ ಮೋದಿ…!

ಸೆಪ್ಟಂಬರ್ 24 ರಂದು ಅಮೆರಿಕಾಧ್ಯಕ್ಷ ಜೋ ಬೈಡನ್ ಆಯೋಜಿಸಿರೋ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಭಾಗವಹಿಸಲಿದ್ದಾರೆ. ಸೆ. 25ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರೋ ವಿಶ್ವಸಂಸ್ಥೆ ಸಾಮಾನ್ಯಸಭೆಯ 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ‘ಸಾಮಾನ್ಯ ಚರ್ಚೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

2. 3ನೇ ಡೋಸ್ ಅವಶ್ಯಕತೆಯಿಲ್ಲ…!!

ಕೊರೋನಾದ ತೀವ್ರತೆ ತಡೆಗಟ್ಟಲು ಲಸಿಕೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಜನರಿಗೆ 3ನೇ ಡೋಸ್ ಅವಶ್ಯಕತೆಯೇ ಇಲ್ಲ ಅಂತ ಪ್ಯಾರಿಸ್ ನ ವರದಿಯೊಂದು ತಿಳಿಸಿದೆ. ಕೆಲವು ದೇಶಗಳು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಭಯದಿಂದ ಹೆಚ್ಚುವರಿ ಡೋಸ್‌ಗಳನ್ನು ಶುರು ಮಾಡಿವೆ. ಇದರಿಂದ ಬಡ ರಾಷ್ಟ್ರಗಳಿಗೆ ಸಮರ್ಪಕ ಲಸಿಕೆ ಪೂರೈಕೆ ಅಡ್ಡಿಯಾಗುತ್ತೆ.ಇನ್ನು ಈ ವ್ಯಾಕ್ಸಿನ್ ಗಳು ಡೆಲ್ಟಾ ಸೇರಿದಂತೆ ಎಲ್ಲಾ ಪ್ರಮುಖ ವೈರಸ್ ರೂಪಾಂತರಗಳನ್ನು ತಡೆಗಟ್ಟುತ್ತೆ ಅಂತ ವರದಿ ತಿಳಿಸಿದೆ.

3. ದೇವಾಲಯ ಒಡೆಯೋದು ತಪ್ಪೆಂದ ಈಶ್ವರಪ್ಪ..!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತವಿರೋವಾಗ ದೇವಾಲಯ ಒಡೆದದ್ದು ತಪ್ಪು, ಜಿಲ್ಲಾಧಿಕಾರಿ ದೇವಸ್ಥಾನ ಒಡೆಯಲು ಆದೇಶ ನೀಡಿದ್ದು ತಪ್ಪೇ ಅಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ನ ಆದೇಶಗಳು ಬೇಕಾದಷ್ಟಿವೆ, ಪಟ್ಟಿ ಮಾಡಲಿ, ಆದರೆ ಯಾವ ದೇವಸ್ಥಾನಗಳನ್ನೂ ಒಡೆಯಬಾರದು ಅಂತ ಈಶ್ವರಪ್ಪ ಹೇಳಿದ್ದಾರೆ.

4. ಹಲವು ಗ್ರಾಮಗಳಿಗೆ ಪ್ರವಾಹ ಭೀತಿ…!!

ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 1.77 ಲಕ್ಷ ಕ್ಯೂಸೆಕ್ ನೀರನ್ನ ಹರಿ ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಗೆ ಮತ್ತೊಮ್ಮೆ ಪ್ರವಾಹ ಭೀತಿ‌ ಎದುರಾಗಿದ್ದು, ಲಿಂಗಸುಗೂರು ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ‌ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.ಮಹಾರಾಷ್ಟ್ರದಲ್ಲಿ ಕೊಯ್ನಾ ಜಲಾಶಯ ಭರ್ತಿ ಆಗಿರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ.

5. ಡಿಕೆಶಿ ವಿರುದ್ಧ ವಾರಂಟ್ ಜಾರಿ…!!

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಡಿಕೆಶಿ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ  ಸುಳ್ಯಾದ ವರ್ತಕ ಸಂಘದ ಗಿರಿಧರ್ ರೈ ಕರೆ ಮಾಡಿದ್ದರು . ಈ ವೇಳೆ ವಾಗ್ವಾದದ ನಡುವೆ ಅವಾಚ್ಯ ಶಬ್ಧಗಳು ಬಳಕೆಯಾಗಿತ್ತು. ಇನ್ನು ಈ ಬಗ್ಗೆ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಿಲು ಡಿಕೆಶಿ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ವಾ ರೆಂಟ್ ಜಾರಿಯಾಗಿದ್ದು ಸೆ.29ರಂದು ಕೋರ್ಟ್ ಗೆ ಹಾಜರಾಗುವಂತೆ ತಿಳಿಸಿದೆ.

6. 8.22 ಕ್ಯಾರೆಟ್ ವಜ್ರ ಪತ್ತೆ…!!

