Friday, July 11, 2025

Latest Posts

ಈ ದಿನದ ಪ್ರಮುಖ ಸುದ್ದಿಗಳು..!

- Advertisement -
  1. 1. ಪಾಕ್ ಗೆ 50 ಲಕ್ಷ ಚೀನಾ ಸಿಬ್ಬಂದಿ…!
    ಸಮರ್ಪಕ ಆರೋಗ್ಯ ಸೇವೆಗಾಗಿ ಇನ್ನು 3 ವರ್ಷಗಳಲ್ಲಿ ಚೀನಾದ 5 ಮಿಲಿಯನ್ ಸಿಬ್ಬಂದಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಇನ್ನು ದೇಶದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸೋ ನಿಟ್ಟಿನಲ್ಲಿ ಪಾಕಿಸ್ತಾನ ಈಗಾಗಲೇ ಚೀನಾ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಚೀನಾದಲ್ಲಿನ ಮೆಡಿಕಲ್ ವಿವಿಗಳು, ಸಂಶೋಧನಾ ಸಂಸ್ಥೆ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳನ್ನು ಚೀನಾ-ಪಾಕಿಸ್ತಾನ ಹೆಲ್ತ್ ಕಾರಿಡಾರ್ ನಡಿ ಸೇರ್ಪಡೆಗೊಳಿಸಲಾಗಿದೆ
  2. 2. ಕೋವಿಶೀಲ್ಡ್ ಮಾನ್ಯಗೊಳಿಸಿದ ಬ್ರಿಟನ್..!
    ಭಾರತದಲ್ಲಿ ತಯಾರಿಸಿ ವಿತರಿಸಲಾಗ್ತಿರೋ ಕೋವಿಶೀಲ್ಡ್ ಲಸಿಕೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳಲ್ಲ ಎಂದಿದ್ದ ಬ್ರಿಟನ್ ಸದ್ಯ ತನ್ನ ವರಸೆ ಬದಲಿಸಿದೆ. ಸದ್ಯ ಕೋವಿಶೀಲ್ಡ್ ನ ಎರಡೂ ಡೋಸ್ ಪಡೆದ ಪ್ರಯಾಣಿಕರು ಬ್ರಿಟನ್ ಗೆ ಬರಬಹುದು ಅಂತ ಬ್ರಿಟನ್ ತಿಳಿಸಿದೆ. ಅಲ್ಲದೆ ತನ್ನ ಮಾರ್ಗಸೂಚಿಯಲ್ಲೂ ಯುಕೆ ತಿದ್ದುಪಡಿ ತಂದಿದೆ. ಈ ಹಿಂದೆ ಭಾರತೀಯರು ಕೋವಿಶೀಲ್ಡ್‌ನ ಎರಡೂ ಡೋಸ್ ಪಡೆದುಕೊಂಡಿದ್ದರೂ ಕೂಡ ಪರಿಗಣಿಸೋದಿಲ್ಲ ಅಂತ ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕೆ ವಿಶ್ವವ್ಯಾಪಿ ಟೀಕೆ ಕೂಡ ವ್ಯಕ್ತವಾಗಿತ್ತು.
  3. 3. ಆಸ್ಟ್ರೇಲಿಯಾದಲ್ಲಿ ಭೂಕಂಪ..!
    ಆಸ್ಟ್ರೇಲಿಯಾದ ಅತಿ ದೊಡ್ಡ ನಗರ ಮೆಲ್ಬರ್ನ್ನಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಹಲವಾರು ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಇನ್ನು ಮೆಲ್ಬರ್ನ್ನಲ್ಲಿನ ರಿಕ್ಟರ್ ಮಾಪನ ಕೇಂದ್ರದಲ್ಲಿ 6.0 ತೀವ್ರತೆ ದಾಖಲಾಗಿದ್ದು ಸುಮಾರು 10 ಕಿ.ಮೀ. ಆಳದಲ್ಲಿ ಭೂಕಂಪ ಅಪ್ಪಳಿಸಿದೆ ಅಂತ ತಜ್ಞರು ತಿಳಿಸಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಮೆಲ್ಬರ್ನ್ ನಗರದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಇನ್ನು ಘಟನೆಯಲ್ಲಿ ಸಾವು ನೋವು ಸಂಭವಿಸಿರೋ ಬಗ್ಗೆ ವರದಿಯಾಗಿಲ್ಲ.
  4. 4. 25 ವರ್ಷಗಳ ಆಡಿಟಿಂಗ್ ಗೆ ಸುಪ್ರೀಂ ಆದೇಶ..!
