1.ಸಂಬಳ ಏರಿಕೆಗೆ ಪಿಎಂ ನಿರ್ಧಾರ…!
ದೇಶದ ಆರ್ಥಿಕತೆಯನ್ನು ಮೇಲೆತ್ತಲು ಉದ್ಯೋಗಿಗಳ ಸಂಬಳ ಹೆಚ್ಚಿಸುವುದೇ ಪರಿಹಾರ ಅಂತ ಜಪಾನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಫುಮಿಯೊ ಕಿಶಿಡಾ ಹೇಳಿದ್ದಾರೆ..
ದೇಶದ ಸಕಲ ಸಮಸ್ಯೆಗಳಿಗೆ ಸಂಬಳ ಏರಿಕೆಯೇ ಪರಿಹಾರ ಅಂತ ಅಭಿಪ್ರಾಯಪಟ್ಟಿರೋ ಕಿಶಿಡಾ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲಾ ವಲಯಗಳಲ್ಲಿನ ನೌಕರರಿಗೆ ಭತ್ಯೆ ಹೆಚ್ಚಳ ಮಾಡೋ ನಿರೀಕ್ಷೆಯಿದೆ. ಹೀಗಾಗಿ ಕಿಶಿಡಾ ಮೇಲೆ ಎಲ್ಲಾ ರಂಗದ ಉದ್ಯೋಗಿಗಳಿಂದ ಈಗಾಗಲೇ ಮೆಚ್ಚುಗೆ ವ್ಯಕ್ತವಾಗ್ತಿದೆ.
2. ಫ್ರ್ಯಾನ್ಸ್ ಮಾಜಿ ಅಧ್ಯಕ್ಷನಿಗೆ ಜೈಲು ಶಿಕ್ಷೆ…!
2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವಲ್ಲಿ ವಿಫಲರಾದ ಸರ್ಕೋಜಿ, ಅಕ್ರವಾಗಿ ಹಣ ಹಂಚಿಕೆ ವಿಚಾರದಲ್ಲಿ ತಪಿತಸ್ಥ ಅಂತ ಸಾಬೀತಾದ ಹಿನ್ನೆಲೆಯಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ಯಾರಿಸ್ ನ ನ್ಯಾಯಾಲಯ ಆದೇಶಿದೆ.
ಇನ್ನು 66 ವರ್ಷದ ಸರ್ಕೋಜಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ಎಲೆಕ್ಟ್ರಾನಿಕ್ ಟ್ಯಾಗ್ ನೊಂದಿಗೆ ಮನೆಯಲ್ಲಿಯೇ ಶಿಕ್ಷೆಯನ್ನು ಅನುಭವಿಸೋದಾಗಿಯೂ ನ್ಯಾಯಾಧೀಶರು ಆಯ್ಕೆ ನೀಡಿದ್ದಾರೆ.
3. ಮೋದಿಗೆ ಥ್ಯಾಂಕ್ಸ್ ಎಂದ ಬಿಲ್ ಗೇಟ್ಸ್…!
ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ಭಾರತದಲ್ಲಿ ನ್ಯಾಯಸಮ್ಮತ ಆರೋಗ್ಯ ರಕ್ಷಣೆ ಖಚಿತಪಡಿಸುತ್ತದೆ. ಇದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅಂತ ಬಿಲ್ ಗೇಟ್ಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರೋ ಪ್ರಧಾನಿ ಮೋದಿ, ಈ ಯೋಜನೆಯಿಂದ ಭಾರತದ ಆರೋಗ್ಯ ಪ್ರಗತಿ ವೇಗಗೊಳ್ಳಲಿದೆ. ಆರೋಗ್ಯ ಮೂಲಸೌಕರ್ಯದ ಸುಧಾರಣೆಗಾಗಿ ತಂತ್ರಜ್ಞಾನದ ಬಳಕೆ ಹೆಚ್ಚಿಸಲು ಅಪಾರವಾದ ಅವಕಾಶ ಇಲ್ಲಿದೆ. ಅದನ್ನು ಸಾಧಿಸಲು ಭಾರತ ಶ್ರಮಿಸುತ್ತಿದೆ ಅಂತ ತಿಳಿಸಿದ್ದಾರೆ.
4. ಪಂಜಾಬ್ ಗೆ ದೆಹಲಿ ಸಿಎಂ ಬಂಪರ್ ಆಫರ್…!
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮತ್ತು ಉತ್ತಮವಾದ ಚಿಕಿತ್ಸೆ ನೀಡೋದಾಗಿ ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇಂದಿನಿಂದ 2 ದಿನಗಳಕಾಲ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಗ್ಯಾರಂಟಿ ನೀಡಲು ನಾನಿಲ್ಲಿಗೆ ಬಂದಿದ್ದೇನೆ. ಪಂಜಾಬ್‌ನ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಜನರು ಖಾಸಗಿ ಸೌಲಭ್ಯಗಳಿಗೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲೂಟಿ ಮಾಡಲಾಗುತ್ತಿದೆ ಅಂತ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
5. ಕಾಂಗ್ರೆಸ್ ಬಿಡ್ತೀನಿ ಆದ್ರೆ ಬಿಜೆಪಿ ಸೇರಲ್ಲ
ನಾನು ಕಾಂಗ್ರೆಸ್ ತೊರೆಯುವುದು ನಿಶ್ಚಿತ ಆದರೆ, ಬಿಜೆಪಿ ಮಾತ್ರ ಸೇರುವುದಿಲ್ಲ ಅಂತ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಈವರೆಗೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಆದರೆ ಕಾಂಗ್ರೆಸ್ ನಲ್ಲಿಯೇ ಉಳಿಯುವುದಿಲ್ಲ, ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿರುವೆದ್ದೇನೆ ಅಂತ ಸಿಂಗ್ ಹೇಳಿದ್ದಾರೆ. ಈ ಮೂಲಕ ನಿನ್ನೆಯಿಂದ ಅಮರಿಂದರ್ ಬಿಜೆಪಿ ಸೇರ್ಪಡೆಯಾಗೋದು ಪಕ್ಕಾ ಅನ್ನೋ ವಿಚಾರವನ್ನ ತಳ್ಳಿಹಾಕಿದ್ದಾರೆ.