ಮಧ್ಯಪ್ರದೇಶದಲ್ಲಿ ಪನ್ನಾ ಜಿಲ್ಲೆಯ ಗಣಿಯಲ್ಲಿ 8.22 ಕ್ಯಾರೆಟ್ ವಜ್ರ ಪತ್ತೆಯಾಗಿದೆ. ಸುಮಾರು 4 ಮಂದಿ ಕಾರ್ಮಿಕರು ಈ ಅತ್ಯಮೂಲ್ಯ ವಜ್ರವನ್ನು ಪತ್ತೆಹಚ್ಚಿದ್ದು ಇದನ್ನು ಈ ತಿಂಗಳ ಕೊನೆಯಲ್ಲಿ ಹರಾಜಿಗಿಡಲಾಗುತ್ತೆ. ಕಳೆದ 15 ವರ್ಷಗಳಿಂದ ಪೆನ್ನಾ ಜಿಲ್ಲೆಯ ವಿವಿಧೆಡೆ ಗಣಿಗಾರಿಕೆ ನಡೆಯುತ್ತಿದ್ದು, ಇದೇ ಮೊದಲ ಬಾರಿ ಹೀರಾಪುರ ತಪರಿಯಾನ್‌ನ ಸಣ್ಣ ಗಣಿಯಲ್ಲಿ ವಜ್ರದ ಹರಳುಗಳು ಸಿಕ್ಕಂತಾಗಿದೆ.

7. ಇಲಿ ಪಾಶಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು,,,!!

ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಶಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವನ್ನಪ್ಪಿರೋ ಘಟನೆ ಮುಂಬೈನಲ್ಲಿ ನಡೆದಿದೆ. 18 ವರ್ಷದ ಧಾರಾವಿ ನಿವಾಸಿ ಅಪ್ಸಾನಾ ಖಾನ್ ಮೃತ ಯುವತಿಯಾಗಿದ್ದಾಳೆ. ನಿದ್ದೆಗಣ್ಣಲ್ಲಿದ್ದ ಅಪ್ಸಾನಾ ಇಲಿ ಪಾಷಾಣವನ್ನು ಬ್ರಷ್ ಗೆ ಹಾಕಿಕೊಂಡು ಹಲ್ಲುಜ್ಜಿದಳು, ಬಳಿಕ ವಿಚಿತ್ರ ವಾಸನೆಯಿಂದಎಚ್ಚೆತ್ತ ಆಕೆಗೆ ಅದು ಇಲಿ ಪಾಷಾಣ ಅಂತ ತಿಳಿಯಿತು . ಕೂಡಲೇ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾಳೆ.

8. ಬಡ ರೈತನಿಗೆ ನೆರವಾದ ನಟ ಪ್ರಕಾಶ್ ರಾಜ್

ಮೈಸೂರಿನ ಶ್ರೀರಂಗಪಟ್ಟಣದ ಬಡ ರೈತನ ಕುಟುಂಬಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಜೆಸಿಬಿ ನೀಡೋ ಮೂಲಕ ನೆರವಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಕಾಶ್ ರಾಜ್, ಜೆಸಿಬಿ ನೀಡುವ ಮೂಲಕ ಆರ್ಥಿಕವಾಗಿ ರೈತನನ್ನು ಸಬಲಗೊಳಿಸೋ ಪ್ರಯತ್ನ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿರೋ ಪ್ರಕಾಶ್ ರಾಜ್ ಇದಕ್ಕಾಗಿ ಫೌಂಡೇಶನ್ ಕೂಡ ಸ್ಥಾಪಿಸಿದ್ದಾರೆ.

9. ಸೋನು ಸೂದ್ ಮೇಲೆ ಐಟಿ ಕಣ್ಣು…??

ಬಹುಬಾಷಾ ನಟ ಸೋನುಸೂದ್ ರ ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ದೇಶ್ ಕೆ ಮೆಂಟರ್ಸ್ ಅನ್ನೋ ಕಾರ್ಯಕ್ರಮದ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಇದೀಗ ಐಟಿ ಸರ್ವೆ ನಡೆಸಿರೋದು ನಾನಾ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇನ್ನು ನಟ ಸೋನು ಮನೆಗೂ ತೆರಳಿದ್ದ ಐಟಿ ಅಧಿಕಾರಿಗಳು ಅಲ್ಲಿಯೂ ಸಮೀಕ್ಷೆ ನಡೆಸಿರೋ ಬಗ್ಗೆ ವರದಿಯಾಗಿದೆ.

10. ಸದ್ಯಕ್ಕಿಲ್ಲ ಭಾರತ-ಪಾಕ್ ಕ್ರಿಕೆಟ್ ಪಂದ್ಯ…!

ಸದ್ಯದ ಮಟ್ಟಿಗೆ ಭಾರತ- ಪಾಕ್  ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆಯೋಜನೆ ಸಾಧ್ಯವಿಲ್ಲ. ಈ ಕುರಿತು ಆತುರದ ನಿರ್ಧಾರದ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಭಾರತ- ಪಾಕಿಸ್ತಾನ ತಂಡಗಳ ನಡುವಣ ಕ್ರಿಕೆಟ್ ಪುನರಾರಂಭ ಸದ್ಯಕ್ಕೆ ಸಾಧ್ಯವಿಲ್ಲ.ರಾಜಕೀಯದ ನಡುವೆ ಕ್ರಿಕೆಟ್ ನಲುಗಿದೆ ಅಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.

- Advertisement -

Latest Posts

Don't Miss