Sunday, September 8, 2024

Latest Posts

ಈ ದಿನದ ಪ್ರಮುಖ ಸುದ್ದಿಗಳು..!

- Advertisement -

1.ಪಾಕ್ ಮೇಲೆ ಕಣ್ಣಿಡಬೇಕೆಂದ ಕಮಲಾ ಹ್ಯಾರಿಸ್

ಭಯೋತ್ಪಾದಕರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದ್ದು ಈ ಬಗ್ಗೆ ಸೂಕ್ಷ್ಮ ವಾಗಿ ಗಮನಿಸಬೇಕು ಅಂತ ಪ್ರಧಾನಿ ಮೋದಿಗೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ನಿನ್ನೆ ಅಮೆರಿಕಾದಲ್ಲಿ ಮೋದಿ, ಕಮಲಾ ಹ್ಯಾರಿಸ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿದ್ದರು. ಈ ವೇಳೆ ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ತಾಲಿಬಾನ್ ಆಡಳಿತ ಸೇರಿದಂತೆ ಉಭಯ ರಾಷ್ಟ್ರಗಳ ಭದ್ರತೆ ಕುರಿತಾಗಿ  ಚರ್ಚಿಸಿದ್ರು. ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲ ಬಗ್ಗೆ ಸೂಕ್ಷ್ಮವಾಗಿ ಪರಿಸ್ಥಿತಿ ಮತ್ತು ಆಗುಹೋಗುಗಳನ್ನು ಗಮನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ತಿಳಿಸಿದ್ದಾರೆ. 

2. ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ..!

5 ದಿನಗಳ ಅಮೆರಿಕಾ ಪ್ರವಾಸದಲ್ಲಿರೋ ಪ್ರಧಾನ ಮೋದಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆಯನ್ನೂ ಮೋದಿ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ಅಜ್ಜನಿಗೆ ಸೇರಿದ ನೋಟಿಫಿಕೇಷನ್ ಒಂದರ ಫೋಟೋ ಫ್ರೇಮ್, ವಾರಣಾಸಿಯಲ್ಲಿ ತಯಾರಿಸಿದ ವಿಶಿಷ್ಟ ಗುಲಾಬಿ ಮೀನಾಕ್ಷಿ ಚೆಮ್ ಬೋರ್ಡ್, ಹಾಗೆಯೇ ಅಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಗೆ ಸಿಲ್ವರ್ ಗುಲಾಬಿ ಮೀನಾಕ್ಷಿ ಶಿಪ್ ಉಡುಗೊರೆಯಾಗಿ ನೀಡಿದ್ದಾರೆ, ಇನ್ನು ಜಪಾನ್ ಪ್ರಧಾನಿ ಯೋಶಿಹಿದೆ ಅವರಿಗೆ ಬುದ್ಧನ ಶ್ರೀಗಂಧದ ಪ್ರತಿಮೆಯೊಂದನ್ನು ಉಡುಗೊರೆಯರಾಗಿ ನೀಡಿದ್ದಾರೆ.

3. ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಮೋದಿಗೆ ಕಿವಿಮಾತು ಹೇಳಿ- ಜೋ ಬೈಡನ್ ಗೆ ರೈತ ಮುಖಂಡ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸದಲ್ಲಿರೋ ಮಧ್ಯೆಯೇ ಭಾರತದ ರೈತರ ಸಮಸ್ಯೆ ಬಗ್ಗ ಮೋದಿ ಜೊತೆ ಚರ್ಚಿಸಿ ಅಂತ ರೈತ ಮುಖಂಡ ರಾಕೇಶ್ ಟಿಕಾಯತ್ ಜೋ ಬೈಡನ್ ಗೆ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಕಳೆದ 11 ತಿಂಗಳಿನಿಂದ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದ್ರಲ್ಲಿ ಸುಮಾರು 700 ರೈತರು ಪ್ರಾಣತೆತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ 3 ವಿವಾದಿತ ಕೃಷಿ ಕಾಯ್ದೆಗಳೇ ಕಾರಣ, ದಯವಿಟ್ಟು ಪ್ರಧಾನಿ ಮೋದಿ ಜೊತೆ ಈ ಬಗ್ಗೆ ಕೂಡ ಚರ್ಚೆ ನಡೆಸಿ. ಭಾರತದಲ್ಲಿ ಜಾರಿಯಲ್ಲಿರೋ ಈ ಕಾಯ್ದೆಗಳನ್ನು ರದ್ದುಗಳಿಸುವಂತೆ ಕಿವಿಮಾತು ಹೇಳಿ ಅಂತ ಬೈಡನ್ ಗೆ ಟಿಕಾಯತ್ ಮನವಿ ಮಾಡಿದ್ದಾರೆ.