    ಕೇರಳದ ತಿರುವನಂತಪುರದಲ್ಲಿರುವ ಪದ್ಮನಾಭ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಳೆದ 25 ವರ್ಷಗಳಿಂದ ಆದಾಯ ಮತ್ತು ವೆಚ್ಚಗಳ ಲೆಕ್ಕಪರಿಶೋಧನೆ ಆಗಬೇಕು ಅಂತ ಸುಪ್ರೀಂ ಕೋರ್ಟ್ ತಿಳಿಸಿದೆ. ದೇಗುಲಕ್ಕೆ ಸಂಬಂಧಿಸಿದ ಕಳೆದ 25 ವರ್ಷಗಳ ಲೆಕ್ಕಪರಿಶೋಧನೆಗೆ ವಿನಾಯಿತಿ ನೀಡಬೇಕು ಅಂತ ಟ್ರಸ್ಟ್ ಮನವಿ ಮಾಡಿತ್ತು. ಸದ್ಯ ಈ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌ ‘ಲೆಕ್ಕಪರಿಶೋಧನೆ ಕಾರ್ಯವನ್ನು 3 ತಿಂಗಳೊಳಗೆ ಪೂರ್ಣಗೊಳಿಸಬೇಕು’ ಅಂತ ಸೂಚನೆ ನೀಡಿದೆ.
    5. ಓವೈಸಿ ಮನೆ ಮೇಲೆ ದಾಳಿ- ಐವರ ಬಂಧನ..!
    ಎಐಎಂಎಎಂ ಪಕ್ಷದ ಸಂಸ್ಥಾಪಕ ಅಸಾದುದ್ದಿನ್ ಓವೈಸಿ ಯವರ ಮನೆ ಮೇಲೆ ದಾಳಿ ನಡೆಸಿದ್ದ ಆರೋಪದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
    ನಿನ್ನೆ ಸಂಜೆ ಅಸಾದುದ್ದೀನ್ ಓವೈಸಿಯವರ ದೆಹಲಿಯ ನಿವಾಸದ ಮೇಲೆ ಹಿಂದೂ ಸಂಘಟನೆಯೊಂದರ ಸದಸ್ಯರು ದಾಳಿ ನಡೆಸಿದ್ರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
    ಇನ್ನು ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಓವೈಸಿ ಮನೆ ಮೇಲೆ ಹಿಂದೂ ಸಂಘಟನೆಯ ಸದಸ್ಯರು ದಾಳಿ ಮಾಡಿದ್ದರು ಅಂತ ತಿಳಿದುಬಂದಿದೆ.
  5. 6. ಭಾಷೆ ಸುಧಾರಿಸಿಕೊಳ್ತೀನಿ ಎಂದ ಉಮಾ ಭಾರತಿ..!
    ಸರ್ಕಾರಿ ಅಧಿಕಾರಿಗಳು ನಮ್ಮಂಥಹವರ ಚಪ್ಪಲಿಗಳನ್ನು ಎತ್ತುತ್ತಾರೆ ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ತಮ್ಮ ಭಾಷೆ ಸುಧಾರಿಸಿಕೊಳ್ಳೋದಾಗಿ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು ತಮ್ಮ ಭಾಷೆಯನ್ನು ಸುಧಾರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗೆ ಪತ್ರ ಬರೆದಿರೋ ಉಮಾಭಾರತಿ, ನನ್ನ ಮಾತು ಈಗ ನನಗೇ ತುಂಬಾ ನೋವಾಗಿದೆ ನಾನು ಈಗಿನಿಂದಲೇ ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.
  6. 7. ದೇಶದಲ್ಲಿ ಆಫ್ರಿಕನ್ ಹಂದಿ ಜ್ವರ ಹಾವಳಿ..!
    ಮಾರಕ ಆಫ್ರಿಕನ್ ಹಂದಿ ಜ್ವರ ದೇಶದಲ್ಲಿ ತಲ್ಲಣ ಎಬ್ಬಿಸುತ್ತಿದೆ. ಸದ್ಯ ತ್ರಿಪುರಾದಲ್ಲಿ ಮೂರು ಹಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿರೋದು ಖಚಿತವಾಗಿದೆ. ನಿನ್ನೆಯಷ್ಟೇ 87 ಹಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆದ್ರೆ ಈ ಪೈಕಿ ಮೂರು ಹಂದಿಗಳಲ್ಲಿ ಸೋಂಕು ದೃಡಪಟ್ಟಿದೆ. ಕಳೆದ ಕೆಲ ತಿಂಗಳ ಹಿಂದೆ ಮಿಜೋರಂ ನ 11 ಜಿಲ್ಲೆಗಳಲ್ಲಿ ವ್ಯಾಪಿಸಿದ ಹಂದಿ ಜ್ವರಕ್ಕೆ 9 ಸಾವಿರಕ್ಕೂ ಅಧಿಕ ಹಂದಿಗಳು ಬಲಿಯಾಗಿದ್ವು.
