Friday, July 11, 2025

Latest Posts

ಈ ದಿನದ ಪ್ರಮುಖ ಸುದ್ಧಿಗಳು..!

- Advertisement -
  1. 1. ಲಖಿಂಪುರ್ ಹಿಂಸಾಚಾರಕ್ಕೆ ಅಮೆರಿಕದಲ್ಲಿ ಖಂಡನೆ..!

ಲಖಿಂಪುರ್ ಖೇರಿಯ ಹಿಂಸಾಚಾರ ಖಂಡನೀಯ ಅಂತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕಾದಲ್ಲಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಆಡಳಿತವಿರೋ ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಅನ್ನೋ ಕಾರಣಕ್ಕೆ ಅಷ್ಟೇ ಅಲ್ಲದೇ ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆದರೂ ಅದರ ಬಗ್ಗೆ ಧ್ವನಿ ಎತ್ತಬೇಕು ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕೆಗೆ ಸರ್ಕಾರದ ಕೆಲಸದ ನಿಮಿತ್ತ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಬೋಸ್ಟನ್ ನಲ್ಲಿದ್ದು, ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ನಡೆದ ಸಂವಾದಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿದ್ದಾರೆ.

  1. 2. ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ..!

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬoಧಿಸಿದoತೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತ್ತು. ಪ್ರಕರಣವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ನಿಯೋಗ ಆಗ್ರಹಿಸಿತು. ಇನ್ನು ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದ ಸಂಗತಿಗಳ ಕುರಿತು ರಾಷ್ಟ್ರಪತಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿರೋದಾಗಿ ನಿಯೋಗ ತಿಳಿಸಿದೆ.

  1. 3. ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಅಂತ ಘೋಷಿಸುತ್ತೆ..!

ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ ಅಂತ ಎಂಐಎo ನಾಯಕ ಓವೈಸಿ ಹೇಳಿಕೆ ನೀಡಿದ್ದಾರೆ. ಮಹಾತ್ಮ ಗಾಂಧಿ ಅವರ ಮನವಿಯ ಮೇರೆಗೆ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದರು ಅನ್ನೋ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಎಂಐಎo ನಾಯಕ ಓವೈಸಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗರು ತಿರುಚಿದ ಇತಿಹಾಸವನ್ನು ಮಂಡಿಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರೆದಲ್ಲಿ ಮಹಾತ್ಮ ಗಾಂಧಿ ಅವರ ಬದಲಾಗಿ, ಸಾವರ್ಕರ್ ಅವರನ್ನೇ ರಾಷ್ಟ್ರಪಿತ ಅಂತ ಘೋಷಿಸಲಿದ್ದಾರೆ” ಎಂದು ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  1. 4. 2-18 ವರ್ಷದವರಿಗೂ ಕೊರೋನಾ ಲಸಿಕೆ..!

ಮಕ್ಕಳಿಗೂ ಲಸಿಕೆ ನೀಡುವ ವಿಚಾರಕ್ಕೆ ಸಂಬoಧಿಸಿದoತೆ ಕೇಂದ್ರ ಸರ್ಕಾರದ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದ 2ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಉಡುಪಿಯಲ್ಲಿ ಮಾತನಾಡಿದ ಬೊಮ್ಮಾಯಿ, 2ರಿಂದ 18 ವರ್ಷದೊಳಗಿನ ಮಕ್ಕಳ ರಕ್ಷಣೆಯ ಬಗ್ಗೆಯೂ ನಾವು ಗಮನ ಹರಿಸಬೇಕಿದೆ. ಈ ಬಗ್ಗೆ ಅಂತಿಮ ನಿರ್ಧಾರ ಆದ ತಕ್ಷಣ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಕೊಡುತ್ತೇವೆ ಅಂತ ಮಾಹಿತಿ ನೀಡಿದ್ರು.

  1. 5. ಕೆಪಿಸಿಸಿಯಿಂದ ಸಲೀಂ ಉಚ್ಚಾಟನೆ..!

ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತಾಗಿ ಮಾತನಾಡಿದ್ದ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಸಲೀಂರನ್ನು ಉಚ್ಚಾಟಿಸಿದ್ದು, ಮಾಜಿ ಸಂಸದ ವಿ.ಎಸ್ ಉಗ್ರಪ್ಪಾಗೆ ನೋಟೀಸ್ ನೀಡಲಾಗಿದೆ. ಪಕ್ಷದಲ್ಲಿ ಅಶಿಸ್ತಿನ ನಡವಳಿಕೆಗೆ ಕಾರಣ ಕೇಳಿ ಕೆಪಿಸಿಸಿ ನೋಟೀಸ್ ಜಾರಿಮಾಡಿದೆ.

  1. 6. ರಾಜ್ಯದಲ್ಲಿ ಇಂದು ಕೊರೋನಾಕ್ಕೆ 357 ಬಲಿ

ರಾಜ್ಯದಲ್ಲಿ ಇಂದು ಒಟ್ಟು 357 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ 10 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 140 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ, ಅಲ್ಲದೆ ಬೆಂಗಳೂರು ಒಂದರಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,621 ಕ್ಕೆ ಏರಿಕೆಯಾದಂತಿದೆ.

  1. 7. ಇಂಡಿಯನ್ ಏರ್ ಲೈನ್ಸ್ ಶೇರು ಜಿಗಿತ

ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮಾರ್ಗಸೂಚಿಯನ್ನು ಸಡಿಲಗೊಳಿಸಿ ಅಕ್ಟೋಬರ್ 18ರಿಂದ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳ ಶೇಕಡಾ 100 ರಷ್ಟು ಫ್ಲೈಟ್ ಗಳ ಹಾರಾಟಕ್ಕೆ ಅನುಮತಿ ನೀಡಿರೋ ಹಿನ್ನೆಲೆಯಲ್ಲಿ ಇಂದು ಇಂಡಿಯನ್ ಏರ್ಲೈನ್ಸ್ ನ ಆಪರೇಟರ್ ಗಳ ಶೇರು ಮಾರುಕಟ್ಟೆಯಲ್ಲಿ ಜಿಗತಗೊಂಡಿದೆ. ಏರ್ ಇಂಡಿಗೋ, ಸ್ಪೈಸ್ ಜೆಟ್ ಶೇರುಗಳು ಕ್ರಮಬದ್ಧವಾಗಿ 4.8 ಮತ್ತು 5.9% ಏರಿಕೆಯಾಗಿವೆ. ಇನ್ನು ಕೋವಿಡ್ ಸೋಂಕು ಹರಡೋ ಭೀತಿಯಿಂದಾಗಿ ಕಳೆದ ವರ್ಷದಿಂದ ವಿಧಿಸಲಾಗಿದ್ದ ಲಾಕ್ ಡೌನ್ ಮತ್ತಿತರ ಕಾರಣಗಳಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ತೀವ್ರ ನಷ್ಟ ಎದುರಿಸಿತ್ತು.

  1. 8. ನಕಲಿ ಚಿನ್ನದ ನಾಣ್ಯ ನೀಡಿ ಸೋತ ಅಭ್ಯರ್ಥಿ

ತಮಿಳುನಾಡಿನ ಕೋಲುಮಣಿವಾಕ್ಕಂ ಪಂಚಾಯತ್ನಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸಾರಥಿ ವಿನಯಾಗಮ್ ಸೋತಿದ್ದಾರೆ. ಇವರು ಮತದಾರರನ್ನು ಆಕರ್ಷಿಸಲು ಲಂಚದ ರೂಪದಲ್ಲಿ ಜನರಿಗೆ ನಕಲಿ ಚಿನ್ನದ ನಾಣ್ಯಗಳನ್ನು ವಿತರಣೆ ಮಾಡಿದ್ದರು ಎಂದು ತಿಳಿದು ಬಂದಿದೆ. ತಮಿಳುನಾಡಿನ 9 ಮರುಸಂಘಟಿತ ಜಿಲ್ಲೆಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅಕ್ಟೋಬರ್ 9ರಂದು ಚುನಾವಣೆ ನಡೆದಿತ್ತು. ಪಕ್ಷೇತರ ಅಭ್ಯರ್ಥಿ ಸಾರಥಿ ವಿನಯಗಮ್ ಕೋಲುಮಣಿವಾಕ್ಕಂ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎರಡನೇ ಹಂತದ ಮತದಾನದ ವೇಳೆ, ಸಾರಥಿ ಬೆಂಬಲಿಗರು ಮತದಾರರಿಗೆ ಚಿನ್ನದ ನಾಣ್ಯಗಳನ್ನು ನೀಡಿ, ಆಟೋ ಚಿಹ್ನೆಗೆ ಮತ ಹಾಕುವಂತೆ ಮನವಿ ಮಾಡಿದರು.

  1. 9. ಬೆಂಗಾಲಿ ಸಿನಿಮಾದತ್ತ ರಶ್ಮಿಕಾ ಒಲವು

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ, ಸೌತ್ ಇಂಡಿಯಾ ಸಿನಿ ಇಂಡಸ್ಟ್ರಿಯಿoದ ಬಾಲಿವುಡ್ ಗೆ ಹಾರಿರೋದು ಎಲ್ಲರಿಗೂ ತಿಳಿದಿರೋ ಸಂಗತಿ. ಆದ್ರೆ ಸದ್ಯ ರಶ್ಮಿಕಾ, ಬೆಂಗಾಲಿ ಸಿನಿ ಇಂಡಸ್ಟ್ರಿಯತ್ತ ಆಸಕ್ತಿ ತೋರಿದ್ದಾರೆ. ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಗಳಲ್ಲಿ ನಟಿಸಿರೋ ರಶ್ಮಿಕಾ ಸದ್ಯ ಮಳೆಯಾಳಂ ಹಾಗೂ ಬೆಂಗಾಲಿ ಚಿತ್ರದಲ್ಲಿ ನಟಿಸುವ ಇಂತಿದ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವರೆಗೂ ರಶ್ಮಿಕಾಗೆ ಮಾಲಿವುಡ್ ಬಾಗಿಲು ತೆರೆದಿಲ್ಲ. ಆದ್ರೆ ಈ ಕಿರಿಕ್ ಬೆಡಗಿ ಬೆಂಗಾಲಿ ಸಿನಿಮಾದಲ್ಲಿ ಆಕ್ಟ್ ಮಾಡಬೇಕೆಂಬ ಇಂಗಿತ ವ್ಯಕ್ತಪಿಡಿಸಿದ್ದಾರೆ.

  1. 10. ಹಿಮಾದಾಸ್ ಗೆ ಕೋವಿಡ್ ಪಾಸಿಟಿವ್

ತರಬೇತಿ ಆರಂಭಿಸಲು ಪಟಿಯಾಲಕ್ಕೆ ಆಗಮಿಸಿದ್ದ ಭಾರತದ ಮಹಿಳಾ ಅಥ್ಲೀಟ್ ಹಿಮಾ ದಾಸ್ ಅವರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂದು ಕಂಡುಬoದಿದೆ. ಸ್ನಾಯುವಿನ ಒತ್ತಡದಿಂದಾಗಿ ಹಿಮಾ ದಾಸ್ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರಿoದ ಟೋಕಿಯೊ ಒಲಿಂಪಿಕ್ಸ್ -2020 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಪಟಿಯಾಲದಲ್ಲಿ ನಡೆಸಿದ ಕಡ್ಡಾಯ ಪರೀಕ್ಷೆಯಲ್ಲಿ ಹಿಮಾದಾಸ್ ಗೆ ಕೊವಿಡ್ ಪಾಸಿಟಿವ್ ಬಂದಿದೆ. ಶಿಬಿರ ಆರಂಭಕ್ಕೂ ಮುನ್ನ ಹಿಮಾ ಗುಣಮುಖರಾಗಲಿದ್ದಾರೆ ಅಂತ ಹಿಮಾದಾಸ್ ಮಾಧ್ಯಮ ವ್ಯವಸ್ಥಾಪಕ ಹೇಳಿದ್ದಾರೆ.

- Advertisement -

Latest Posts

Don't Miss