4. ಸಾಲುಸಾಲು ಹಬ್ಬಗಳ ಹಿನ್ನೆಲೆ- ರಾಜ್ಯಗಳಿಗೆ ಕೇಂದ್ರ ಹೊಸ ಮಾರ್ಗಸೂಚಿ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ರಚಿಸೋ ಮೂಲಕ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ. ಸಾಲು ಸಾಲು ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಜನರ ಗುಂಪುಗೂಡದಂತೆ ನಿಯಂತ್ರಣ ವಹಿಸೋದು ಅತ್ಯವಶ್ಯಕ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಡ್ಡಾಯವಾಗಿ ಜನರು ಗುಂಪುಗೂಡುವುದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಕನಿಷ್ಟ ಮಂದಿ ಗುಂಪುಗೂಡುವಿಕೆ ಅನಿವಾರ್ಯವಾದಲ್ಲಿ ಇದಕ್ಕೆ ಪೂರ್ವಾನುಮತಿ ಪಡೆದಿರಬೇಕು. ಪಾಸಿಟಿವಿಟಿ ದರ ಶೇ 5ರಷ್ಟು  ಇರುವ ಜಿಲ್ಲೆಗಳಲ್ಲಿ ಮಾತ್ರ ಕನಿಷ್ಟ ಜನ ಸೇರುವಿಕೆಗೆ ಷರತ್ತುಬದ್ಧ ಅನುಮತಿ ನೀಡಬೇಕು ಅಂತ ಮಾರ್ಗಸೂಚಿ ಹೊರಡಿಸಿದೆ.

5. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ- ಟಾಂಗಾ ಏರಿದ ಕಾಂಗ್ರೆಸ್ ನಾಯಕರು

ಪೆಟ್ರೋಲ್ –ಡೀಸೆಲೆ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಿಡಿದೆದ್ದಿರೋ ಕಾಂಗ್ರೆಸ್ ಬಿಜೆಪಿ ವಿರುದ್ಧ ಸಮರ ಸಾರಿದೆ. ಈ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಟಾಂಗಾ ಏರಿ ವಿಧಾನಸೌಧಕ್ಕೆ ಜಾಥಾ ನಡೆಸೋ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು.

ವಿಧಾನಸಭಾ ಅಧಿವೇಶನದ ಕೊನೆಯ ದಿನದ ಕಲಾಪದ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ಸೇರಿದಂತೆ ಕಾರ್ಯಕರ್ತರು ವಿಧಾನಸೌಧದವರೆಗೂ ಟಾಂಗಾ ಮೂಲಕ ಜಾಥಾ ನಡೆಸಿದ್ರು.

6. ಬಿ.ಎಸ್ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ…!

ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಅಂತ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಸ್ಪೀಕರ್ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಿಸಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಇಂದು ವಿಧಾನಮಂಡಲ ಜಂಟಿ ಅಧಿವೇಶನ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ.

ಇನ್ನು ಲೋಕಸಭೆ ಮಾದರಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೂಚನೆ ನೀಡಿದ್ದ ಹಿನ್ನೆಯಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ ಅಂತ ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ.

7. ಪ್ರತಿದಿನ ಸ್ನಾನ ಮಾಡದ ಪತ್ನಿಯ ವಿಚ್ಛೇದನಕ್ಕೆ ಮುಂದಾದ ಪತಿರಾಯ…!

ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ತನ್ನ ಹೆಂಡತಿ ದಿನವೂ ಸ್ನಾನ ಮಾಡೋದಿಲ್ಲ, ಸ್ವಚ್ಛತೆಯ ಬಗ್ಗೆ ಜ್ಞಾನವಿಲ್ಲದ ಆಕೆಯೊಂದಿಗೆ ಸಂಸಾರ ಮಾಡೋಕೆ ಸಾಧ್ಯವಿಲ್ಲ ಅಂತ ತ್ರಿವಳಿ ತಲಾಖ್ ನೀಡಿರೋ ಘಟನೆ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ. ತ್ರಿವಳಿ ತಲಾಖ್ಗೆ ನಿಷೇಧವಿದ್ದರೂ ನನಗೆ ತಲಾಖ್ ನೀಡಿದ್ದಾರೆ ಅಂತ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿರೋ ದಂಪತಿಗೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಸ್ನಾನ ಮಾಡೋದಿಲ್ಲ ಅಂತ ನೆಪವೊಡ್ಡಿ ಗಂಡ ತಲಾಖ್ ನೀಡಿರುವುದಾಗಿ ಮಹಿಳೆ ದೂರು ನೀಡಿದ್ದು, ತಾನು ಗಂಡನೊಂದಿಗೆ ಬದುಕಬೇಕೆನ್ನುತ್ತಿದ್ದಾಳೆ.