  7. 8. 70 ಸಾವಿರ ಹಿಂದಿರುಗಿಸಿದ ಗೈಡ್ ಗಳು..!
    ಅಹಮದಾಬಾದನ ಖ್ಯಾತ ಪ್ರೇಕ್ಷಣೀಯ ಸ್ಥಳ ಸ್ಟಾಚ್ಯೂ ಆಫ್ ಯುನಿಟಿ ಸಿಬ್ಬಂದಿ ತಮಗೆ ಸಿಕ್ಕಿದ್ದ 70 ಸಾವಿರ ರೂಪಾಯಿ ಹಣವನ್ನು ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕೆಲ ದಿನಗಳ ಹಿಂದೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶ ಮೂಲದ ಮಹಿಳೆ ಹೋಟೆಲ್ ನಲ್ಲಿ ತಿಂಡಿ ತಿಂದ ಬಳಿಕ ತಮ್ಮ ಪರ್ಸ್ ಮರೆತು ಅಲ್ಲೇ ಬಿಟ್ಟು ಹೋಗಿದ್ರು.ಇದನ್ನು ಗಮನಿಸಿದ ಗೈಡ್ ಗಳು ಆ ಪರ್ಸ್ ನಲ್ಲಿದ್ದ ದಾಖಲೆಗಳ ಮೂಲಕ ಮಹಿಳೆಯನ್ನು ಪತ್ತೆಹಚ್ಚಿ ಆಕೆಗೆ ಹಸ್ತಾಂತರಿಸಿದ್ದಾರೆ. 70 ಸಾವಿರ ಕಳೆದುಕೊಂಡು ಚಿಂತೆಗೀಡಾಗಿದ್ದ ಮಹಿಳೆ ಸದ್ಯ ನೆಮ್ಮಿದಿಯ ನಿಟ್ಟುಸಿರು ಬಿಟ್ಟಿದ್ದಾರೆ.
  8. 9. ಮಹಿಳೆಯರ ಏಕದಿನ ರ‍್ಯಾಂಕಿಂಗ್ ನಲ್ಲಿ ಮಿಥಾಲಿ ರಾಜ್ ಅಗ್ರಸ್ಥಾನ..!
  9. ಮಹಿಳೆಯರ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಿಥಾಲಿ ರಾಜ್ ಪ್ರಥಮ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ಜೊತೆದಿನ ಮೊದಲ ಪಂದ್ಯದಲ್ಲಿ ಔಟಾಗದೆ 79 ರನ್ ಗಳಿಸಿದ್ದ ನ್ಯೂಜಿಲೆಂಡ್ ನ ಆಮಿ ಆಗ್ರ ಐವರೊಳಗಿನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಸಿಸಿ ಪಟ್ಟಿಯಲ್ಲಿ ಮಿಥಾಲಿ ರಾಜ್ 762 ರ‍್ಯಾಂಕಿಂಗ್ ಹೊಂದಿದ್ದಾರೆ. ಸ್ಮೃತಿ ಮಂದಾನ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾದ ಜೂಲನ್ ಗೋಸ್ವಾಮಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
  10. 10. ಪಿ.ವಿ ಸಿಂಧು ಜೊತೆ ದೀಪಿಕಾ ಬ್ಯಾಡ್ಮಿಂಟನ್..!
    ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ್ದು, ಈ ಬಗ್ಗೆ ದೀಪಿಕಾ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಸಿಂಧು ಜೊತೆ ಕ್ಯಾಲರಿ ಬರ್ನ್ ಮಾಡುತ್ತಿರೋದಾಗಿ ದೀಪಿಕಾ ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ದೀಪಿಕಾ ಕೂಡ ಇತ್ತೀಚೆಗೆಪಿವಿ ಸಿಂಧು ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

- Advertisement -

Latest Posts

Don't Miss