6. 23 MBBS ವಿದ್ಯಾರ್ಥಿಗಳಲ್ಲಿ ಕೊರೋನಾ ಪತ್ತೆ….!
ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯ 23 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ತಗುಲಿದೆ. ಈ ಎಲ್ಲಾ ವಿದ್ಯಾರ್ಥಿಗಳು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಕೂಡ ಸೋಂಕು ತಗುಲಿದೆ. ಇವರ ಪೈಕಿ ಕೆಲವರು ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ. ಇನ್ನ ಕೆಲ ದಿನಗಳ ಹಿಂದಷ್ಟೇ ಕಾಲೇಜಿನಲ್ಲಿ ನಡೆದ ಕೆಲ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
7. ಚಿರತೆ ಜೊತೆ ಹೋರಾಡಿದ ವೀರ ವನಿತೆ..!
ತನ್ನ ಮೇಲೆರಗಿದ ಚಿರತೆಯ ವಿರುದ್ಧ ಹೋರಾಡಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಆರೆ ಡೈರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ವಾಕಿಂಗ್ ಹೋದ ವೇಳೆ ಏಕಾಏಕಿ ಚಿರತೆ ಆಕೆ ಮೇಲೆ ದಾಳಿ ಮಾಡಿದೆ. ಈ ವೇಳೆ ಚಿರತೆ ಜೊತೆ ಸೆಣಸಾಡಿ ಜೀವ ಉಳಿಸಿಕೊಂಡಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಚಿರತೆ ದಾಳಿಯಿಂದಾಗಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
8. ಅ,17ರಂದು ತೀರ್ಥೋದ್ಭವ…!
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಈ ಬಾರಿ ಅಕ್ಟೋಬರ್ 17 ರಂದು ತೀರ್ಥೋದ್ಭವ ನಡೆಯಲಿದೆ.. ಮಧ್ಯಾಹ್ನ 1.11ರ ಮಕರ ಲಗ್ನದಲ್ಲಿ ತೀರ್ಥೋದ್ಭವ ಆಗಲಿದ್ದು, ಭಾಗಮಂಡಲದ ಕೊಡೆ ಪಂಚಾಂಗ ಭಟ್ಟರು ತೀರ್ಥೋದ್ಭವದ ಮೂಹೂರ್ತ ನಿಗದಿಪಡಿಸಿದ್ದಾರೆ.
ಈಗಾಗಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ತೀರ್ಥರೂಪಿಣಿಯಾಗಿ ಕಾವೇರಿತಾಯಿ ಭಕ್ತರಿಗೆ ದರ್ಶನ ನೀಡಲಿದ್ದಾರೆ
9. ‘ ಧಾಕಡ್’ ನಲ್ಲಿ ಮಿಂಚಲಿರುವ ಲೇಡಿ ರೆಬೆಲ್ ಸ್ಟಾರ್…!
ಬಾಲಿವುಡ್ ನ ಲೇಡಿ ರೆಬೆಲ್ ಸ್ಟಾರ್ ಕಂಗನಾ ರಣಾವತ್ ತಲೈವಿ ಚಿತ್ರದ ಬಳಿಕ ಧಾಕಡ್ ಮತ್ತು ತೇಜಸ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಂಜನೀಶ್ ಘಾಯ್ ನಿರ್ದೇಶನದ ಧಾಕಡ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ರಂಗನಾ ಏಜೆಂಟ್ ಆಗ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅರ್ಜುನ್ ರಾಂಪಾಲ್ ಮತ್ತು ದಿವ್ಯ ದತ್ ಕೂಡ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜಸ್ ಸಿನಿಮಾದಲ್ಲಿ ಕಂಗನಾ ಪೈಲಟ್ ಪಾತ್ರದಲ್ಲಿ ಮಿಂಚಲಿದ್ದಾರೆ.
10. ವಿಂಡೀಸ್ ವಿರುದ್ಧ ವೀರ ವನಿತೆಯರ ಗೆಲುವು
ಭಾರತ ಮಹಿಳಾ ತಂಡ ವೆಸ್ಟ್ ಇಂಡೀಸ್ ವಿರುಧ್ಧದ ಏಕದಿನ ಪಂದ್ಯದಲ್ಲಿ 6 ವಿಕಟ್‌ಗಳಿಂದ ಭರ್ಜರಿ ಜಯಗಳಿಸಿದೆ. ಟೀಂ ಇಂಡಿಯಾ ಆರಂಭಿಕ ಆಟಗಾರರ ನೆರವಿನಿಂದ ಕೊನೆಯ ಹಾಗೂ 3ನೇ ಏಕದಿನ ಪಂದ್ಯವನ್ನು 6 ವಿಕಟ್‌ಗಳಿಂದ ಗೆಲುವಿನ ನಗೆ ಬೀರಿದೆ.ವೆಸ್ಟ್ ಇಂಡಿಸ್‌ನಲ್ಲಿ ನೆಡೆಯುತ್ತಿದ್ದ 3 ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯವನ್ನು ಸೋತಿದ್ದ ಭಾರತದ ವನಿತೆಯರ ತಂಡವು ಉಳಿದ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.