8. ಆನೆ ರಕ್ಷಿಸಲು ಹೋಗಿ ಮಗುಚಿದ ಬೋಟ್

ನದಿಯ ನೀರಿನ ಪ್ರವಾಹಕ್ಕೆ ಸಿಲುಕಿದ ಆನೆ ರಕ್ಷಣೆ ಕಾರ್ಯಾಚರಣೆಗೆ ತೆರಳಿದ ಬೋಟ್ ಮಗುಚಿದ ಘಟನೆ ಒಡಿಶ್ಶಾದಲ್ಲಿ ನಡೆದಿದೆ. ಇಲ್ಲಿನ ಕಟರ್ ಸೇತುವೆ ಬಳಿಯ ಮಹಾನದಿಗೆ ನೀರು ಕುಡಿಯಲು ಬಂದಿದ್ದ ಕಾಡಾನೆಯೊಂದು ನೀರಿನ ಪ್ರವಾಹಕ್ಕೆ ಸಿಲುಕಿ ದಡಕ್ಕೆ ಬರಲು ಪರದಾಡುತ್ತಿತ್ತು. ಆನೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ಆನೆಯನ್ನ ದಡಕ್ಕೆ ಕರೆತರುವ ಪ್ರಯತ್ನ ಮಾಡಿದ್ರು. ಈ ವೇಳೆ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗಿಳಿದಿದ್ದ ಬೋಟ್ ಮಗುಚಿತು. ಅದೃಷ್ಟವಶಾತ್ ಬೋಟ್ ನಲ್ಲಿದ್ದ ಎಲ್ಲಾ ಅರಣ್ಯ ಸಿಬ್ಬಂದಿ ಈಜಿ ದಡ ಸೇರಿದ್ದಾರೆ.

9. ದೊಡ್ಡಗೌಡರ ಮನೆಗೆ ‘ಚಿಕ್ಕ’ಗೌಡರ ಆಗಮನ..!

ಸ್ಯಾಂಡಲ್‌ವುಡ್ ಯುವರಾಜ,ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರೇವತಿ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. 2020ರ ಏಪ್ರಿಲ್ನಲ್ಲಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಇನ್ನು ನಿಖಿಲ್ ಗೆ ಸ್ಯಾಂಡಲ್ ವುಡ್ ಮತ್ತು ರಾಜಕೀಯ ಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ.

10. ಗೆಲುವಿನಿಂದ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದ ಕೆಕೆಆರ್

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿದೆ ಅಂತ ಕೋಲ್ಕತ್ತಾ ನೈಟ್ ರೈಡರ್ಸ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೇಳಿದ್ದಾರೆ.ಹಲವು ದಿನಗಳ ಬಳಿಕ ತಂಡ ಈ ರೀತಿ ಪ್ರದರ್ಶನ ನೀಡಿದ್ದು ಅತ್ಯಂತ ಸಂತೋಷ ತಂದಿದೆ. ಎರಡು ಆವೃತ್ತಿಗಳಲ್ಲಿ ಸತತವಾಗಿ ಪರಿಶ್ರಮ ವಹಿಸಿದ್ದ ನಮಗೆ ಈ ಬಾರಿ ವಿಜಯ ಒಲಿದಿದೆ ಎಂದಿದ್ದಾರೆ.ಪ್ರತಿಭಾನ್ವಿತ ಆಟಗಾರನ್ನೊಳಗೊಂಡಿರೋ ನಮ್ಮ ತಂಡದ ಅಭ್ಯಾಸ ಪಂದ್ಯದಲ್ಲಿ ಅಯ್ಯರ್ ಆಟ ಗಮನ ಸೆಳೆಯಿತು. ಅಯ್ಯರ್ ತಮ್ಮ ಎರಡನೇ ಪಂದ್ಯದ ಆತ್ಮವಿಶ್ವಾಸ ಶ್ಲಾಘನೀಯ ಅಂತ ಮಾರ್ಗನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss